Skip to content
Home » ಕನ್ನಡ » ಸುದ್ದಿ-ಸಮಾಚಾರ » ಇಂದು ಸಂತ ಸಮ್ಮೇಳನ; ಸಿಂಗಾರಗೊಂಡಿದೆ ಶ್ರೀ ಕ್ಷೇತ್ರ ಧರ್ಮಸ್ಥಳ

ಇಂದು ಸಂತ ಸಮ್ಮೇಳನ; ಸಿಂಗಾರಗೊಂಡಿದೆ ಶ್ರೀ ಕ್ಷೇತ್ರ ಧರ್ಮಸ್ಥಳ

    ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಧರ್ಮ ಸಮನ್ವಯದ ಪುಣ್ಯದ ಬೀಡು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತ್ಯಾಗಮೂರ್ತಿ ಬಾಹುಬಲಿ ಸ್ವಾಮಿಗೆ ಈಗ ಚತುರ್ಥ ಮಹಾಮಸ್ತಕಾಭಿಷೇಕದ ಸಡಗರ. ಫೆ.9ರಿಂದ 18ರ ವರೆಗೆ ನಡೆಯುವ ಮಹಾಮಜ್ಜನಕ್ಕಾಗಿ ಶ್ರೀ ಕ್ಷೇತ್ರ ಸರ್ವವಿಧವಾಗಿ ಸಜ್ಜುಗೊಂಡಿದೆ.

    ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾಗಿ ರುವ ಗೊಮ್ಮಟ ಮೂರ್ತಿಯ ಮಸ್ತಕಾ ಭಿಷೇಕ ತಯಾರಿಗೆ ಅಂತಿಮ ಸ್ಪರ್ಶ ನಡೆ ಯುತ್ತಿದೆ. ಅಭಿಷೇಕ ನಡೆಸುವ ಅಟ್ಟಳಿಗೆ ನಿರ್ಮಾಣ ಅಂತಿಮ ಹಂತದಲ್ಲಿದೆ. ಭಕ್ತರು ಮಜ್ಜನವನ್ನು ಕಣ್ತುಂಬಿಕೊಳ್ಳಲು ಇರುವ ಗ್ಯಾಲರಿ ನಿರ್ಮಾಣವೂ ಕೊನೆಯ ಹಂತದಲ್ಲಿದ್ದು, ನೂರಕ್ಕೂ ಅಧಿ ಕ ಕಾರ್ಮಿಕರು ಶ್ರಮಿಸುತ್ತಿದ್ದಾರೆ.

    ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ನಡೆಸಲಾಗುತ್ತಿದ್ದು, ಇದರ ಉಸ್ತುವಾರಿಗಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ.

    ಇಂದು ಸಂತ ಸಮ್ಮೇಳನ
    ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಫೆ. 8ರಂದು ಅಪರಾಹ್ನ 3 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಂತ ಸಮ್ಮೇಳನ ಆಯೋಜಿಸಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಉದ್ಘಾಟಿಸಲಿದ್ದಾರೆ. ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಕಾರ್ಕಳ ದಾನಶಾಲೆಯ ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಯವರು ಅಧ್ಯಕ್ಷತೆ ವಹಿಸುತ್ತಾರೆ. ಹಲವು ಯತಿಶ್ರೇಷ್ಠರು ಭಾಗವಹಿಸಲಿದ್ದಾರೆ.

    ಸಿಂಗಾರಗೊಂಡಿದೆ ಧರ್ಮಕ್ಷೇತ್ರ
    62 ಅಡಿ ಎತ್ತರದ ಅಟ್ಟಳಿಗೆ ನಿರ್ಮಾಣ ಕಾರ್ಯ ಡಿ.1ರಂದು ಆರಂಭವಾಗಿದ್ದು, ಈಗ ಕೊನೆಯ ಹಂತದಲ್ಲಿದೆ. ಮೇಲಿನ ಮೂರು ಅಂತಸ್ತುಗಳಲ್ಲಿ ನಿಂತು ಮೂರ್ತಿಗೆ ಅಭಿಷೇಕ ಮಾಡಲು ಅವಕಾಶವಿದೆ. ಮೇಲೇರಲು ಎರಡು ಕಡೆಗಳಲ್ಲಿ ಮೆಟ್ಟಿಲು ಗಳನ್ನು ನಿರ್ಮಿಸಲಾಗಿದೆ. ಜತೆಗೆ 2 ಲಿಫ್ಟ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಪ್ರತೀ ಅಂತಸ್ತಿನಲ್ಲಿ ಸುಮಾರು 1,500 ಚ. ಅಡಿಗಳಷ್ಟು ಸ್ಥಳಾವಕಾಶವಿದೆ. 20 ಅಡಿ ಎತ್ತರದ ಎರಡು ಅಂತಸ್ತಿನ ಗ್ಯಾಲರಿಗಳು ಕೂಡ ನಿರ್ಮಾಣವಾಗಿವೆ. ಬೆಟ್ಟಕ್ಕೆ ತೆರಳುವ ಸುಮಾರು ಎರಡು ಕಿ.ಮೀ. ರಸ್ತೆ ಅಲಂಕಾರಗಳಿಂದ ಕಂಗೊಳಿಸುತ್ತಿದೆ.ಶ್ರೀ ಕ್ಷೇತ್ರದ ಪರಿಸರ ಆಕರ್ಷಕವಾಗಿ ಸಿಂಗಾರಗೊಂಡಿದೆ. ಉಜಿರೆ ಪೇಟೆ ಯಿಂದಲೇ ಸ್ವಾಗತ ಕಮಾನು, ವಿಶೇಷ ಅಲಂಕಾರ ಗಮನ ಸೆಳೆಯುತ್ತಿವೆ.

    ಶ್ರೀ ಕ್ಷೇತ್ರದತ್ತ ದಿಗಂಬರ ಮುನಿಗಳ ಸಂದೋಹ ಆಗಮಿಸಲು ಆರಂಭಿಸಿದ್ದು, ಮಸ್ತಕಾಭಿಷೇಕ ವೇಳೆ ಭಾರೀ ಸಂಖ್ಯೆಯಲ್ಲಿ ಆಚಾರ್ಯರು, ಮುನಿಗಳು, ಮಾತಾಜಿ ಯವರು ಭಾಗವಹಿಸುವ ನಿರೀಕ್ಷೆಯಿದೆ.

    ಅನ್ನದಾನದ ಕ್ಷೇತ್ರ; ಭೋಜನವೇ ಆತಿಥ್ಯ!
    ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನದಾನಕ್ಕೆ ಪ್ರಸಿದ್ಧ, ಇಲ್ಲಿಗೆ ಬರುವ ಭಕ್ತರಿಗೆ ನಿತ್ಯ ಅನ್ನದಾನವಿದೆ. ಶ್ರೀ ಕ್ಷೇತ್ರದ ಬಹು ದೊಡ್ಡ ಹಿರಿಮೆಯಿದು. ಈಗ ಮಹಾಮಸ್ತಕಾಭಿ ಷೇಕಕ್ಕೆ ಆಗಮಿಸುವ ಭಕ್ತರಿಗೆ ಹೆಚ್ಚುವರಿಯಾಗಿ ಭೋಜನ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದಲ್ಲಿ ಮಾಡಲಾಗಿದೆ. ಕ್ಷೇತ್ರದ ಹಿಂಭಾಗದಲ್ಲಿ ಇದಕ್ಕಾಗಿ ಪ್ರತ್ಯೇಕ ಅನ್ನಛತ್ರ ನಿರ್ಮಿಸಲಾಗಿದೆ. ಕ್ಷೇತ್ರದ ಅನ್ನಪೂರ್ಣ ಎಂದಿನಂತೆ ಕಾರ್ಯಾಚರಿಸಲಿದ್ದು, ನೂತನ ಅನ್ನಛತ್ರದಲ್ಲಿಯೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ 19,200 ಚದರಡಿ ವಿಸ್ತೀರ್ಣ ಹಾಗೂ 9,600 ಚದರಡಿ ವಿಸ್ತೀರ್ಣದ ಎರಡು ಅಂಗಣಗಳನ್ನು ವ್ಯವಸ್ಥೆಗೊಳಿಸಲಾಗಿದೆ. 9 ಬೃಹತ್‌ ಒಲೆಗಳು, ಉಗಿ ವ್ಯವಸ್ಥೆ, ಗ್ಯಾಸ್‌ ಒಲೆ, ಅಡುಗೆ ಇರಿಸಲು ಪ್ರತ್ಯೇಕ ಕೊಠಡಿ, ದಾಸ್ತಾನು ಕೊಠಡಿ ಸಿದ್ಧಪಡಿಸಲಾಗಿದೆ. 150ಕ್ಕೂ ಅಧಿ ಕ ಬಾಣಸಿಗರನ್ನು ಹೆಚ್ಚುವರಿ ಯಾಗಿ ಕರೆಸಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಉಪಾಹಾರ ವ್ಯವಸ್ಥೆಯಿದೆ.

    274 ಮೆಟ್ಟಿಲು!
    ಶ್ರೀ ಕ್ಷೇತ್ರ ಧರ್ಮಸ್ಥಳದ ಎಡಭಾಗದ ರತ್ನಗಿರಿ ಬೆಟ್ಟದಲ್ಲಿ ಭಗವಾನ್‌ ಶ್ರೀ ಬಾಹುಬಲಿಯ ಮೂರ್ತಿಯಿದೆ. ಹೀಗಾಗಿ ಬೆಟ್ಟ ಏರಲು 274 ಮೆಟ್ಟಿಲುಗಳನ್ನು ಏರಬೇಕು. ಮೆಟ್ಟಿಲೇರುವ ಹಾದಿಯಲ್ಲಿ ಬಾಹುಬಲಿಯ ಕುರಿತಾದ ವಿವರಣೆ ಗಳನ್ನು ಫ‌ಲಕಗಳಲ್ಲಿ ಅಳವಡಿಸಲಾಗಿದೆ. ಅದರ ಪಕ್ಕ ಇರುವ ರಸ್ತೆಯಲ್ಲಿ ಕ್ಷೇತ್ರದ ವತಿಯ ವಾಹನಗಳ ಮೂಲಕ ತೆರಳಲು ಅವಕಾಶವಿದೆ.

    ಜಿಲ್ಲಾಡಳಿತದಿಂದ ಸರ್ವ ಸಹಕಾರ
    ಮಹಾಮಸ್ತಕಾಭಿಷೇಕವನ್ನು ಯಶಸ್ವಿಗೊಳಿಸುವ ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಕೂಡ ಸರ್ವ ಸಹಕಾರವನ್ನು ನೀಡುತ್ತಿದೆ. ಪೊಲೀಸ್‌ ಭದ್ರತೆ, ಆರೋಗ್ಯ, ಕುಡಿಯುವ ನೀರು, ಲೋಕೋಪ ಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ, ಸ್ವತ್ಛತೆಗಾಗಿ ಮಂಗಳೂರು ಪಾಲಿಕೆಯ ತಂಡ, ವಿದ್ಯುತ್‌ ಸೇರಿದಂತೆ ಎಲ್ಲ ಹಂತ ಗಳಲ್ಲೂ ವಿವಿಧ ಇಲಾಖೆಗಳು ಶ್ರೀ ಕ್ಷೇತ್ರದ ಜತೆಗೆ ಕೈಜೋಡಿಸಲು ಸಿದ್ಧವಾಗಿವೆ.
    – ಶಶಿಕಾಂತ ಸೆಂಥಿಲ್‌, ಜಿಲ್ಲಾಧಿಕಾರಿ

    – ಕೃಪೆ: ಉದಯವಾಣಿ

    error: Jain Heritage Centres - Celebrating Jain Heritage.....Globally!