Skip to content
Home » ಕನ್ನಡ » ಸುದ್ದಿ-ಸಮಾಚಾರ » ಕರ್ನಾಟಕದ ಜೈನ ಕ್ಷೇತ್ರಗಳ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಸರ್ಕಾರದ ದಿಂದ 29.94 ಕೋಟಿ ರೂ. ಅನುದಾನ ಬಿಡುಗಡೆ

ಕರ್ನಾಟಕದ ಜೈನ ಕ್ಷೇತ್ರಗಳ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಸರ್ಕಾರದ ದಿಂದ 29.94 ಕೋಟಿ ರೂ. ಅನುದಾನ ಬಿಡುಗಡೆ

    ಬೆಂಗಳೂರು (ಕರ್ನಾಟಕ), 7 ಜನವರಿ 2024: ಇಂದು ಕರ್ನಾಟಕ ಜೈನ ಭವನದಲ್ಲಿ ಶ್ರವಣಬೆಳಗೊಳ ಜೈನಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀತಿ೯ ಭಟ್ಟಾರಕ ಮಹಾಸ್ವಾಮಿಜಿಯವರ ಮಂಗಳ ಪ್ರವೇಶ ಹಾಗೂ ಗುರುವಂದನಾ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಶ್ರೀ ಡಿ. ಸುಧಾಕರ್ ರವರು ಕರ್ನಾಟಕದ ವಿವಿಧ ಜೈನ ಕ್ಷೇತ್ರಗಳ ಅಭಿವೃದ್ಧಿಗೆ ಕರ್ನಾಟಕ ಸರ್ಕಾರದ ವತಿಯಿಂದ ೨೯.೯೪ ಕೋಟಿ ರೂ ಹಣ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.

    ಅದರ ವಿವರಗಳು ಈ ಕೆಳಗಿನಂತಿದೆ –
    ಶ್ರವಣಬೆಳಗೊಳ ಜೈನಮಠ – 9 ಕೋಟಿ
    ಆರತಿಪುರ ಜೈನ ಮಠ – 2.5 ಕೋಟಿ
    ಸೋಂದಾ ಜೈನ ಮಠ – 2.5 ಕೋಟಿ
    ವರೂರು ಜೈನ ಮಠ – 2.47 ಕೋಟಿ
    ಶ್ರೀ ಕ್ಷೇತ್ರ ಕಮಠಾಣ – 2.5 ಕೋಟಿ
    ಶ್ರೀ ಕ್ಷೇತ್ರ ನರಸಿಂಹರಾಜಪುರ ಜೈನ ಮಠ – 2.5 ಕೋಟಿ
    ಶ್ರೀ ಕ್ಷೇತ್ರ ಮೂಡುಬಿದಿರೆ ಜೈನ ಮಠ – 2.5 ಕೋಟಿ
    ಶ್ರೀ ಕ್ಷೇತ್ರ ಹೊಂಬುಜ ಜೈನ ಮಠ – 2.47 ಕೋಟಿ
    ಶ್ರೀ ಕ್ಷೇತ್ರ ಕಂಬದಹಳ್ಳಿ ಜೈನ ಮಠ – 2.5 ಕೋಟಿ
    ಶ್ರೀ ಕಮಲ ಬಸದಿ, ಬೆಳಗಾವಿ – 1 ಕೋಟಿ

    – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ; ಮಾಹಿತಿ: ಶ್ರೀ ಅಜಿತ್ ಮುರುಗುಂಡೆ, ಬೆಂಗಳೂರು

    error: Jain Heritage Centres - Celebrating Jain Heritage.....Globally!