‘ವಡ್ಡಾರಾಧನೆ’ ಹೆಸರು: ಒಂದು ಹೊಸ ವಿಚಾರ

‘ವಡ್ಡಾರಾಧನೆ’ ಹೆಸರಿನ ಕುರಿತಂತೆ ಹೊಸ ಅಂಶವೊಂದು ಅಧ್ಯಯನದಲ್ಲಿ ಕಂಡುಬಂದಿದೆ. ಇದು ಆ ಹೆಸರಿನ ಒಗಟನ್ನು ಒಡೆಯುವ ಸರಿಯಾದ ಕೀಲಿಕೈ ಎನ್ನುವಂತಿದೆ. ಕನ್ನಡ ಸಾಹಿತ್ಯದ ಅಗ್ಗಳಿಕೆಯ ಕೃತಿಗಳಲ್ಲಿ ‘ವಡ್ಡಾರಾಧನೆ’ಯೂ ಒಂದು. ಅದು ಗದ್ಯಕೃತಿಯಾದರೂ ಕಾವ್ಯ ಎಂಬಷ್ಟರ ಮಟ್ಟಿಗೆ ಸಾಹಿತ್ಯಪ್ರೇಮಿಗಳ ಮನಸೆಳೆದಿರುವಂಥ ವಿಶಿಷ್ಟ ಕೃತಿ. 9ನೆಯ ಶತಮಾನದ ಶ್ರೀವಿಜಯ ‘ಕವಿರಾಜಮಾರ್ಗ’ದಲ್ಲಿ ತನ್ನ ಕಾಲದವರೆಗಿನ ಕನ್ನಡದ ಹೆಸರಾಂತ ಪದ್ಯಕವಿಗಳನ್ನೂ ಗದ್ಯಕವಿಗಳನ್ನೂ ಹೆಸರಿಸಿದ್ದಾನೆ. ವಿಮಲ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮುಂತಾದವರು ಆ ಕಾಲಕ್ಕೆ ಗಣ್ಯ ಗದ್ಯಕವಿಗಳೆಂದು ಅವನ ಹೇಳಿಕೆ. ಆದರೆ, ಅವರಾರ […]

ಸಲ್ಲೇಖನ ವ್ರತವನ್ನಾಚರಿಸುತ್ತಿರುವ ಜೈನ ಮುನಿ ಯೊಬ್ಬರ ಚಿತ್ರ.

ಸಲ್ಲೇಖನ ಮರಣವು ಅಮಾನವೀಯ ಆಚರಣೆಯೇ?

– ಲೇಖಕರು: ಷ. ಶೆಟ್ಟರ್ (ಕೃಪೆ: ಪ್ರಜಾವಾಣಿ) ಆಧುನಿಕ ಸಂವಿಧಾನದೊಡನೆ ಅನಾದಿ ಧಾರ್ಮಿಕ ಸಂಪ್ರದಾಯದ ಘರ್ಷಣೆ – ಜೈನ ಸಮುದಾಯದ ‘ಸಲ್ಲೇಖನ ವ್ರತ’ದ ಆಚರಣೆಯನ್ನು ರಾಜಸ್ತಾನ ಹೈಕೋರ್ಟ್‌ ನಿಷೇಧಿಸಿದೆ. ಸಲ್ಲೇಖನ ವ್ರತ ಕಾನೂನುಬಾಹಿರ, ಇದು ಶಿಕ್ಷಾರ್ಹ ಅಪರಾಧ ಎನ್ನುವುದು ಕೋರ್ಟ್‌ ಅಭಿಪ್ರಾಯ. ಆದರೆ, ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ‘ಸಲ್ಲೇಖನ’ ವ್ರತದ ಆಚರಣೆಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ರಾಜ್ಯಾಂಗಗಳು ಗೌರವದಿಂದ ಕಂಡಿವೆ. ಮರಣ ಸಂಹಿತೆ ಜೈನಸಿದ್ಧಾಂತದಲ್ಲಿ ‘ಆತ್ಮಹತ್ಯೆ’ಯನ್ನು ಸಂಕೇತಿಸುವ ಪದವಿಲ್ಲ, ಆದರೆ ದೇಹತ್ಯಾಗವನ್ನು ಗುರುತಿಸುವ […]

error: Jain Heritage Centres - Celebrating Jain Heritage.....Globally!