Skip to content
Home » ಕನ್ನಡ » ಸುದ್ದಿ-ಸಮಾಚಾರ » ಉತ್ತರ ಕರ್ನಾಟಕದ ಪ್ರವಾಹ – ಶ್ರವಣಬೆಳಗೊಳ ಜೈನ ಮಠದ ವತಿಯಿಂದ ರೂ 35 ಲಕ್ಷಗಳ ನೆರವು

ಉತ್ತರ ಕರ್ನಾಟಕದ ಪ್ರವಾಹ – ಶ್ರವಣಬೆಳಗೊಳ ಜೈನ ಮಠದ ವತಿಯಿಂದ ರೂ 35 ಲಕ್ಷಗಳ ನೆರವು

    ಶ್ರವಣಬೆಳಗೊಳ, 11 ಆಗಸ್ಟ್ 2019:         ಉತ್ತರ ಕರ್ನಾಟಕ ಭಾಗದ ನೆರೆ ಪೀಡಿತ ಸಂತ್ರಸ್ತರಿಗೆ ನೆರವಾಗಲು ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠವು ಆಹಾರ ಸಾಮಗ್ರಿ, ಔಷದಿಯನ್ನು ಸರಬರಾಜು ಮಾಡಲು ರೂ. 25 ಲಕ್ಷ ಹಾಗೂ ಮುಖ್ಯ ಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ರೂ. 10 ಲಕ್ಷ ಸೇರಿ ಒಟ್ಟು ರೂ. 35 ಲಕ್ಷಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ತಿಳಿಸಿದೆ.

    ರಾಜ್ಯದಲ್ಲಿ ಈ ಹಿಂದೆಯೂ ಮಳೆಯಿಂದ ಅಪಾತ ಪ್ರಮಾಣದಲ್ಲಿ ಹಾನಿಯಾದ ಸಂದರ್ಭದಲ್ಲಿಯೂ ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ವತಿಯಿಂದ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿತ್ತು.

    ಪ್ರವಾಹದಲ್ಲಿ ಸಂಕಷ್ಟಕ್ಕೀಡಾಗಿರುವವರಿಗೆ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಾಂತ್ವನ ಹೇಳಿದ್ದು, ಹಾಸನ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ತಿಳಿಸಿರುತ್ತಾರೆ ಹಾಗೂ ಪೂಜ್ಯಶ್ರೀಗಳು ಚಾತುರ್ಮಾಸ ವ್ರತದಲ್ಲಿದ್ದರೂ ನೆರೆ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಶ್ರೀಗಳವರ ಸೂಚನೆಯಂತೆ ಅನೇಕ ಸಂಘ ಸಂಸ್ಥೆಗಳು ಸಂತ್ರಸ್ತರಿಗೆ ನೆರವಾಗುವ ಕಾರ್ಯದಲ್ಲಿ ನಿರತರಾಗಿದ್ದು, ಶ್ರೀಕ್ಷೇತ್ರದ ವತಿಯಿಂದ ರೂ. 35 ಲಕ್ಷ ಗಳ ಪರಿಹಾರ ಯೋಜನೆ ಕಾರ್ಯರೂಪಕ್ಕೆ ತರಲು ನಿಶ್ಚಯ ಮಾಡಿರುತ್ತಾರೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

    – Jain Heritage Centres News Service (JHCNS)

    error: Jain Heritage Centres - Celebrating Jain Heritage.....Globally!