Skip to content
Home » Uncategorized » ಜೈನ ಧರ್ಮದ ತತ್ವಗಳನ್ನು ಅರ್ಥೈಸಿ ಅಳವಡಿಸಿಕೊಳ್ಳಿ

ಜೈನ ಧರ್ಮದ ತತ್ವಗಳನ್ನು ಅರ್ಥೈಸಿ ಅಳವಡಿಸಿಕೊಳ್ಳಿ

    2615ನೇ ಮಹಾವೀರ ಜಯಂತಿ ಆಚರಣೆ – ಮಹಾವೀರ ಜಯಂತಿಯು ಇತಿಹಾಸವನ್ನು ಮರು ನೆನಪಿಸಿಕೊಳ್ಳಲು ಹಾಗೂ ಜೈನ ಧರ್ಮದ ತತ್ವಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇಂದಿನ ಸಮಾಜಕ್ಕೆ ಜೈನ ಧರ್ಮದ ತತ್ವಗಳನ್ನು ಸಾರಿ ಹೇಳುವ ಅಗತ್ಯವಿದೆ ಎಂದು ಶಾಸಕ ಜೆ. ಆರ್. ಲೋಬೊ ಅಭಿಪ್ರಾಯಪಟ್ಟರು.

    ಮಂಗಳೂರು, ಏಪ್ರಿಲ್ ೨೦, ೨೦೧೬: ಮಹಾವೀರ ಜಯಂತಿಯು ಇತಿಹಾಸವನ್ನು ಮರು ನೆನಪಿಸಿಕೊಳ್ಳಲು ಹಾಗೂ ಜೈನ ಧರ್ಮದ ತತ್ವಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇಂದಿನ ಸಮಾಜಕ್ಕೆ ಜೈನ ಧರ್ಮದ ತತ್ವಗಳನ್ನು ಸಾರಿ ಹೇಳುವ ಅಗತ್ಯವಿದೆ ಎಂದು ಶಾಸಕ ಜೆ. ಆರ್. ಲೋಬೊ ಅಭಿಪ್ರಾಯಪಟ್ಟರು.

    ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೈನ ಸೊಸೈಟಿ ಮಂಗಳೂರು ಹಾಗೂ ಜೈನ್ ಮಿಲನ್ ಇದರ ಸಹಯೋಗದೊಂದಿಗೆ ಬಜಿಲಕೇರಿ ಆದೀಶ್ವರ ಸ್ವಾಮಿ ಜೈನ ಬಸದಿಯಲ್ಲಿ ನಡೆದ 2615 ನೇ ಮಹಾವೀರ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಎಲ್ಲಾ ಧರ್ಮಗಳ ಮೂಲ ಒಂದೇ. ಇಂದು ಇತರ ಧರ್ಮಗಳ ಬಗ್ಗೆ ಅರಿವು ಅವಶ್ಯ. ಇತರ ಧರ್ಮಗಳನ್ನು ಗೌರವಿಸಿ, ನಮ್ಮ ಧರ್ಮಕ್ಕೆ ಪ್ರಾಮಾಣಿಕರಾಗಿದ್ದಲ್ಲಿ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದು ಅವರು ತಿಳಿಸಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಐದು ಸಾವಿರ ವರ್ಷಗಳ ಹಿಂದೆ ಇದ್ದಂತಹ ಚಿಂತಕರಿಂದ, ಸಮಾಜ ಸುಧಾರಕರಿಂದ ನಮ್ಮ ದೇಶ ಆವಿರ್ಭಾವ ಹೊಂದಿದೆ. ವೈವಿಧ್ಯತೆಯನ್ನೊಳಗೊಂಡಿರುವ ಸಮಾಜದ ಸೃಷ್ಟಿ ಯಾಗಲು ಇಂತಹ ಸಮಾಜ ಸುಧಾರಕರ ಕೊಡುಗೆ ಕಾರಣವಾಗಿದೆ ಎಂದರು.

    ಸರ್ಕಾರವು ಸಮಾಜದಲ್ಲಿರುವಂತಹ ಭಿನ್ನಾಭಿಪ್ರಾಯವನ್ನು ಮರೆಸಿ, ಜನರನ್ನು ಒಂದುಗೂಡಿಸಿ ಇಂತಹ ಕಾರ್ಯಕ್ರವನ್ನು ಮಾಡುವ ಮೂಲಕ ಸಮಾಜದಲ್ಲಿ ಏಕತೆಯನ್ನು ಉಳಿಸುವ ಕಾರ್ಯವನ್ನು ಮಾಡಬೇಕಾದುದು ಅಗತ್ಯ. ಹಿಂದೆ ಕರಾವಳಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದ ಜೈನರ ಅಳಿವಿಗೆ ಸಮಾಜದಲ್ಲಿರುವ ವ್ಯಾಮೋಹ, ಹಿಂಸೆ, ಕ್ರೌರ್ಯವು ಕಾರಣವಾಗಿದೆಯೇ ಎನ್ನುವುದನ್ನು ಅಧ್ಯಯನ ನಡೆಸಬೇಕಾಗಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಮಹಾವೀರ ಜಯಂತಿಯ ಸಂದೇಶವನ್ನು ತಿಳಿಸಿದರು.

    ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್, ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್, ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ,

    ಆದೀಶ್ವರ ಸ್ವಾಮಿ ಜೈನ ಬಸದಿಯ ಮೊಕ್ತೇಸರ ಕೆ. ಸುರೇಶ್ ಬಲ್ಲಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಚಂದ್ರಹಾಸ ರೈ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜೈನ ಸೊಸೈಟಿಯ ಅಧ್ಯಕ್ಷ ಎಲ್.ಡಿ. ಬಲ್ಲಾಳ್, ಡಿ. ಎಂ. ರವಿ ಕುಮಾರ್ ಹಾಗೂ ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು.

    *
    ಸತ್ಯ, ಅಹಿಂಸೆ ಜೈನ ಧರ್ಮದ ಮೂಲ ತತ್ವ. ಇವೆರಡೂ ಕಾಲಕಾಲಕ್ಕೂ ಪ್ರಸ್ತುತ. ಸಾಹಿತ್ಯ, ಸಂಸ್ಕೃತಿ, ತಾತ್ವಿಕ ಚಿಂತನೆಗಳನ್ನು ಕಟ್ಟಿಕೊಟ್ಟ ಧರ್ಮ  ಜೈನ ಧರ್ಮ.
    ಡಾ. ಉದಯ ಕುಮಾರ್ಪ್ರಾಂ
    ಶುಪಾಲರು, ವಿವಿ ಕಾಲೇಜು

    – ಕೃಪೆ: ಪ್ರಜಾವಾಣಿ

    error: Jain Heritage Centres - Celebrating Jain Heritage.....Globally!