Skip to content
Home » ಕನ್ನಡ » ಸುದ್ದಿ-ಸಮಾಚಾರ » ಸ್ವಾದಿ ಸಾಕ್ಷ್ಯ ಚಿತ್ರ ಬಿಡುಗಡೆ, ಯಾತ್ರಿ ನಿವಾಸ ಉದ್ಘಾಟನೆ

ಸ್ವಾದಿ ಸಾಕ್ಷ್ಯ ಚಿತ್ರ ಬಿಡುಗಡೆ, ಯಾತ್ರಿ ನಿವಾಸ ಉದ್ಘಾಟನೆ

    ಸ್ವಾದಿ ಜೈನಮಠದಲ್ಲಿ ಸ್ವಾದಿ ಸಾಕ್ಷ ಯಚಿತ್ರ ಸಿಡಿಯನ್ನು ಸ್ವಾಮಿಗಳು ಬಿಡುಗಡೆಗೊಳಿಸಿದರು.

    ಸ್ವಾದಿ ಜೈನಮಠದಲ್ಲಿ ಸ್ವಾದಿ ಸಾಕ್ಷ ಯಚಿತ್ರ ಸಿಡಿಯನ್ನು ಸ್ವಾಮಿಗಳು ಬಿಡುಗಡೆಗೊಳಿಸಿದರು.

    ಸ್ವಾದಿ (ಶಿರಸಿ), ಫೆಬ್ರವರಿ ೧೪, ೨೦೧೭:ಸ್ವಾದಿ ಸಾಕ್ಷ ್ಯಚಿತ್ರ ಹಾಗೂ ಯಾತ್ರಿ ನಿವಾಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮಗಳು ತಾಲೂಕಿನ ಸೋಂದಾ ದಿಗಂಬರ ಜೈನ ಮಠದಲ್ಲಿ ಸೋಮವಾರ ನಡೆದವು.

    ಮಠಾಧೀಶರಾದ ಶ್ರೀ ಭಟ್ಟಾಕಳಂಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಚತುರ್ಥ ಪಟ್ಟಾಭಿಷೇಕ ವರ್ದಂತಿ ಉತ್ಸವ ಪ್ರಯುಕ್ತ ಈ ಕಾರ್ಯಕ್ರಮಗಳು ಸೋಮವಾರ ಜೈನ ಮಠದ ಸಭಾಂಗಣದಲ್ಲಿ ನಡೆದವು.

    ಸಾನ್ನಿಧ್ಯವಹಿಸಿದ್ದ ಸ್ವಾಮೀಜಿ ಮಾತನಾಡಿ, ಸ್ವಾಮಿಗಳು, ಧರ್ಮದ ಕಡೆ ಹೆಚ್ಚು ಒಲವು ತೋರಿದಾಗ ಮಾತ್ರ ಜೀವನದಲ್ಲಿ ಸುಖ ಲಭ್ಯವಾಗುತ್ತದೆ ಎಂದರು.

    ಇತರರು ನೀಡಿದ ಕಷ್ಟ ನೆನೆಯದೆ, ಉಪಕಾರ ಸ್ಮರಣೆ ಮಾಡುತ್ತಿರಬೇಕು. ಸಿಟ್ಟು ಕಡಿಮೆ ಮಾಡಿಕೊಂಡು ಶಾಂತಚಿತ್ತರಾಗಿದ್ದರೆ ಜೀವನದ ಒಳ್ಳೆಯ ಸಂಗತಿಗಳನ್ನು ಮೆಲುಕು ಹಾಕಲು ಸಾಧ್ಯ. ವಿರೋಧ ಭಾವನೆಯು ಕ್ರೋಧಕ್ಕೆ ಕಾರಣ. ಕೋಪವು ಮಿತ್ರತ್ವವನ್ನು ನಾಶ ಮಾಡಿ ಶತ್ರುತ್ವ ಹೆಚ್ಚಿಸುತ್ತದೆ. ಮನಸ್ಸಿನ ಭಾವನೆಗಳು ಶುದ್ಧವಾಗಿದ್ದರೆ ಮಾತ್ರ ಜೀವನದ ಅಳಿವು-ಉಳಿವು ನಿಂತಿರುತ್ತದೆ ಎಂದು ವಿವರಿಸಿದರು.

    ಸ್ವಾದಿ ಕ್ಷೇತ್ರದ ಅಭಿವೃದ್ಧಿಯನ್ನು ನಾವು ಮಾಡಿಲ್ಲ. ಭಕ್ತರ ಶಕ್ತಿ ಒಂದಾಗಿಸಿದಾಗ ಸ್ವಾದಿ ಜೈನ ಮಠವು ಅಭಿವೃದ್ಧಿಯ ಪಥದತ್ತ ಸಾಗಿದೆ. ಸೋಂದಾ ಗಜಕೇಸರಿ ಪೀಠದ ಮಹತ್ವ ಅರಿಯಲು ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ ತಯಾರಿಸಲಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ವರ್ಧಂತ್ಯುತ್ಸವ ನಿಮಿತ್ತ ಜೈನ ಮಠದಲ್ಲಿ ಬಸದಿಗಳಲ್ಲಿ ಪಂಚಾಮೃತ ಪೂಜೆ, ಪೂರ್ವಾಚಾರ್ಯರ ನಿಶಿಧಿ ಮಂಟಪ ಪೂಜೆ, ಗಣಧರವಲಯ ಆರಾಧನೆ, ಶ್ರೀಗಳ ಗಜಕೇಸರಿ ಪೀಠಾರೋಹಣ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

    ಧಾರವಾಡದ ದತ್ತಾ ಡೋರ್ಲೆ, ಮಹಾವೀರ ದಾನೊಳ್ಳಿ, ಹುಬ್ಬಳ್ಳಿಯ ಪಿ.ಎಸ್‌ ಧರಣಿಪ್ಪನವರ, ಆರ್‌.ಟಿ ಅಣ್ಣಿಗೇರಿ, ಸುಭಾಷ ಹೊಸಮನಿ, ಬೆಳಗಾವಿಯ ಸನತಕುಮಾರ, ಆದಿನಾಥ ವಸವಾಡ, ಜೈನ ಸಮಾಜ ಅಧ್ಯಕ್ಷ ಸುನೀಲಕುಮಾರ, ಬೆಂಗಳೂರಿನ ಸುನಯ್‌ ಜೈನ್‌ ಮುಂತಾದವರು ಪಾಲ್ಗೊಂಡಿದ್ದರು. ವಜ್ರಕುಮಾರ್‌ ಸ್ವಾಗತಿಸಿದರು. ಬಿ.ಎಸ್‌. ಯಶೋಧರ ಇಂದ್ರ ನಿರೂಪಿಸಿದರು. – ಸುದ್ದಿ ಮತ್ತು ಚಿತ್ರಕೃಪೆ: ವಿಜಯಕರ್ನಾಟಕ

    error: Jain Heritage Centres - Celebrating Jain Heritage.....Globally!