ಅಮೂಢದೃಷ್ಟಿಯ ರೇವತಿ

ದಕ್ಷಿಣ ಮಧುರೆಯಲ್ಲಿ ಮುನಿಗುಪ್ತರೆಂಬ ಮುನಿಗಳಿದ್ದರು. ಅವರಲ್ಲಿ ಚಂದ್ರಾಂಭನೆಂಬ ಮುನಿದೀಕ್ಷೆಯನ್ನು ಅಪೇಕ್ಷಿಸಿದ. ’ಎಲ್ಲ ಪರಿಗ್ರಹಗಳನ್ನು ತ್ಯಜಿಸು’ ಎಂದರು ಗುರುಗಳು. ಆತ ಎಲ್ಲವನ್ನು ತೊರೆದ. ಆದರೆ ವಿದ್ಯಾಧರ ವಿದ್ಯೆಗಳನ್ನು ತೊರೆಯದಾದ. ಆಗ ಗುರುಗಳು ನಿನಗೆ ಮುನಿದೀಕ್ಷೆ ಸಲ್ಲದು, ಬ್ರಹ್ಮಚಾರಿಯಾಗಿರು ಎಂದರು. ಆ ಬ್ರಹ್ಮಚಾರಿ ಉತ್ತರ ಮಧುರೆಅ ಜಿನಾಲಯಗಳನ್ನು ದರ್ಶನ ಮಾಡುವ ಆಸೆಯಿಂದ ಗುರುಗಳ ಅನುಮತಿ ಪಡೆದ. ಅವರು ಅನಿಮತಿ ನೀಡುತ್ತಾ, ’ಅಲ್ಲಿರುವ ಅಮೂಢದೃಷ್ಟಿಯ ಉತ್ತಮ ಶ್ರಾವಕಿ ರೇವತಿ ಮಹಾದೇವಿಗೆ ನಮ್ಮ ಆಶೀರ್ವಾದ ತಿಳಿಸಿ’ ಎಂದರು. ’ಆಕೆಯಲ್ಲೇನು ವಿಶೇಷತೆ, ಆಕೆಯನ್ನು ಪರೀಕ್ಷಿಸ ಬೇಕು’ ಎಂದುಕೊಂಡ. […]

error: Jain Heritage Centres - Celebrating Jain Heritage.....Globally!