Skip to content
Home » ಕನ್ನಡ » ಸುದ್ದಿ-ಸಮಾಚಾರ » 12ನೇ ಶತಮಾನಕ್ಕೆ ಸೇರಿದ ಶಾಸನೋಕ್ತ ಅರ್ಧ ಸಹಸ್ರಕೂಟ ವಿಗ್ರಹ ಬೆಳಗಾವಿಯಲ್ಲಿ ಪತ್ತೆ

12ನೇ ಶತಮಾನಕ್ಕೆ ಸೇರಿದ ಶಾಸನೋಕ್ತ ಅರ್ಧ ಸಹಸ್ರಕೂಟ ವಿಗ್ರಹ ಬೆಳಗಾವಿಯಲ್ಲಿ ಪತ್ತೆ

    ಬೆಳಗಾವಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಡಿಪೋ 2ರ ಕಾಂಪೌಂಡ್ ಗೋಡೆಯ ಪಾಯ ತೆಗೆಯುವ ಸಂದರ್ಭದಲ್ಲಿ 12ನೇ ಶತಮಾನಕ್ಕೆ ಸೇರಿದ ವಿಶಿಷ್ಟವಾದ ಅರ್ಧ ಸಹಸ್ರಕೂಟ ಜೈನ ವಿಗ್ರಹವು 12 ಫೆಬ್ರವರಿ 2020 ರಂದು ಪತ್ತೆಯಾಗಿದೆ. ವಿಗ್ರಹವನ್ನು ಬೆಳಗಾವಿಯ ಕೋಟೆಯೊಳಗಿರುವ ಕಮಲ ಬಸದಿಯ ಆವರಣಕ್ಕೆ ಸಾಗಿಸಲಾಗಿದೆ. ವಿಗ್ರಹದ ಮೇಲೆ ಶಾಸನವೊಂದು ಪತ್ತೆಯಾಗಿದ್ದು ಇದನ್ನು ಬೆಳಗಾವಿಯ ಮಾಹಿತಿ ತಂತ್ರಜ್ಞಾನ ತಜ್ಞ ಹಾಗೂ ಜೈನ ಪುರಾತತ್ತ್ವ ಉತ್ಸಾಹಿ ಬೆಳಗಾವಿಯ ಶ್ರೀ ಬ್ರಹ್ಮಾನಂದ ಶ್ರೀಕಾಂತ್ ಚಿಪ್ರೆ ಅವರು ಸಂಶೋಧಿಸಿ ಪ್ರಕಟಿಸಿದ್ದಾರೆ.

    ವಿಶಿಷ್ಟ ವಿಗ್ರಹ – ಗುಲಾಬಿ ಬಣ್ಣದ ಕಲ್ಲಿನಿಂದ ನಿರ್ಮಿಸಲಾದ ಈ ವಿಗ್ರಹದ ನಾಲ್ಕು ಬದಿಗಳಲ್ಲಿ ಖಡ್ಗಾಸನ ಅಥವಾ ಕಾಯೋತ್ಸರ್ಗ ಭಂಗಿಯಲ್ಲಿರುವ ತೀರ್ಥಂಕರ ವಿಗ್ರಹದ ಕೆತ್ತನೆಯನ್ನು ನಾವು ಕಾಣಬಹುದು. ನಾಲ್ಕು ಬದಿಯ ಎಲ್ಲ ತೀರ್ಥಂಕರರ ವಿಗ್ರಹಗಳನ್ನು ಎಣಿಸಿದರೆ ಅವು 504 ಆಗುವುವು. ಜೈನ ಸಿದ್ಧಾಂತದ ಪ್ರಕಾರ ಒಟ್ಟು 1008 ತೀರ್ಥಂಕರರ ವಿಗ್ರಹಗಳಿರುವ ಚತುರ್ಮುಖ ವಿಗ್ರಹವನ್ನು ಸಹಸ್ರಕೂಟ ಎನ್ನುತ್ತೇವೆ. ಆದರೆ ಈ ವಿಗ್ರಹದಲ್ಲಿ 504 ವಿಗ್ರಹಗಳಿರುವುದರಿಂದ ಇದನ್ನು ಅರ್ಧ ಸಹಸ್ರಕೂಟ ಎನ್ನಬಹುದು. ಕರ್ನಾಟಕದಲ್ಲಿ ಕಂಡು ಬರುವ ಬಹುತೇಕ ಎಲ್ಲ ಸಹಸ್ರಕೂಟ ವಿಗ್ರಹಗಳಲ್ಲಿ ತೀರ್ಥಂಕರರ ಶಿಲ್ಪವು ಕಾಯೋತ್ಸರ್ಗ ಭಂಗಿಯಲ್ಲಿದ್ದರೆ ಈ ವಿಗ್ರಹದಲ್ಲಿ ತೀರ್ಥಂಕರರ ಶಿಲ್ಪವು ಪದ್ಮಾಸನ ಭಂಗಿಯಲ್ಲಿದೆ. ಈ ಹಿನ್ನೆಲೆಯಿಂದಾಗಿಯೂ ಕೂಡ ಈ ವಿಗ್ರಹವು ಅತೀ ವಿಶಿಷ್ಟವೆನಿಸುತ್ತದೆ.

    ವಿಗ್ರಹವು 4′ 1″ ಎತ್ತರವಿದ್ದು ಅದರ ತಳಪಾಯದ ಸುತ್ತಳತೆಯು 9′ ಹಾಗೂ ಮೇಲ್ಭಾಗದ ಸುತ್ತಳತೆಯು 5′ ಇದೆ. ಪ್ರತಿಯೊಂದು ಭಾಗದಲ್ಲಿಯೂ ಕೂಡಾ 8 ಹಂತಗಳಿದ್ದು 126 ತೀರ್ಥಂಕರ ಶಿಲ್ಪಗಳನ್ನು ನಾವು ಕಾಣಬಹುದು.

    ವಿಗ್ರಹದ ಮೇಲಿರುವ ಶಾಸನ – ವಿಗ್ರಹದ ವಿಶಿಷ್ಟ ಸ್ವರೂಪದಿಂದ ಪ್ರಭಾವಿತರಾಗಿ ಶ್ರೀ ಬ್ರಹ್ಮಾನಂದ ಚಿಪ್ರೆ ಅವರು ವಿಗ್ರಹವನ್ನು ಸ್ವಚ್ಛಗೊಳಿಸಲು ಮುಂದಾದರು. ಈ ಸಂದರ್ಭದಲ್ಲಿ ವಿಗ್ರಹದ ಒಂದು ಭಾಗದಲ್ಲಿ ಶಾಸನವನ್ನು ಕಂಡರು. ಇದನ್ನು ಇನ್ನಷ್ಟು ಸ್ವಚ್ಛಗೊಳಿಸಿದಾಗ ವಿಗ್ರಹದ 8 ಹಂತಗಳನ್ನು ಬೇರ್ಪಡಿಸುವ ಪ್ರತಿಯೊಂದು ಪಟ್ಟಿಕೆಯಲ್ಲಿಯೂ ಹಾಗೂ ಮೇಲಿನ ಮತ್ತು ಕೆಳಗಿನ ಪಟ್ಟಿಕೆಗಳಲ್ಲಿಯೂ ಶಾಸನ ಕಂಡುಬಂದಿದೆ.

    ಶಾಸನದ ಪಾಠ – ಕುಂದಕುಂದಾನ್ವಯದ ಮೇಘಚಂದ್ರ ತ್ರೈವಿದ್ಯಾದೇವರ ಶಿಷ್ಯನಾದ ಹೂವಿನಬಾಗೆಯ ಬ್ರಹ್ಮದೇವನ ಮಗನಾದ ಕಂಬದೇವಣ ಎಂಬುವನು ತನಗಂಟಿದ ಕರ್ಮವನ್ನು ಕಳೆಯಲು ೫೦೦ ಪ್ರತಿಮೆಯನ್ನು ಮಾಡಿಸಿದ. ಈ ಪ್ರತಿಮೆಯನ್ನು ಪೂಜಿಸುವ ಭವ್ಯಕೋಟಿಯು ಶಾಶ್ವತ ಸುಖದಲ್ಲಿ ಇರುವರು. ಕಂಬದೇವಣನು ಈ ಪ್ರತಿಮೆಯನ್ನು ವೇಣುಗ್ರಾಮದ ಬಸದಿಯೊಂದಕೆ ನೀಡಿದ್ದಾನೆ.

    ಶಾಸನದಲ್ಲಿ ಹೆಸರಿಸಲಾದ ಹೂವಿನಬಾಗೆಯು ಇಂದಿನ ಬೆಳಗಾವಿ ಜಿಲ್ಲೆಯ ರಾಯಬಾಗವಾಗಿದ್ದು ಹಾಗೂ ವೇಣುಗ್ರಾಮವು ಇಂದಿನ ಬೆಳಗಾವಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಗ್ರಹವನ್ನು ರಾಯಬಾಗಕ್ಕೆ ಸೇರಿದ ಕಂಬ ದೇವಣ್ಣ ಬೆಳಗಾವಿಯ ಬಸದಿ ಯೊಂದಕ್ಕೆ ಮಾಡಿಸಿಕೊಟ್ಟರು ಎಂದು ನಿಶ್ಚಯಿಸಬಹುದು. ಶಾಸನದ ಲಿಪಿ ಸ್ವರೂಪದಿಂದ ಇದನ್ನು ಹನ್ನೆರಡನೇ ಶತಮಾನಕ್ಕೆ ಸೇರಿದ್ದೆಂದು ನಿಶ್ಚಯಿಸಬಹುದು.

    ಶಾಸನ ತಜ್ಞರಾದ ಹರಿಹರದ ಡಾ ರವಿಕುಮಾರ್ ಕೆ. ನವಲಗುಂದ ಅವರು ಶಾಸನವನ್ನು ಓದಿ ಬ್ರಹ್ಮಾನಂದ ಚಿಪ್ರೆ ಯವರಿಗೆ ಸಂಶೋಧನೆಯಲ್ಲಿ ಮಾರ್ಗದರ್ಶನವನ್ನು ನೀಡಿದ್ದಾರೆ.

    12ನೇ ಶತಮಾನಕ್ಕೆ ಸೇರಿದ ಶಾಸನೋಕ್ತ ಅರ್ಧ ಸಹಸ್ರಕೂಟ ವಿಗ್ರಹ ಬೆಳಗಾವಿಯಲ್ಲಿ ಪತ್ತೆ

    ಬೆಳಗಾವಿಯ ವಾಯುವ್ಯ ರ‍್ನಾಟಕ ರಸ್ತೆ ಸಾರಿಗೆ ಸಂಸ್ಥೆ ಡಿಪೋ 2ರ ಕಾಂಪೌಂಡ್ ಗೋಡೆಯ ಪಾಯ ತೆಗೆಯುವ ಸಂರ‍್ಭದಲ್ಲಿ 12ನೇ ಶತಮಾನಕ್ಕೆ ಸೇರಿದ ವಿಶಿಷ್ಟವಾದ ರ‍್ಧ ಸಹಸ್ರಕೂಟ ಜೈನ ವಿಗ್ರಹವು 12 ಫೆಬ್ರವರಿ 2020 ರಂದು ಪತ್ತೆಯಾಗಿದೆ. ವಿಗ್ರಹವನ್ನು ಬೆಳಗಾವಿಯ ಕೋಟೆಯೊಳಗಿರುವ ಕಮಲ ಬಸದಿಯ ಆವರಣಕ್ಕೆ ಸಾಗಿಸಲಾಗಿದೆ. ವಿಗ್ರಹದ ಮೇಲೆ ಶಾಸನವೊಂದು ಪತ್ತೆಯಾಗಿದ್ದು ಇದನ್ನು ಬೆಳಗಾವಿಯ ಮಾಹಿತಿ ತಂತ್ರಜ್ಞಾನ ತಜ್ಞ ಹಾಗೂ ಜೈನ ಪುರಾತತ್ತ್ವ ಉತ್ಸಾಹಿ ಬೆಳಗಾವಿಯ ಶ್ರೀ ಬ್ರಹ್ಮಾನಂದ ಶ್ರೀಕಾಂತ್ ಚಿಪ್ರೆ ಅವರು ಸಂಶೋಧಿಸಿ ಪ್ರಕಟಿಸಿದ್ದಾರೆ.

    ವಿಶಿಷ್ಟ ವಿಗ್ರಹ – ಗುಲಾಬಿ ಬಣ್ಣದ ಕಲ್ಲಿನಿಂದ ನರ‍್ಮಿಸಲಾದ ಈ ವಿಗ್ರಹದ ನಾಲ್ಕು ಬದಿಗಳಲ್ಲಿ ಖಡ್ಗಾಸನ ಅಥವಾ ಕಾಯೋತ್ರ‍್ಗ ಭಂಗಿಯಲ್ಲಿರುವ ತರ‍್ಥಂಕರ ವಿಗ್ರಹದ ಕೆತ್ತನೆಯನ್ನು ನಾವು ಕಾಣಬಹುದು. ನಾಲ್ಕು ಬದಿಯ ಎಲ್ಲ ತರ‍್ಥಂಕರರ ವಿಗ್ರಹಗಳನ್ನು ಎಣಿಸಿದರೆ ಅವು 504 ಆಗುವುವು. ಜೈನ ಸಿದ್ಧಾಂತದ ಪ್ರಕಾರ ಒಟ್ಟು 1008 ತರ‍್ಥಂಕರರ ವಿಗ್ರಹಗಳಿರುವ ಚತರ‍್ಮುಖ ವಿಗ್ರಹವನ್ನು ಸಹಸ್ರಕೂಟ ಎನ್ನುತ್ತೇವೆ. ಆದರೆ ಈ ವಿಗ್ರಹದಲ್ಲಿ 504 ವಿಗ್ರಹಗಳಿರುವುದರಿಂದ ಇದನ್ನು ರ‍್ಧ ಸಹಸ್ರಕೂಟ ಎನ್ನಬಹುದು. ರ‍್ನಾಟಕದಲ್ಲಿ ಕಂಡು ಬರುವ ಬಹುತೇಕ ಎಲ್ಲ ಸಹಸ್ರಕೂಟ ವಿಗ್ರಹಗಳಲ್ಲಿ ತರ‍್ಥಂಕರರ ಶಿಲ್ಪವು ಕಾಯೋತ್ರ‍್ಗ ಭಂಗಿಯಲ್ಲಿದ್ದರೆ ಈ ವಿಗ್ರಹದಲ್ಲಿ ತರ‍್ಥಂಕರರ ಶಿಲ್ಪವು ಪದ್ಮಾಸನ ಭಂಗಿಯಲ್ಲಿದೆ. ಈ ಹಿನ್ನೆಲೆಯಿಂದಾಗಿಯೂ ಕೂಡ ಈ ವಿಗ್ರಹವು ಅತೀ ವಿಶಿಷ್ಟವೆನಿಸುತ್ತದೆ.

    ವಿಗ್ರಹವು 4′ 1″ ಎತ್ತರವಿದ್ದು ಅದರ ತಳಪಾಯದ ಸುತ್ತಳತೆಯು 9′ ಹಾಗೂ ಮೇಲ್ಭಾಗದ ಸುತ್ತಳತೆಯು 5′ ಇದೆ. ಪ್ರತಿಯೊಂದು ಭಾಗದಲ್ಲಿಯೂ ಕೂಡಾ 8 ಹಂತಗಳಿದ್ದು 126 ತರ‍್ಥಂಕರ ಶಿಲ್ಪಗಳನ್ನು ನಾವು ಕಾಣಬಹುದು.

    ವಿಗ್ರಹದ ಮೇಲಿರುವ ಶಾಸನ – ವಿಗ್ರಹದ ವಿಶಿಷ್ಟ ಸ್ವರೂಪದಿಂದ ಪ್ರಭಾವಿತರಾಗಿ ಶ್ರೀ ಬ್ರಹ್ಮಾನಂದ ಚಿಪ್ರೆ ಅವರು ವಿಗ್ರಹವನ್ನು ಸ್ವಚ್ಛಗೊಳಿಸಲು ಮುಂದಾದರು. ಈ ಸಂರ‍್ಭದಲ್ಲಿ ವಿಗ್ರಹದ ಒಂದು ಭಾಗದಲ್ಲಿ ಶಾಸನವನ್ನು ಕಂಡರು. ಇದನ್ನು ಇನ್ನಷ್ಟು ಸ್ವಚ್ಛಗೊಳಿಸಿದಾಗ ವಿಗ್ರಹದ 8 ಹಂತಗಳನ್ನು ಬರ‍್ಪಡಿಸುವ ಪ್ರತಿಯೊಂದು ಪಟ್ಟಿಕೆಯಲ್ಲಿಯೂ ಹಾಗೂ ಮೇಲಿನ ಮತ್ತು ಕೆಳಗಿನ ಪಟ್ಟಿಕೆಗಳಲ್ಲಿಯೂ ಶಾಸನ ಕಂಡುಬಂದಿದೆ.

    ಶಾಸನದ ಪಾಠ – ಕುಂದಕುಂದಾನ್ವಯದ ಮೇಘಚಂದ್ರ ತ್ರೈವಿದ್ಯಾದೇವರ ಶಿಷ್ಯನಾದ ಹೂವಿನಬಾಗೆಯ ಬ್ರಹ್ಮದೇವನ ಮಗನಾದ ಕಂಬದೇವಣ ಎಂಬುವನು ತನಗಂಟಿದ ರ‍್ಮವನ್ನು ಕಳೆಯಲು ೫೦೦ ಪ್ರತಿಮೆಯನ್ನು ಮಾಡಿಸಿದ. ಈ ಪ್ರತಿಮೆಯನ್ನು ಪೂಜಿಸುವ ಭವ್ಯಕೋಟಿಯು ಶಾಶ್ವತ ಸುಖದಲ್ಲಿ ಇರುವರು. ಕಂಬದೇವಣನು ಈ ಪ್ರತಿಮೆಯನ್ನು ವೇಣುಗ್ರಾಮದ ಬಸದಿಯೊಂದಕೆ ನೀಡಿದ್ದಾನೆ.

    ಶಾಸನದಲ್ಲಿ ಹೆಸರಿಸಲಾದ ಹೂವಿನಬಾಗೆಯು ಇಂದಿನ ಬೆಳಗಾವಿ ಜಿಲ್ಲೆಯ ರಾಯಬಾಗವಾಗಿದ್ದು ಹಾಗೂ ವೇಣುಗ್ರಾಮವು ಇಂದಿನ ಬೆಳಗಾವಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಗ್ರಹವನ್ನು ರಾಯಬಾಗಕ್ಕೆ ಸೇರಿದ ಕಂಬ ದೇವಣ್ಣ ಬೆಳಗಾವಿಯ ಬಸದಿ ಯೊಂದಕ್ಕೆ ಮಾಡಿಸಿಕೊಟ್ಟರು ಎಂದು ನಿಶ್ಚಯಿಸಬಹುದು. ಶಾಸನದ ಲಿಪಿ ಸ್ವರೂಪದಿಂದ ಇದನ್ನು ಹನ್ನೆರಡನೇ ಶತಮಾನಕ್ಕೆ ಸೇರಿದ್ದೆಂದು ನಿಶ್ಚಯಿಸಬಹುದು.

    ಶಾಸನ ತಜ್ಞರಾದ ಹರಿಹರದ ಡಾ ರವಿಕುಮಾರ್ ಕೆ. ನವಲಗುಂದ ಅವರು ಶಾಸನವನ್ನು ಓದಿ ಬ್ರಹ್ಮಾನಂದ ಚಿಪ್ರೆ ಯವರಿಗೆ ಸಂಶೋಧನೆಯಲ್ಲಿ ಮಾರ್ಗದರ್ಶನವನ್ನು ನೀಡಿದ್ದಾರೆ.

    error: Jain Heritage Centres - Celebrating Jain Heritage.....Globally!