ಜೈನ ಮಹಾಕಾವ್ಯ ಡಿಸೆಂಬರ್‌ನಲ್ಲಿ ಬಿಡುಗಡೆ: ಮೊಯ್ಲಿ

ಹಾಸನ, ಜನವರಿ ೩೦, ೨೦೧೭: ಜೈನ ಕಾಶಿಯೆಂದೇ ಹೆಸರಾಗಿರುವ ಶ್ರವಣಬೆಳಗೊಳದ ಬಗ್ಗೆ ಈಗಾಗಲೇ ನಾನು ಮಹಾಕಾವ್ಯ ರಚಿಸಿದ್ದು, ಡಿಸೆಂಬರ್‌ ವೇಳೆಗೆ ಈ ಕಾವ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಂ. ವೀರಪ್ಪಮೊಯ್ಲಿ ಹೇಳಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ”ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲು ಹಾಸನ ಜಿಲ್ಲೆಯಲ್ಲಿ ದೊರೆತ ಹಲ್ಮಿಡಿ ಶಾಸನವೇ […]

ದೇಶದ ಅಭಿವೃದ್ಧಿಗೆ ಜೈನರ ಕೊಡುಗೆ ಅನನ್ಯ

ಜೈನ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದರೂ ದೇಶದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು…ಕನಕಗಿರಿ ಅತಿಶಯ ಮಹೋತ್ಸವದಲ್ಲಿ ಸಂಸದ ಆರ್‌. ಧ್ರುವನಾರಾಯಣ ಅಭಿಮತ ಕನಕಗಿರಿ(ಮಹರ್ಷಿ ಪೂಜ್ಯಪಾದ ಸಭಾ ಮಂಟಪ), ಜನವರಿ ೩೦, ೨೦೧೭: ‘ಜೈನ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದರೂ ದೇಶದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು’ ಎಂದು ಸಂಸದ ಆರ್‌. ಧ್ರುವನಾರಾಯಣ ಹೇಳಿದರು. ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿ ಭಾನುವಾರ ಕನಕಗಿರಿ ಅತಿಶಯ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಭಾರತದಲ್ಲಿ […]

ಮಸ್ತಕಾಭಿಷೇಕದ ಯಶಸ್ಸಿಗೆ ನೆರವು ಒದಗಿಸಲು ಸಿದ್ಧ: ಎ.ಮಂಜು

ಹಾಸನ, ಜನವರಿ ೨೭, ೨೦೧೭: ಶ್ರವಣಬೆಳಗೊಳ ಮಹಾ ಮಸ್ತಕಾಭಿಷೇಕದ ಸಂಪೂರ್ಣ ಯಶಸ್ಸಿಗೆ ಸರಕಾರ ಮತ್ತು ಜಿಲ್ಲಾಡಳಿತ ಎಲ್ಲಾ ರೀತಿಯ ನೆರವನ್ನು ಒದಗಿಸಲು ಸಿದ್ಧ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯ ಮೊದಲನೆ ಮಹಡಿಯಲ್ಲಿ ಮಹಾಮಸ್ತಕಾಭಿಷೇಕದ ಪೂರ್ವ ತಯಾರಿ, ನಿರಂತರ ನಿಗಾವಹಿಸಲು ತೆರೆಯಲಾಗಿರುವ ಕಚೇರಿ ಉದ್ಘಾಟಿಸಿ ಮಾತನಾಡಿದರು. ಮಹಾಮಸ್ತಕಾಭಿಷೇಕ ದೇಶದಲ್ಲಿ ನಡೆಯುತ್ತಿರುವ ಅಪರೂಪದ ಘಟನೆ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಹೊಣೆಗಾರಿಕೆ ಸರಕಾರ, ಎಲ್ಲ […]

ರತ್ನಾಕರವರ್ಣಿಯ ಕೃತಿ ಪೂಜಿಸಿ: ಮೂಡಬಿದಿರೆ ಶ್ರೀ

ಬೆಂಗಳೂರು, ಜನವರಿ ೨೭, ೨೦೧೭: ಜೈನ ಸಮುದಾಯದವರು ಮಹಾಕವಿ ರತ್ನಾಕರವರ್ಣಿಯ ಮೂರ್ತಿಯನ್ನು ಪೂಜೆ ಮಾಡುವ ಬದಲು ಆತನ ಕೃತಿ ಪೂಜಿಸಬೇಕು ಎಂದು ಮೂಡ ಬಿದಿರೆಯ ಜೈನಮಠದ ಭಟ್ಟಾರಕ ಚಾರುಕೀರ್ತಿಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ. ನಗರದ ಬಸವನಗುಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟ ಸಂಸ್ಥೆ ಹಮ್ಮಿಕೊಂಡಿದ್ದ 31ನೇ ವಾರ್ಷಿ ಕೋತ್ಸವದಲ್ಲಿ ಪ್ರಸಿದ್ಧ ಜೈನ ಸಾಹಿತಿ ಎಸ್‌. ವಿಮಲಾ ಸುಮತಿ ಕುಮಾರ್‌ ಅವರಿಗೆ ‘ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ’ ಪ್ರದಾನ ಮಾಡಿ […]

‘ಜೈನ ಧರ್ಮದ ತತ್ವದಲ್ಲಿ ಸಮಾಜವಾದ ಬೋಧನೆ’

‘ಜೈನ ಧರ್ಮ ಸಮಾಜ ವಾದವನ್ನು ಬೋಧಿಸುತ್ತದೆ’ ಎಂದು ಚಾವುಂಡರಾಯ ಪ್ರಶಸ್ತಿ ಪುರಸ್ಕೃತ ಕವಿ ಧರಣೇಂದ್ರ ಕುರಕುರಿ ಹೇಳಿದರು. ಬೆಳಗಾವಿ, ಜನವರಿ ೨೪, ೨೦೧೭: ‘ಜೈನ ಧರ್ಮ ಸಮಾಜ ವಾದವನ್ನು ಬೋಧಿಸುತ್ತದೆ’ ಎಂದು ಚಾವುಂಡರಾಯ ಪ್ರಶಸ್ತಿ ಪುರಸ್ಕೃತ ಕವಿ ಧರಣೇಂದ್ರ ಕುರಕುರಿ ಹೇಳಿದರು. ನಗರದ ಭರತೇಶ ಶಿಕ್ಷಣ ಸಂಸ್ಥೆ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಆ.ನೇ. ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರ ದಿಂದ ಸೋಮವಾರ ಭರತೇಶ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಕರ್ನಾಟಕ ಸಾಹಿತ್ಯ […]

ಮಹಾಮಸ್ತಕಾಭಿಷೇಕಕ್ಕೆ 500 ಕೋಟಿ: ಕೇಂದ್ರಕ್ಕೆ ಸಿಎಂ ಪತ್ರ

ಬೆಂಗಳೂರು, ಜನವರಿ ೨೦, ೨೦೧೭ : ಜೈನರ ಶ್ರದ್ಧಾಕೇಂದ್ರವಾದ ಶ್ರವಣಬೆಳಗೊಳದಲ್ಲಿ 2018 ರ ಫೆಬ್ರವರಿಯಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವವಕ್ಕೆ 500 ಕೋಟಿ ರೂ. ಅನುದಾನ ನೀಡುವಂತೆ ಕೋರಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಪ್ರತಿ ಬಾರಿಯೂ ಕೇಂದ್ರ ಸರಕಾರ ನೆರವು ನೀಡುತ್ತದೆ. ಕಳೆದ ಬಾರಿ ಕೇಂದ್ರ ಯೋಜನಾ ಆಯೋಗದ ಮೂಲಕ 90 ಕೋಟಿ ರೂ. ಕೊಡಲಾಗಿತ್ತು. ಈ ಸಮಾರಂಭದ ನಿಮಿತ್ತ ಶ್ರವಣಬೆಳಗೊಳ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯನ್ನೂ ಕೈಗೊಳ್ಳಲಾಗುತ್ತದೆ. […]

ನೂತನವಾಗಿ ನಿರ್ಮಿಸಲಾಗಿರುವ ಕಸಮಳಗಿಯ ಬಸದಿ. ಒಳಚಿತ್ರದಲ್ಲಿ ದಿನಕ್ಕೆ ಮೂರು ವಿಧದ ಬಣ್ಣಗಳಲ್ಲಿ ಬದಲಾಗುವ ಭಗವಾನ್ ಪಾರ್ಶ್ವನಾಥ ಸ್ವಾಮಿಯ ವಿಗ್ರಹ.

ಕಸಮಳಗಿ ಜೈನ ಬಸದಿ ಪಂಚಕಲ್ಯಾಣ ಮಹೋತ್ಸವ

‘ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಸಮಳಗಿ ಗ್ರಾಮದಲ್ಲಿ ಪಾರ್ಶ್ವನಾಥ ತೀರ್ಥಂಕರರ ಜಿನ ಮಂದಿರ, ನೂತನ ಮಾನಸ್ತಂಭೋಪರಿ ಜಿನಬಿಂಬಗಳ ಹಾಗೂ 24 ತೀರ್ಥಂಕರರ ವಿಶ್ವಮಟ್ಟದ ಬೃಹತ್ ಪಂಚಕಲ್ಯಾಣ ಮಹಾಮಹೋತ್ಸವ ಏ. 28ರಿಂದ ಮೇ 2ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ‘ಯಜಮಾನ ಸವಾಲು’ ಕಾರ್ಯಕ್ರಮವನ್ನು ಜ. 22ರ ಮಧ್ಯಾಹ್ನ 12ಕ್ಕೆ ನೂತನ ಜಿನಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಜಿನಮಂದಿರ ಟ್ರಸ್ಟ ಅಧ್ಯಕ್ಷ ಜಯಪಾಲ ಸಾವಂತ ಇಲ್ಲಿ ಗುರುವಾರ ತಿಳಿಸಿದರು. ಬೆಳಗಾವಿ, ಜನವರಿ ೧೯, ೨೦೧೭: ‘ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಸಮಳಗಿ ಗ್ರಾಮದಲ್ಲಿ ಪಾರ್ಶ್ವನಾಥ ತೀರ್ಥಂಕರರ ಜಿನ […]

‘ವೈದಿಕ ಧರ್ಮಕ್ಕಿಂತ ಪ್ರಾಚೀನ ಜೈನ ಧರ್ಮ’

ತೀರ್ಥಂಕರ ಮಹಾವೀರರು ಜೈನ ಧರ್ಮದ ಸ್ಥಾಪಕ ಎಂಬ ತಪ್ಪು ಮಾಹಿತಿ ಶಾಲಾ ಪಠ್ಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದ್ದು, ಆದರೆ ಮಹಾವೀರನಿಗಿಂತ ಸಾವಿರಾರು ವರ್ಷಗಳ ಹಿಂದೆಯೇ ಜೈನ ಧರ್ಮ ಅಸ್ತಿತ್ವದಲ್ಲಿ ಇತ್ತು ಎಂದು ಎಲ್‌ಐಸಿಯ ಆಡಳಿತಾಧಿಕಾರಿ ರಾಜ್ಯಶ್ರೀ ಹಂಪನಾ ಅಭಿಪ್ರಾಯಪಟ್ಟರು. ಕಳಸ, ಜನವರಿ  ೧೬, ೨೦೧೭: ತೀರ್ಥಂಕರ ಮಹಾವೀರರು ಜೈನ ಧರ್ಮದ ಸ್ಥಾಪಕ ಎಂಬ ತಪ್ಪು ಮಾಹಿತಿ ಶಾಲಾ ಪಠ್ಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದ್ದು, ಆದರೆ ಮಹಾವೀರನಿಗಿಂತ ಸಾವಿರಾರು ವರ್ಷಗಳ ಹಿಂದೆಯೇ ಜೈನ ಧರ್ಮ ಅಸ್ತಿತ್ವದಲ್ಲಿ ಇತ್ತು […]

ಬಸದಿ ಹೊಸಕೋಟೆಯ ಭಗವಾನ್ ಬಾಹುಬಲಿ ವಿಗ್ರಹ.

ಗೊಮ್ಮಟನ ಕಂಡಿರಾ?

ಕರ್ನಾಟಕದಲ್ಲಿನ ಗೊಮ್ಮಟ ಪರಂಪರೆಯ ಹಿರಿಮೆ ವಿಶ್ವಪ್ರಸಿದ್ಧವಾದುದು. ಈ ಸಾಲಿಗೆ ಸಲ್ಲಬೇಕಾದ ಎಲ್ಲ ಹಿರಿಮೆ ಮಂಡ್ಯದ ಹೊಸಕೋಟೆಯ ಗೊಮ್ಮಟ ಮೂರ್ತಿಗಿದೆ. – ಲೇಖನ: ಕುಶಾಲ್ ವಿ.ಆರ್. (ಲೇಖನ ಹಾಗೂ ಚಿತ್ರ ಕೃಪೆ: ಪ್ರಜಾವಾಣಿ) ಶ್ರವಣಬೆಳಗೊಳದ ಗೊಮ್ಮಟೇಶ್ವರನ ಬೃಹತ್ ಮೂರ್ತಿಯದು ವಿಶ್ವಪ್ರಸಿದ್ಧಿ. ಕಾರ್ಕಳ, ವೇಣೂರು, ಧರ್ಮಸ್ಥಳದ ಗೊಮ್ಮಟ ಮೂರ್ತಿಗಳೂ ತಮ್ಮ ಗಾಂಭೀರ್ಯದಿಂದ, ಸ್ನಿಗ್ಧ ಸೌಂದರ್ಯದಿಂದ ಸಹೃದಯರ ಗಮನಸೆಳೆದಿವೆ. ಈ ಗೊಮ್ಮಟರ ಜನಪ್ರಿಯತೆಯ ಪ್ರಭಾವಳಿಯಲ್ಲಿ, ತೆರೆಮರೆಯಲ್ಲಿಯೇ ಉಳಿದಿರುವುದು ಮಂಡ್ಯದ ಪಾಂಡವಪುರಕ್ಕೆ ಸಮೀಪದ ಹೊಸಕೋಟೆಯ ಗೊಮ್ಮಟೇಶ್ವರ. ಕನ್ನಂಬಾಡಿಯ ಹಿನ್ನೀರಿಗೆ ಅಂಟಿಕೊಂಡಿರುವ ಸಣ್ಣ ಹಳ್ಳಿ […]

ಬಾಹುಬಲಿ ಪ್ರತಿಮೆ ಪ್ರತಿಷ್ಠಾಪನೆಗೆ ಸಜ್ಜು

ಜ. 16ರಿಂದ ಕನಕಗಿರಿ ಅತಿಶಯ ಮಹೋತ್ಸವ ಆರಂಭ – ತಾಲ್ಲೂಕಿನ ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಭಗವಾನ್‌ ಬಾಹುಬಲಿ ಪ್ರತಿಮೆಯ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಚಾಮರಾಜನಗರ: ತಾಲ್ಲೂಕಿನ ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಭಗವಾನ್‌ ಬಾಹುಬಲಿ ಪ್ರತಿಮೆಯ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಕನಕಗಿರಿಯು ಪ್ರಸಿದ್ಧ ಯಾತ್ರಾ ಸ್ಥಳ. ರಾಜ್ಯದ ಏಕೈಕ ಪ್ರಾಚೀನ ಸಿದ್ಧ ಕ್ಷೇತ್ರ. ಬೆಟ್ಟದ ದರ್ಶನ ಪಡೆಯಲು 300 ಮೆಟ್ಟಿಲು ಹತ್ತಬೇಕಿದೆ. ಪ್ರತಿವರ್ಷ ಸಾವಿರಾರು ಯಾತ್ರಿಕರು ಈ ಕ್ಷೇತ್ರಕ್ಕೆ ಭೇಟಿ […]

18 ಅಡಿ ಬಾಹುಬಲಿ ಪ್ರತಿಮೆ ಪ್ರತಿಷ್ಠಾಪನೆ

ತಾಲ್ಲೂಕಿನ ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿ ಜ. 16ರಿಂದ ಫೆ. 5ರ ವರೆಗೆ ಕನಕಗಿರಿ ಅತಿಶಯ ಮಹೋತ್ಸವ ನಡೆಯಲಿದೆ. ಚಾಮರಾಜನಗರ, ಜನವರಿ ೧೨, ೨೦೧೭: ತಾಲ್ಲೂಕಿನ ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿ ಜ. 16ರಿಂದ ಫೆ. 5ರ ವರೆಗೆ ಕನಕಗಿರಿ ಅತಿಶಯ ಮಹೋತ್ಸವ ನಡೆಯಲಿದೆ. ಕನಕಗಿರಿಯು ಜಿನಸಿದ್ಧರು ನೆಲೆಸಿದ್ದ ತಪೋಭೂಮಿ. ಕರ್ನಾಟಕದ ಏಕೈಕ ಪ್ರಾಚೀನ ಸಿದ್ಧ ಕ್ಷೇತ್ರವೂ ಹೌದು. ವೈಭವಯುತವಾಗಿ ಮಹೋತ್ಸವದ ಆಚರಣೆಗೆ ಕನಕಗಿರಿ ಅತಿಶಯ ಮಹೋತ್ಸವ ಸಮಿತಿಯಿಂದ ಭರದ ಸಿದ್ಧತೆ ನಡೆದಿದೆ. ಮಹೋತ್ಸವದ ಅಂಗವಾಗಿ ಅಂತರ್ಮನಾ […]

ಬೆಳಗಾವಿಯ ಧರ್ಮನಾಥ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಜೈನ ಸಾಹಿತ್ಯ ಸಮ್ಮೇಳನವನ್ನು ದಕ್ಷಿಣ ಭಾರತ ಜೈನ ಸಭೆ ಅಧ್ಯಕ್ಷ ರಾವಸಾಹೇಬ ಪಾಟೀಲ ಉದ್ಘಾಟಿಸಿದರು. ಕವಿ ಜಿನದತ್ತ ದೇಸಾಯಿ, ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತಿತರರು ಚಿತ್ರದಲ್ಲಿದ್ದಾರೆ.

‘ಕನ್ನಡ ಜೈನ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲಿ’

‘ರಾಜ್ಯದಲ್ಲಿ ಕನ್ನಡ ಜೈನ ಸಾಹಿತ್ಯ ಪರಿಷತ್‌ ಸ್ಥಾಪಿಸಬೇಕಾದ ಅಗತ್ಯವಿದೆ’ ಎಂದು ಹಿರಿಯ ಕವಿ ಜಿನದತ್ತ ದೇಸಾಯಿ ಅಭಿಪ್ರಾಯಪಟ್ಟರು. ಬೆಳಗಾವಿ, ಜನವರಿ ೯, ೨೦೧೭: ‘ರಾಜ್ಯದಲ್ಲಿ ಕನ್ನಡ ಜೈನ ಸಾಹಿತ್ಯ ಪರಿಷತ್‌ ಸ್ಥಾಪಿಸಬೇಕಾದ ಅಗತ್ಯವಿದೆ’ ಎಂದು ಹಿರಿಯ ಕವಿ ಜಿನದತ್ತ ದೇಸಾಯಿ ಅಭಿಪ್ರಾಯಪಟ್ಟರು. ದಕ್ಷಿಣ ಭಾರತ ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್‌ ಶತಮಾನೋತ್ಸವ ಆಚರಣೆ ಅಂಗವಾಗಿ ಇಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡ ಜೈನ ಸಾಹಿತ್ಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ […]

ಮಸ್ತಕಾಭಿಷೇಕ: ಶಾಶ್ವತ ಕಾಮಗಾರಿಗೆ ಆದ್ಯತೆ

ಹಾಸನ, ನವೆಂಬರ್ ೪, ೨೦೧೬: ಶ್ರವಣಬೆಳಗೊಳದಲ್ಲಿ 2018ರಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕೈಗೊಳ್ಳುವ ಮೂಲ ಸೌಕರ್ಯಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಭಾರತದ ಮಹತ್ವದ ಸಾಂಸ್ಕೃತಿಕ ವೈಭವದಿಂದ ಕೂಡಿರುವ ಶ್ರವಣಬೆಳಗೊಳದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಯಾತ್ರಾರ್ಥಿಗಳು, ಪ್ರವಾಸಿಗರು ಶ್ರವಣಬೆಳಗೊಳಕ್ಕೆ ಆಗಮಿಸುತ್ತಾರೆ. ಹಾಗಾಗಿ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದರು. […]

ಸನ್ಯಾಸತ್ವ ಸ್ವೀಕಾರ: ಜೈನರ ಮೆರವಣಿಗೆ

ಇಲ್ಲಿನ ಭೂತನಗುಡಿಯ ರಿಶಭ್ ಕುಮಾರ್ ಜೈನ್ ಸನ್ಯಾಸ ಸ್ವೀಕಾರಕ್ಕೆ ತೆರಳುವ ಹಿನ್ನೆಲೆಯಲ್ಲಿ ಮಂಗಳವಾರ ಜೈನ ಸಮಾಜದಿಂದ ವಿದಾಯ ಸಮಾರಂಭ ಏರ್ಪಡಿಸಲಾಗಿತ್ತು. ಭದ್ರಾವತಿ: ಇಲ್ಲಿನ ಭೂತನಗುಡಿಯ ರಿಶಭ್ ಕುಮಾರ್ ಜೈನ್ ಸನ್ಯಾಸ ಸ್ವೀಕಾರಕ್ಕೆ ತೆರಳುವ ಹಿನ್ನೆಲೆಯಲ್ಲಿ ಮಂಗಳವಾರ ಜೈನ ಸಮಾಜದಿಂದ ವಿದಾಯ ಸಮಾರಂಭ ಏರ್ಪಡಿಸಲಾಗಿತ್ತು. ದಿನೇಶ ಕುಮಾರ್ ಮತ್ತು ರಾಜುಲ್ ದಂಪತಿ ಪುತ್ರರಾದ ರಿಶಭ್ ಅವರನ್ನು ಅವರ ನಿವಾಸದಿಂದ ಅಲಂಕೃತ ವಾಹನದಲ್ಲಿ ಕೂರಿಸಿ, ಹೂಮಾಲೆ, ಪುಷ್ಪಗಳಿಂದ ಅಲಂಕರಿಸಿ, ವಾದ್ಯಮೇಳದ ಜತೆಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ವೇಳೆ […]

‘ವಡ್ಡಾರಾಧನೆ’ ಹೆಸರು: ಒಂದು ಹೊಸ ವಿಚಾರ

‘ವಡ್ಡಾರಾಧನೆ’ ಹೆಸರಿನ ಕುರಿತಂತೆ ಹೊಸ ಅಂಶವೊಂದು ಅಧ್ಯಯನದಲ್ಲಿ ಕಂಡುಬಂದಿದೆ. ಇದು ಆ ಹೆಸರಿನ ಒಗಟನ್ನು ಒಡೆಯುವ ಸರಿಯಾದ ಕೀಲಿಕೈ ಎನ್ನುವಂತಿದೆ. ಕನ್ನಡ ಸಾಹಿತ್ಯದ ಅಗ್ಗಳಿಕೆಯ ಕೃತಿಗಳಲ್ಲಿ ‘ವಡ್ಡಾರಾಧನೆ’ಯೂ ಒಂದು. ಅದು ಗದ್ಯಕೃತಿಯಾದರೂ ಕಾವ್ಯ ಎಂಬಷ್ಟರ ಮಟ್ಟಿಗೆ ಸಾಹಿತ್ಯಪ್ರೇಮಿಗಳ ಮನಸೆಳೆದಿರುವಂಥ ವಿಶಿಷ್ಟ ಕೃತಿ. 9ನೆಯ ಶತಮಾನದ ಶ್ರೀವಿಜಯ ‘ಕವಿರಾಜಮಾರ್ಗ’ದಲ್ಲಿ ತನ್ನ ಕಾಲದವರೆಗಿನ ಕನ್ನಡದ ಹೆಸರಾಂತ ಪದ್ಯಕವಿಗಳನ್ನೂ ಗದ್ಯಕವಿಗಳನ್ನೂ ಹೆಸರಿಸಿದ್ದಾನೆ. ವಿಮಲ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮುಂತಾದವರು ಆ ಕಾಲಕ್ಕೆ ಗಣ್ಯ ಗದ್ಯಕವಿಗಳೆಂದು ಅವನ ಹೇಳಿಕೆ. ಆದರೆ, ಅವರಾರ […]

ಮಹಾಮಸ್ತಕಾಭಿಷೇಕ ಹಿನ್ನೆಲೆ ವರ್ಷಾಂತ್ಯಕ್ಕೆ ಹಾಸನ-ಬೆಂಗಳೂರು ಮಧ್ಯೆ ರೈಲು ಸಂಚಾರ

ಚನ್ನರಾಯಪಟ್ಟಣ, ಜೂನ್ ೨೬, ೨೦೧೬: 2018ರಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಈ ವರ್ಷದ ಅಂತ್ಯಕ್ಕೆ ಬೆಂಗಳೂರು-ಹಾಸನ ರೈಲು ಸಂಚಾರ ಪ್ರಾರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಕೆಂದ್ರ ರೈಲ್ವೆ ಮಂತ್ರಿಯೊಂದಿಗೆ ಚರ್ಚೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದರು.  ಈಗಾಗಲೆ ಶೇ. 90 ರಷ್ಟು ರೈಲ್ವೆ ಕಾಮಗಾರಿ ಮುಕ್ತಾಯವಾಗಿದ್ದು, ಕುಣಿಗಲ್ ಸಮೀಪ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಇದು ಬಗೆಹರಿದ ಮೇಲೆ ಕಾಮಗಾರಿ ಚುರುಕಾಗಲಿದೆ. ಸೆಪ್ಟೆಂಬರ್‌ಗೆ ಕಾಮಗಾರಿ ಮುಕ್ತಾಯ ಮಾಡುವುದಾಗಿ ಗುತ್ತಿಗೆದಾರ ಭರವಸೆ […]

ಗುಜರಾತ್: ಜೈನರಿಗೆ ಅಲ್ಪಸಂಖ್ಯಾತರ ಸ್ಥಾನಮಾನ

ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ಗುಜರಾತ್‌ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಹಿಂದಿನ ಯುಪಿಎ ಸರ್ಕಾರ 2014ರ ಜನವರಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿತ್ತು. ಅಹಮದಾಬಾದ್‌ (ಗುಜರಾತ್), ಮೇ ೮, ೨೦೧೬ : ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ಗುಜರಾತ್‌ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಹಿಂದಿನ ಯುಪಿಎ ಸರ್ಕಾರ 2014ರ ಜನವರಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿತ್ತು. ‘ಪಾತಿದಾರ್‌ ಮೀಸಲಾತಿ ಚಳವಳಿಯ ಕಾರಣದಿಂದಾಗಿ ಸರ್ಕಾರದ […]

ಸಲ್ಲೇಖನ : ಶ್ರವಣಬೆಳಗೊಳದಲ್ಲಿ ಜೈನ ಸ್ವಾಮಿಗಳ ಸಮಾವೇಶ

ಶ್ರವಣಬೆಳಗೊಳ, ಸೆಪ್ಟೆಂಬರ್ 02, 2015: ಸಲ್ಲೇಖನಾ ವ್ರತ ಆತ್ಮಹತ್ಯೆಗೆ ಸಮಾನವಾದ ಶಿಕ್ಷಾರ್ಹ ಅಪರಾಧವೆಂದು ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಇನ್ನು ಮುಂದೆ ಜೈನ ಸಮಾಜ ಪ್ರತಿಭಟನೆ ಅಥವಾ ಮೌನ ಮೆರವಣಿಗೆ ನಡೆಸಬಾರದೆಂದು ಸಮಸ್ತ ಜೈನ ಮಠಗಳ ಪಟ್ಟಾಚಾರ್ಯ ಸ್ವಾಮೀಜಿಗಳ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಮಾವೇಶದ ನಂತರ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಕಾಲಕ್ಕೆ ತಕ್ಕ ಹಾಗೆ ಧರ್ಮದ ಬದಲಾವಣೆ […]

ಸಲ್ಲೇಖನ ವ್ರತವನ್ನಾಚರಿಸುತ್ತಿರುವ ಜೈನ ಮುನಿ ಯೊಬ್ಬರ ಚಿತ್ರ.

ಸಲ್ಲೇಖನ ಮರಣವು ಅಮಾನವೀಯ ಆಚರಣೆಯೇ?

– ಲೇಖಕರು: ಷ. ಶೆಟ್ಟರ್ (ಕೃಪೆ: ಪ್ರಜಾವಾಣಿ) ಆಧುನಿಕ ಸಂವಿಧಾನದೊಡನೆ ಅನಾದಿ ಧಾರ್ಮಿಕ ಸಂಪ್ರದಾಯದ ಘರ್ಷಣೆ – ಜೈನ ಸಮುದಾಯದ ‘ಸಲ್ಲೇಖನ ವ್ರತ’ದ ಆಚರಣೆಯನ್ನು ರಾಜಸ್ತಾನ ಹೈಕೋರ್ಟ್‌ ನಿಷೇಧಿಸಿದೆ. ಸಲ್ಲೇಖನ ವ್ರತ ಕಾನೂನುಬಾಹಿರ, ಇದು ಶಿಕ್ಷಾರ್ಹ ಅಪರಾಧ ಎನ್ನುವುದು ಕೋರ್ಟ್‌ ಅಭಿಪ್ರಾಯ. ಆದರೆ, ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ‘ಸಲ್ಲೇಖನ’ ವ್ರತದ ಆಚರಣೆಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ರಾಜ್ಯಾಂಗಗಳು ಗೌರವದಿಂದ ಕಂಡಿವೆ. ಮರಣ ಸಂಹಿತೆ ಜೈನಸಿದ್ಧಾಂತದಲ್ಲಿ ‘ಆತ್ಮಹತ್ಯೆ’ಯನ್ನು ಸಂಕೇತಿಸುವ ಪದವಿಲ್ಲ, ಆದರೆ ದೇಹತ್ಯಾಗವನ್ನು ಗುರುತಿಸುವ […]

ಜೈನ ಧರ್ಮ ಜಟಿಲ, ತರ್ಕ ಪ್ರಖರ

‘ಜೈನ ಧರ್ಮ ಜಟಿಲವಾ­ದುದು. ಜೈನರ ತರ್ಕ ಹಾಗೂ ವಾದ ಪ್ರಖ­ರತೆಯಿಂದ ಕೂಡಿದೆ.  ಜೈನ ತರ್ಕ­ಶಾಸ್ತ್ರಜ್ಞರನ್ನು ಮೀರಿಸಿದವರು ಜಗತ್ತಿ­ನಲ್ಲಿ ಸಿಗುವುದು ಅಪರೂಪ’ ಎಂದು ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್‌ ವಿಶ್ಲೇಷಿಸಿದರು. ಬೆಂಗಳೂರು, ಜನವರಿ ೩೦, ೨೦೧೫: ‘ಜೈನ ಧರ್ಮ ಜಟಿಲವಾ­ದುದು. ಜೈನರ ತರ್ಕ ಹಾಗೂ ವಾದ ಪ್ರಖ­ರತೆಯಿಂದ ಕೂಡಿದೆ.  ಜೈನ ತರ್ಕ­ಶಾಸ್ತ್ರಜ್ಞರನ್ನು ಮೀರಿಸಿದವರು ಜಗತ್ತಿ­ನಲ್ಲಿ ಸಿಗುವುದು ಅಪರೂಪ’ ಎಂದು ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್‌ ವಿಶ್ಲೇಷಿಸಿದರು. ‘ಅಭಿನವ’ ಪ್ರಕಾಶನದ ವತಿಯಿಂದ ನಗ­ರದ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗ­ಣ­ದಲ್ಲಿ ಗುರುವಾರ ನಡೆದ ತಮ್ಮ […]

error: Jain Heritage Centres - Celebrating Jain Heritage.....Globally!