Jaina Voice

Pubished by: www.jainheritagecentres.com

News Editor: Nitin H.P.

Editor-in-Chief: Dr. H.A.Parshwanath

ಅಣುವ್ರತಗಳು
-ಡಾ.ಟಿ.ಆರ್.ಜೋಡಟ್ಟಿ

ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಒಂದಾಗಿರುವ ಜೈನ ಧರ್ಮವು ತನ್ನದೇ ಆದ ತತ್ವ-ಸಿದ್ಧಾಂತಗಳಿಂದ ಸರ್ವಜೀವಿಗಳೂ ಸುಖ-ಶಾಂತಿಯಿಂದ ಜೀವನವನ್ನು ಸಾಗಿಸುವಂತೆ ಮಾರ್ಗದರ್ಶನವನ್ನು ನೀಡುವುದು. ಅವುಗಳಲ್ಲಿ ಪ್ರಮುಕವಾದುದು ’ಅಣುವ್ರತ’ಗಳು. ಪ್ರಸ್ತುತ ಲೇಖನದಲ್ಲಿ ಡಾ.ಟಿ.ಆರ್.ಜೋಡಟ್ಟಿಯವರು ಇವುಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

ಅನೀತಿ - ಅತ್ಯಾಚಾರ; ಆತಂಕವಾದ - ಆತ್ಮಹತ್ಯೆ; ಭಯಾತ್ಪಾದನೆ - ಭೀಭತ್ಸ ಕೊಲೆ; ಮಂದಿರದಲ್ಲಿಯ ಭಕ್ತರ ಮೇಲೆ ಗುಂಡಿನ ದಾಳಿ; ಮಸೀದಿಯ ಎದುರು ವಾದ್ಯಗಳನ್ನು ನುಡಿಸಿದ್ದಕಾಗಿ ಕಲ್ಲು ತೂರಾಟ; ಚರ್ಚು ಬಾಗಿಲಿಗೆ ಬೆಂಕಿ; ಸಂಸತ್ ಮೇಲೆ ಭಯೋತ್ಪಾದಕರ ದಾಳಿ.

ಬೆಳಗಾಗುತ್ತಲೇ ಭಗವಂತನನ್ನು ಪ್ರಾರ್ಥಿಸಬೇಕೆನ್ನುವ ಜನಸಾಮಾನ್ಯರು ಪ್ರತಿನಿತ್ಯ ಕೇಳುತ್ತಿರುವ - ಓದುತ್ತಿರುವ ಸುದ್ದಿ ಸಮಾಚಾರಗಳು ಇಂದು ಎಲ್ಲ ವರ್ಗದವರ ಎಲ್ಲ ವಯೋಮಾನದವರ ಮನಸ್ಸನ್ನು ಘಾಸಿಗೊಳಿಸುತ್ತಿರುವವು. ಈ ರೀತಿಯ ಸಮಾಜ ವಿರೋಧಿ; ಧರ್ಮ ವಿರೋಧಿ ಚಟುವಟಿಕೆಗಳಿಗೆಲ್ಲ ಕೆಲವೇ ಕೆಲವು ವಿಕೃತ ಮನಸ್ಸುಗಳು ಕಾರಣವೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಜಗತ್ತಿನಾದ್ಯಂತವಿರುವ ಧರ್ಮಗಳಾವವು ಈ ಬಗೆಯಾದ ವಿಧ್ವಂಸಕ ಕೃತ್ಯಗಳಿಗೆ ಉತ್ತೇಜನವನ್ನು ಕೊಡುವುದಿಲ್ಲ. ಆದರೆ ಧರ್ಮಾಂಧರು-ಧನಾಂದರು-ಕನಕಾಂಧರು-ಕಾಮಾಂಧರು ಈ ಬಗೆಯಾದ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ಎಲ್ಲೆಡೆಗೂ ಅಶಾಂತಿಯನ್ನು ಉಂಟುಮಾಡುತ್ತಿರುವರು.

ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಒಂದಾಗಿರುವ ಜೈನ ಧರ್ಮವು ತನ್ನದೇ ಆದ ತತ್ವ-ಸಿದ್ಧಾಂತಗಳಿಂದ ಸರ್ವಜೀವಿಗಳೂ ಸುಖ-ಶಾಂತಿಯಿಂದ ಜೀವನವನ್ನು ಸಾಗಿಸುವಂತೆ ಮಾರ್ಗದರ್ಶನವನ್ನು ನೀಡುವುದು. ಅವುಗಳಲ್ಲಿ ಪ್ರಮುಖವಾದವುಗಳು - ಈ ವಿಶಯಕ್ಕೆ ಸಂಬಂಧ ಪಟ್ಟವುಗಳು ಅಂದರೆ ಐದು ಅಣುವ್ರತಗಳು: ೧.ಅಹಿಂಸೆ; ೨. ಸತ್ಯ; ೩.ಅಚೌರ್ಯ; ೪.ಬ್ರಹ್ಮಚರ್ಯ; ೫.ಪರಿಗ್ರಹ ಪರಮಾಣುವ್ರತ.

ಈ ವ್ರತಗಳ ನಿರೂಪಣೆಗಾಗಿ ಸಮಂತಭದ್ರಾಚಾರ್ಯರ ರತ್ನಕರಂಡಕ ಶ್ರಾವಕಾಚಾರದಿಂದ ಸೂತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ:

೧.ಅಹಿಂಸೆ: ಈ ತತ್ವವು ಜೈನಧರ್ಮವು ಜಗತ್ತಿಗೆ ಕೊಟ್ಟಿರುವ ವಿಶಿಷ್ಟ ಕೊಡುಗೆಯಾಗಿದೆ. ಇದು ಹಿಂಸೆಯಿಂದ ತಲ್ಲಣಗೊಳ್ಳುತ್ತಿರುವ ಇಂದಿನ ಜಗತ್ತಿನಲ್ಲಿ ಶಾಂತಿ ನೆಲೆಗೊಳ್ಳುವಂತೆ ಮಾಡುವ ಪ್ರಮುಖ ಸಾಧನವಾಗಿದೆ.

ಸಂಕಲ್ಪಾತ್ಕೃತಕಾರಿತಮನನಾದ್ಯೋಗತ್ರಯಸ್ಯಚರಸತ್ವಾನ್|
ನಹಿನಸ್ತಿಯತ್ತದಾದು; ಸ್ಥೂಲವಧಾಧ್ವಿರಮಣಂ ನಿಪುಣ್ಃ||೫೩||
ಮನ, ವಚನ, ಕಾಯದಿಂದ - ಕೃತಕಾರಿಕ ಅನುಮೋದನೆಯಿಂದ ಯಾವುದೇ ಪ್ರಾಣಿಗಳನ್ನು ಯಾವುದೇ ರೀತಿಯಿಂದ ಹಿಂಸಿಸದೇ ಇರುವುದೇ ಅಹಿಂಸೆಯಾಗಿದೆ.

ಈ ಅಹಿಂಸೆಯ ಕುರಿತು ವಿವರಿಸುವಾಗ ಗೃಹಸ್ಥನ ದೈನಂದಿನ ಜೀವನವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ಉಂಟಾಗುವ ಹಿಂಸೆಯನ್ನು ಆರಂಭ ಹಿಂಸೆ, ಉದ್ಯೋಗ ಹಿಂಸೆ, ವಿರೋಧಿ ಹಿಂಸೆ, ಸಂಕಲ್ಪ ಹಿಂಸೆ ಎಂದು ವಿಭಜಿಸಿರುವರು. ಒಕ್ಕಲುತನ, ವ್ಯಾಪಾರ ಉದ್ಯೋಗಗಳಲ್ಲಿ ಆಗುವ ಸೂಕ್ಷ್ಮಜೀವಿಗಳ ಹಿಂಸೆಯು ಅನಿವಾರ್ಯವಾದುದಾಗಿದೆ.ಆದರೆ ಇಲ್ಲಿ ಕ್ರುಷಿ ಅತವಾ ಉದ್ಯೋಗ ಮಾಡುವವನ ಉದ್ದೇಶವು ಬೇರೆ ಜೀವಿಗಳಿಗೆ ಸಹಾಯ ಮಾಡುವಂತಹುದಾಗಿರುವುದು.ಆದ್ದರಿಂದ ಈ ಹಿಂಸೆಯು ಗೃಹಸ್ತನಿಗೆ ಕ್ಷಮಾರ್ಹವೆಂದು ಹೇಳಲಾಗಿದೆ.

"ವಿರೋಧಿ ಹಿಂಸೆ"ಯು ಯಾವಾಗಲೂ ನಿಷಿದ್ದವಾಗಿದೆ.ಇಲ್ಲಿ ಪ್ರತ್ಯಕ್ಷವಾಗಿ ಹಿಂಸೆ ನಡೆಯದೇ ಇದ್ದರೂ ಬೇರೊಬ್ಬರನ್ನು ಹಿಂಸಿಸಬೇಕೆಂದು ಸಂಕಲ್ಪಮಾಡುವುದು, ಮನಸ್ಸಿನಲ್ಲಿ ಯೋಚಿಸುವುದು ಸಂಪೂರ್ಣ ನಿಷಿದ್ಧವಾಗಿದೆ.

ಈ ರೀತಿಯಾಗಿ ಅಹಿಂಸಾತತ್ತ್ವವನ್ನು ಗೃಹಸ್ಥರಿಗೆ ಸೂಕ್ತವಾಗುವ ರೀತಿಯಲ್ಲಿ ನಿರೂಪಿಸಲಾಗಿದೆ.


Editorial - Jaina Voice is Back...

Heritage Highlight:
Kanakagiri - The only Siddakshetra in south India

Focus: Recreating Shravanabelagola's Bahubali...

ARTICLES

Father of American Jainism - Virchand Raghavji Gandhi - Pankaz Hingarh

Kamandal - Jain Emblem of Saving Ecology - Gaurav Jain

Kannada - Anuvratagalu - Dr.T.R.Jodatti - ಅಣುವ್ರತಗಳು -
ಡಾ.ಟಿ.ಆರ್.ಜೋಡಟ್ಟಿ


NEWS CORNER

News Updates
Awards
Panchakalyanas
Pooja Mahotsava
Forthcoming Events
10th All India Jain Students Felicitation Function


Latest Updates on JHC

Jainism in India - Karnataka - Shravanabelagola
Jainism in India - Uttar Pradesh - Hastinapur
Photo Gallery - Karnataka - Shravanabelagola - Indragiri, Chandragiri, Shravanabelagola Town.
- Manchenahalli,
- Murukanahalli
.

Photo Gallery - Uttar Pradesh - Hastinapur - Badamandir Complex, Nishiyaji, Kailash Parvat Mandir, Jambudweep Complex, Swethambar Temples.


Subscribe/Unsubscribe to the Magazine.

JAINA VOICE Archives

To send us Articles, News Updates and donations please get in touch with:
Nitin H.P.
nitin@jainheritagecentres.com
91 9880818869

Have Some thing to say about this issue?
Please write to us at:
info@jainheritagecentres.com

೨.ಸತ್ಯ: ಈ ಅಣುವ್ರತದ ಕುರಿತು ಈ ರೀತಿ ಹೇಳಿರುವರು-

ಸ್ತೂಲಮಲೀಕಂ ವದತಿ ನ ಪರಾನ್ ವಾದಯತಿ ಸತ್ಯಮಪಿ ವಿಪದೇ |
ಯತ್ವದ್ವಂತಿ ಸಂತಃ ಸ್ತೂಲವಮೃಷಾವದ ವೈರಣಮ್ ||೫೫||

ಸ್ಥೂಲವಾಗಿ ಅಸತ್ಯವನ್ನು ಮಾತನಾಡದೇ ಇರುವುದು, ಬೇರೆಯವರು ಅಸತ್ಯವನ್ನು ಮಾತನಾಡದಂತೆ ಮಾಡುವುದು, ತನಗೂ - ಬೇರೆಯವರಿಗೂ ಸಂಕಟವು ಒದಗುವಂತಹ ಸಂದರ್ಭದಲ್ಲಿ ಸತ್ಯವನ್ನು ಸಹ ಮಾತನಾಡದೆ; ಬೇರೆಯವರೂ ಸಹ ಮಾತನಾಡದೇ ಇರುವಂತೆ ಮಾಡುವುದು ಸತ್ಯಾಣುವ್ರತವೆಂದು ಹೇಳುವರು.

ಬಯ್ಯುವುದು, ನಿಂದಿಸುವುದು, ಗೌಪ್ಯವಾಗಿ ಇಡಬೇಕಾಗಿರುವ ವಿಷಯಗಳನ್ನು ಬಹಿರಂಗಪಡಿಸುವುದು, ಚಾಡಿ ಹೇಳುವುದು, ಮೋಸದ ಬರಹಗಳನ್ನು ಸಿದ್ದಪಡಿಸುವುದು, ಸುಳ್ಳು ಕಾಗದಪತ್ರಗಳನ್ನು ನಿರ್ಮಾಣ ಮಾಡುವುದು ಮುಂತಾದವುಗಳೆಲ್ಲ ಈ ವ್ರತದ ಅತಿಚಾರಗಳಾಗಿವೆ.

೩.ಅಚೌರ್ಯ: ಈ ಅಣುವ್ರತದ ಕುರಿತು ಈ ರೀತಿ ಹೇಳಿರುವರು-

ನಿಹಿತಂ ವಾ ಪತಿತಂ ವಾ ಸು ವಿಸ್ತೃತಂ ವಾ ಪರಸಂ ವಿನೃಷ್ಟಂ|
ನ ಹರತಿ ಯನ್ನ ಚ ದತ್ತೇ ತದಕೃಶಚೌರ್ಯಾದುಪರಮಣಮ್||೫೭||

ಬೇರೆಯವರು ಇಟ್ಟುದನ್ನು, ತಾನಾಗಿಯೇ ಬಿದ್ದುದನ್ನು, ಬೇರೆಯವರು ಮರೆತು ಹೋಗಿರುವಂತಹುದನ್ನು ತೆಗೆದುಕೊಳ್ಳದೇ ಇರುವುದು, ಪರರ ವಸ್ತುವನ್ನು-ಧನವನ್ನು ಕಳ್ಳತನ ಮಾಡದೇ ಇರುವುದು, ಆ ವಸ್ತುವಿಗೆ ಸಂಬಂಧ ಇಲ್ಲದೇ ಇರುವವರು ಅದನ್ನು ತೆಗೆದುಕೊಳ್ಳದೇ ಇರುವಂತೆ ಮಾಡುವುದು ಅಚೌರ್ಯ ವ್ರತವಾಗಿದೆ.

ಕಳ್ಳರಿಗೆ ಪ್ರಚೋದನೆ ನೀಡುವುದು, ಪ್ರೋತ್ಸಾಹಿಸುವುದು, ಕಳ್ಳರನ್ನು ಪ್ರಶಂಸಿಸುವುದು, ಕಳ್ಳರಿಗೆ ಸಹಾಯ ಮಾಡುವುದು, ಕಳವಿನ ವಸ್ತುಗಳನ್ನು ಕೊಂಡುಕೊಳ್ಳುವುದು ಮುಂತಾದವು ಅಚೌರ್ಯ ವ್ರತದ ಅತಿಚಾರಗಳಾಗಿವೆ.

೪.ಬ್ರಹ್ಮಚರ್ಯ: ಈ ಅಣುವ್ರತದ ಕುರಿತು ಈ ರೀತಿ ಹೇಳಿರುವರು-

ನ ಚ ಪರದಾರಾನ್ ಗಚ್ಛತಿ ನ ಪರಾನ್ ಗಮಯತಿ ಚಪಾಪಭೀತೇರ್ಯತ್|
ಸಾ ಪರದಾರ ನಿವೃತ್ತಿಃ ಸ್ವದಾರ ಸಂತೋಷನಾಮಾಡಿ||೫೯||

ಪರಸ್ತೀಯನ್ನು ಭೋಗಿಸದೇ ಇರುವುದು, ಬೇರೆಯವರೂ ಸಹ ಈ ರೀತಿ ಮಾಡದಂತೆ ತಡೆಯುವುದು, ಪರಸ್ತ್ರೀತ್ಯಾಗ ಮಾಡುವುದು ಹಾಗೂ ಸ್ವಸ್ತ್ರೀಯಲ್ಲಿಯೇ ಸಂತೋಷಪಡುವುದು ಬ್ರಹ್ಮಚರ್ಯ ವ್ರತವಾಗಿದೆ.

ಇಂದಿನ ಸಾಮಾಜಿಕ ಸಮಸ್ಯೆಗಳಲ್ಲಿ ಬೃಹತ್ತಾಗಿ ಬೆಳೆಯುತ್ತಿರುವ ಲೈಂಗಿಕ ಅಪರಾದಗಳನ್ನು ತಡೆಯುವಲ್ಲಿ ಈ ವ್ರತವು ಬಹಳ ಸಹಕಾರಿಯಾಗಿರುವುದು. ಎಳೆಯ ವಯಸ್ಸಿನಲ್ಲಿ ಹಾಗೂ ಹದಿಹರೆಯದಲ್ಲಿ ಹಿತೋಪದೇಶಗಳ ಮೂಲಕ ಬ್ರಹ್ಮಚರ್ಯ ವ್ರತದ ಮಹತ್ವವನ್ನು ಹೇಳಿಕೊಟ್ಟಲ್ಲಿ; ಇಂದು ಜಾಗತಿಕ ಮಟ್ಟದಲ್ಲಿ ಲೈಂಗಿಕ ಅಪರಾದಗಳನ್ನು; ಲೈಂಗಿಕ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಲು ಖರ್ಚು ಮಾಡುತ್ತಿರುನ ಹಣವನ್ನು ಉಳಿಸಿ ಫಲಪ್ರದವಾದ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಇದೂ ಅಲ್ಲದೇ ಯುವ ಜನಾಂಗವನ್ನು ಸನ್ಮಾರ್ಗಕ್ಕೆ ತರಲು ಸಹಾಯವಾಗುವುದು. ಈ ದಿಸೆಯಲ್ಲಿ ಹಲವು ಋಷಿ-ಮುನಿಗಳು, ಮಠ-ಮಠಾಧೀಶರು, ಸಮಾಜ ಸುದಾರಕರು ತಾವು ಆಯ್ದುಕೊಂಡ ಕ್ಷೇತ್ರದ ಜನರಿಗೆ ಉಪದೇಶಿಸಿ ಅವರು ಸತ್ಕಾರ್ಯದಲ್ಲಿ ತೊಡಗುವಂತೆ ಮಾಡುತ್ತಿರುವುದು ಪ್ರಶಂಸನೀಯವಾಗಿದೆ. ಈ ಬ್ರಹ್ಮಚರ್ಯ ವ್ರತವು ಮನಸ್ಸಿನಲ್ಲಿ ಬ್ರಹ್ಮಚೈತನ್ಯವನ್ನು ತುಂಬಲು ಸಹಕಾರಿಯಾಗಿದೆ.

೫. ಪರಿಗ್ರಹ ಪರಮಾಣ: ಈ ಅಣುವ್ರತದ ಕುರಿತು ಈ ರೀತಿ ಹೇಳಿರುವರು –

ಧನಧಾನ್ಯಾದಿ ಗ್ರಂಥಂ ಪರಿಮಾಯ ತತೋಧಿಕೇಷು ನಿಸ್ಪ್ರೂಹತಾ |
ಪರಿಮಿತಪರಿಗ್ರಹಃ ಸ್ಯಾದಿಚ್ಛಾಪರಿಮಾಣನಾಮಾಪಿ ||೬೧||

ಧನಧಾನ್ಯ ಮೊದಲಾದ ಪರಿಗ್ರಹಗಳು ಪ್ರಮಾಣವನ್ನು ನಿರ್ಧರಿಸಿಕೊಂಡು ಅದಕ್ಕಿಂತ ಹೆಚ್ಚಿನದರಲ್ಲಿ ಇಚ್ಛೆಯನ್ನು ಇಡದೇ ಇರುವುದಕ್ಕೆ ಪರಿಗ್ರಹ ಪರಿಣಾಮ ವ್ರತವೆನ್ನುವರು.


ನಮ್ಮ ಆಸೆ-ಆಕಾಂಕ್ಷೆಗಳು ಅಪರಿಮಿತವಾಗಿವೆ. ಧನ-ಕನಕವನ್ನು ಗಳಿಸಿದಷ್ಟು ಮತ್ತೂ ಗಳಿಸಬೇಕೆಂದು; ಅಶಾಂತಿಯ ಆಶಾಗೋಪುರದಲ್ಲಿ ಸಾಗುವ ಅಜ್ಞಾನಿಗಳಾಗಿರುವ ನಮಗೆ ಪರಿಗ್ರಹ ಪರಮಾಣುವ್ರತವು ಪರಿಮಿತಿಯ ಅಭ್ಯಾಸವನ್ನು ತಿಳಿಸಿಕೊಡುವುದು. “ಅಕ್ರಮ ದಾಸ್ತಾನು-ಪೊಲೀಸರ ದಾಳಿ” ಎಂಬಂತಹ ಸುದ್ದಿ ಸಮಾಚಾರಗಳು ಕಡಿಮೆಯಾಗುವುವು. ಆಸೆಯನ್ನು ನಿಯಂತ್ರಿಸಲು “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ನಮ್ಮ ಜನಪದರ ಜಾಣ ನುಡಿಗೆ ಮೌಲ್ಯ ತಂದುಕೊಡುವುದು.

ಇಲ್ಲಿರುವ ಐದೂ ಅಣುವ್ರತಗಳು ಗೃಹಸ್ಥರ ಸರಳ-ಸುಗಮ ಜೀವನಕ್ಕೆ ಸಹಕಾರಿಯಾಗಿವೆ.

ಎಲ್ಲೆಡೆಯೂ ನಡೆಯುತ್ತಿರುವ ಹಿಂಸೆಯನ್ನು ತಡೆದು ಶಾಂತಿ ನೆಲೆಸುವಂತೆ ಮಾಡಲು; ಅಸತ್ಯದಿಂದಾಗುತ್ತಿರುವ ಸುಳ್ಳು ವ್ಯಾಜ್ಯಗಳ ಪ್ರಮಾಣವು ಸತ್ಯವ್ರತದಿಂದಾಗಿ ಸರಿದೂರವಾಗಲು; ಕಳ್ಳರ-ದರೋಡೆಗಾರರ ಉಪಟಳವನ್ನು ದೂರಮಾಡಿ ನೆಮ್ಮದಿಯ ಜೀವನವನ್ನು ಸಾಗಿಸಲು; ಬ್ರಹ್ಮಚರ್ಯ ವ್ರತದಿಂದ ಯುವಜನತೆಯನ್ನು ಸನ್ಮಾರ್ಗದಲ್ಲಿ ನಡೆಸಲು; ಪರಿಗ್ರಹ ಪರಮಾಣು ವ್ರತದಿಂದ ಯಾವುದೇ ಸಾಮಗ್ರಿಯ ಪೂರೈಕೆಯಲ್ಲಿ ಕೊರತೆಯುಂಟಾಗದಂತೆ ಮಾಡಲು ಈ ಅಣುವ್ರತಗಳು ಸಹಕಾರಿಯಾಗಿವೆ.

ಇಂದಿನ ಪರಿಸ್ಥಿತಿಯಲ್ಲಿ; ಜಾಗತಿಕ ಮಟ್ಟದಲ್ಲಿ ನೈತಿಕವಾಗಿ ಸ್ಥಿರಗೊಳ್ಳಲು; ಸಚ್ಛಾರಿತ್ರದ ನಾಗರಿಕರನ್ನು ಬೆಳೆಸಲು ಈ ಅಣುವ್ರತಗಳು ಸಹಕಾರಿಯಾಗಿವೆ.

ಪ್ರಾಗೈತಿಹಾಸಿಕವಾಗಿರುವ ಈ ಜೈನಧರ್ಮದ ತತ್ವಗಳು ಚಿರಕಾಲ ಸ್ಥಾಯಿಯಾಗಿರುವವು. ಈ ದಿಸೆಯಲ್ಲಿ ಜೈನ ಧರ್ಮವು ಇಂದಿಗೂ ಪ್ರಸ್ತುತವಾಗಿರುವುದು.

******

ಗ್ರಂಥಋಣ:
ಅಣ್ಣಾರಾಯ ಅಪ್ಪಣ್ಣ ಮಿರ್ಜಿ (ಅನು): “ಸಮಂತಭದ್ರ ವಿರಚಿತ ರತ್ನಕರಂಡಕ ಶ್ರಾವಕಾಚಾರಾ"

ಲೇಖಕರು ನವೋದಯ ಶಾಲೆಯ ನಿವೃತ್ತ ಶಿಕ್ಷಕರಾಗಿದ್ದು, ಕನ್ನಡದ ಪ್ರಖ್ಯಾತ ಜೈನ ವಿದ್ವಾಂಸರು. ಇವರು ರಾಷ್ಟ್ರಸಂತ ಏಲಾಚಾರ್ಯ ೧೦೮ ಮುನಿ ಶ್ರೀ ವಿದ್ಯಾನಂದ ಮಹಾರಾಜರ ’ಜೀವನ ಸಾಧನೆ’ಯ ಕುರಿತು ಮಂಡಿಸಿದ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.

The writer, Dr.T.R.Jodatti is a retired teacher from Navodaya school. He is a well know Jaina scholar in Kannada and has been conferred the doctoral degree for his work on the 'Life and Achievements of Rashtrasantha Ealacharya 108 Muni Sri Vidyanandaji Maharaj'.


We Value your feedback, suggestions, comments or ideas for future issues. Write to us here.

Copyrightę 2002-09 www.jainheritagecentres.com. All Rights Reserved.