Skip to content
Home » ಕನ್ನಡ » ಸುದ್ದಿ-ಸಮಾಚಾರ » ೨೬ನೇ ಮೇ ೨೦೨೩ ರಂದು ೨೧ ವರ್ಷಗಳನ್ನು ಪೂರೈಸಿದ WWW.JAINHERITAGECENTRES.COM

೨೬ನೇ ಮೇ ೨೦೨೩ ರಂದು ೨೧ ವರ್ಷಗಳನ್ನು ಪೂರೈಸಿದ WWW.JAINHERITAGECENTRES.COM

  ಕಳೆದ ವರ್ಷದ ನಮ್ಮ ನಿರಂತರ ಚಟುವಟಿಕೆಗಳ ಒಂದು ನೋಟ….

  ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

  • ನಮ್ಮ ೨೦ ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮ
  • ಮೇ ೨೬ ರಿಂದ ಜುಲೈ ೩೧, ೨೦೨೨ ರವರೆಗೆ ಆಯೋಜಿಸಲಾಗಿತ್ತು
  • ೯ ಭೂಮಿಕೆಗಳು, ೩೪ ಆನ್‌ಲೈನ್ ಗೋಷ್ಠಿಗಳು, ೩ ದೇಶಗಳ ೩೮ ಉಪನ್ಯಾಸಕರು
  • ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಡೆದ ಗೋಷ್ಠಿಗಳು
  • ನಾಡೋಜ ಪ್ರೊ. ಹಂಪನಾ ಸರ್ ರವರಿಂದ ಉದ್ಘಾಟನಾ ಉಪನ್ಯಾಸ
  • ಡಾ. ಅಲೋಕ್ ತ್ರಿಪಾಠಿ ಸರ್, ಎಡಿಜಿ, ಎಎಸ್‌ಐ, ನವದೆಹಲಿ ಗೌರವ ಅತಿಥಿಗಳಾಗಿದ್ದರು

  ಹೊಸ ಆವಿಷ್ಕಾರಗಳು: ನವಶೋಧಿತ ಶಾಸನಗಳ ಪ್ರಕಟಣೆ

  • ನವಶೋಧಿತ ೬ ಶಾಸನಗಳ ಪ್ರಕಟಣೆ
  • ಡಾ.ರವಿಕುಮಾರ್ ಕೆ ನವಲಗುಂದ ಅವರ ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳ ೨ ಶಾಸನಗಳು
  • ನಿತಿನ್ ಎಚ್ ಪಿ ಅವರ ಕೊಡಗು ಮತ್ತು ಮಂಡ್ಯ ಜಿಲ್ಲೆಗಳ ೪ ಶಾಸನಗಳು
  • ೨ ದಶಕಗಳ ನಂತರ ಕೊಡಗು ಜಿಲ್ಲೆಯಲ್ಲಿ ನಡೆದ ಜೈನಧರ್ಮದ ಸಂಶೋಧನೆ

  ಪ್ಯೂರ್ ಸೋಲ್: ದಿ ಜೈನ್ ಸ್ಪಿರುಚ್ಯುಯಲ್ ಟ್ರೆಡಿಶನ್ಸ್ – ಲಂಡನ್ನಿನಲ್ಲಿ ಪ್ರದರ್ಶನ

  • ನಿತಿನ್ ಅವರ ಆಯ್ದ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಆಯ್ಕೆ ಮಾಡಲಾಗಿದೆ
  • “ಪ್ಯೂರ್ ಸೋಲ್: ದಿ ಜೈನ ಸ್ಪಿರಿಚುವಲ್ ಟ್ರೆಡಿಶನ್ಸ್” ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ
  • ೧೪ನೇ ಏಪ್ರಿಲ್ ನಿಂದ ೨೪ನೇ ಜೂನ್ ೨೦೨೩ ರವರೆಗೆ ನಡೆಯುತ್ತದೆ
  • ಯುಕೆ ಲಂಡನ್ ವಿಶ್ವವಿದ್ಯಾಲಯದ ಹೆಸರಾಂತ SOAS ನಲ್ಲಿ ನಡೆಯುತ್ತದೆ

  ಜೈನಧರ್ಮಕ್ಕೆ ಸಂಬಂಧಿಸಿದ ಛಾಯಾಚಿತ್ರ ಪೋಸ್ಟ್ ಕಾರ್ಡ್ ಸರಣಿಗಳು

  • ಮಾರ್ಗದರ್ಶನ – ಹೊಂಬುಜ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ
  • ತಂಡದ ಮುಂದಾಳತ್ವ – ಹುಬ್ಬಳ್ಳಿಯ ಶ್ರೀ ಮಹಾವೀರ್ ಕುಂದೂರ್
  • ಮೂರು ವಿಭಿನ್ನ ಛಾಯಾಚಿತ್ರ ಪೋಸ್ಟ್ ಕಾರ್ಡ್ ಸರಣೆಗಳು
  • ಜೈನಧರ್ಮದ ವೈಭವ – ಜೈನ ಪರಂಪರೆ ತಾಣಗಳು ಮತ್ತು ಜೈನ ವಿಗ್ರಹಗಳ ೧೦ ಪೋಸ್ಟ್ ಕಾರ್ಡುಗಳು
  • ಜಿನರತ್ನ ಭೂಷಣರು – ಜೈನ ಆದರ್ಶ ವ್ಯಕ್ತಿಗಳ ೧೦ ಪೋಸ್ಟ್ ಕಾರ್ಡುಗಳು
  • ತೀರ್ಥಂಕರರ ಮೋಕ್ಷ ಸ್ಥಳ – ೨೪ ಪೋಸ್ಟ್ ಕಾರ್ಡುಗಳು

  ಉತ್ತರ ಕರ್ನಾಟಕದ ಜೈನ ಪರಂಪರೆ ತಾಣಗಳ ಅಧ್ಯಯನ

  • ಬಾದಾಮಿ, ಐಹೊಳೆ, ಪಟ್ಟದಕಲ್ಲು, ಲಕ್ಕುಂಡಿ, ಕೊಪ್ಪಳ, ಹಂಪಿ ಮತ್ತು ಆನೆಗೊಂದಿಯ ಜೈನ ಪರಂಪರೆ ತಾಣಗಳ ಅಧ್ಯಯನ
  • ಏಪ್ರಿಲ್ ೨೦೨೩ ರಲ್ಲಿ ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಜೈನಾಲಜಿ ವಿಭಾಗದಿಂದ ಆಯೋಜಿಸಲಾಗಿದ್ದ ಪ್ರವಾಸ
  • ನಿತಿನ್ ಈ ಪಯಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು

  ಜೈನ ಪರಂಪರೆ ಅನ್ವೇಷಣೆಯ ಕ್ಷೇತ್ರಕಾರ್ಯ

  • ಭಾರತದ ಮೂರು ರಾಜ್ಯಗಳಲ್ಲಿ ಹರಡಿರುವ ೬೯ ಜೈನ ಪರಂಪರೆ ತಾಣಗಳಿಗೆ ಭೇಟಿ
  • ಕರ್ನಾಟಕ – ಮಂಡ್ಯ (೧ ತಾಣ), ಹಾಸನ (೨ ತಾಣಗಳು), ಮೈಸೂರು (೧೦ ತಾಣಗಳು), ಬಳ್ಳಾರಿ (೨ ತಾಣಗಳು), ಕೊಪ್ಪಳ (೧ ತಾಣ), ಬಾಗಲಕೋಟೆ (೩ ತಾಣಗಳು), ಬಳ್ಳಾರಿ (೨ ತಾಣಗಳು), ಶಿವಮೊಗ್ಗ (೨ ತಾಣಗಳು),
   ಚಾಮರಾಜನಗರ (೧೦ ತಾಣಗಳು), ಮತ್ತು ಕೊಡಗು (೨೦ ತಾಣಗಳು) ಜಿಲ್ಲೆಗಳಲ್ಲಿ ಹರಡಿರುವ ಜೈನ ಪರಂಪರೆ ತಾಣಗಳು
  • ತಮಿಳುನಾಡು – ಮಧುರೈ ಬಳಿಯ ೩ ತಾಣಗಳು (ಸಮಣಾರ್ ಮಲೈ ಮತ್ತು ತಿರುಪರಂಕುAದ್ರA), ಮೇಳಕಿಧಾರಂ, ಕಳಗುಮಲೈ ಮತ್ತು ಚಿತ್ರಾಲ್
  • ಕೇರಳ – ವೈನಾಡ್ ಪ್ರದೇಶದ ೧೨ ಜೈನ ತಾಣಗಳಿಗೆ ಭೇಟಿ

  ನಿತಿನ್‌ರವರ ಜೈನ ಪರಂಪರೆ ಪಯಣದ ಕುರಿತು ಸಾಕ್ಷ್ಯಚಿತ್ರ

  • ವಿಪ್ರೋ ಲಿಮಿಟೆಡ್‌ನ “ಮಹತ್ವಾಕಾಂಕ್ಷೆಗಳು ಸಾಕಾರಗೊಂಡಾಗ – Ambitions Realized” ಬ್ರ‍್ಯಾಂಡ್ ಅಭಿಯಾನದ ಭಾಗವಾಗಿ ನಿತಿನ್‌ರವರ ಜೈನ ಪರಂಪರೆ ಪಯಣವನ್ನು ದಾಖಲಿಸುವ ಸಾಕ್ಷ್ಯಚಿತ್ರ
  • ೬೬ ದೇಶಗಳಲ್ಲಿರುವ ೨.೫ ಲಕ್ಷ ಜನ ಉದ್ಯೋಗಿಗಳ ನಡುವೆ ಈ ಕಾರ್ಯಕ್ರಮದ ಮೂಲಕ ಗುರುತಿಸಲಾಗಿರುವ ಕೇವಲ ೩ ಜನರಲ್ಲಿ ನಿತಿನ್‌ರವರು ಕೂಡಾ ಒಬ್ಬರು
  • ಜೈನಧರ್ಮಕ್ಕೆ ಸಂಬಂಧಿಸಿದಂತೆ ಕಾರ್ಪೋರೇಟ್ ಸಂಸ್ಥೆಯೊಂದು ನಿರ್ಮಿಸಿರುವ ಮೊಟ್ಟಮೊದಲ ಸಾಕ್ಷ್ಯಚಿತ್ರ

  ಮಾಕೋಡು ಬಸದಿಯ ಜೀರ್ಣೋದ್ಧಾರ

  • ಅಕ್ಟೋಬರ್ ೨೦೧೩ರಲ್ಲಿ ನಮ್ಮ ತಂಡವು ಮೈಸೂರು ಜಿಲ್ಲೆಯ ಮಾಕೋಡು ಗ್ರಾಮದ ಪ್ರಾಚೀನ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಗೆ ಭೇಟಿ ನೀಡಿತ್ತು
  • ನಮ್ಮ ತಂಡವು ಜೈನ ಸಮುದಾಯವನ್ನು ಅದರ ಜೀರ್ಣೋದ್ಧಾರ ಕೈಗೊಳ್ಳುವಂತೆ ಪ್ರೇರೇಪಿಸಿತು
  • ಮಾರ್ಗದರ್ಶನ – ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿ ಜೈನಮಠ; ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗಡೆಯವರು ಮತ್ತು ಮೈಸೂರಿನ ಶ್ರೀ ಎನ್. ಪ್ರಸನ್ನಕುಮಾರ್
  • ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ
  • ೨೦೨೩ರ ಮೇ ೨೭ ಮತ್ತು ೨೮ ರಂದು ಪಂಚಕಲ್ಯಾಣ ಮಹೋತ್ಸವವನ್ನು ನಿಗದಿಪಡಿಸಲಾಗಿದೆ
  • ನಿತಿನ್ ಈ ಜಿನಾಲಯದ ೧೨ನೇ ಶತಮಾನಕ್ಕೆ ಸೇರಿದ ಎರಡು ಅಪ್ರಕಟಿತ ಜೈನ ಶಾಸನಗಳನ್ನು ಪ್ರಕಟಿಸಿದರು

  ಭಾರತೀಯ ಪುರಾತತ್ತ್ವ ಸರ್ವೇಕ್ಷಣಾಲಯ (ASI)ದೊಂದಿಗೆ ಸಭೆ

  • ನಮ್ಮ ತಂಡವು ಎಎಸ್‌ಐನ ನವದೆಹಲಿಯ ಕಛೇರಿಯಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ಆಯೋಜಿಸಿತ್ತು
  • ಸಭೆಯಲ್ಲಿ ಜೈನ ಇತಿಹಾಸ, ಪರಂಪರೆ, ಶಾಸನಶಾಸ್ತ್ರ, ಮತ್ತು ಜೈನ ಸ್ಮಾರಕಗಳ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸವಿವರವಾದ ಚರ್ಚೆಗಳಾದವು

  ನಿಮ್ಮ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ
  ತಮ್ಮೆಲ್ಲರ ಬೆಂಬಲಕ್ಕಾಗಿ ಹೃದಯಪೂರ್ವಕವಾಗಿ ಧನ್ಯವಾದಗಳು! ನಾವು ಸಾಧಿಸಬೇಕದದ್ದು ಇನ್ನೂ ಬಹಳಷ್ಟಿದೆ…..

  ನಮ್ಮ ಜೈನ ಪರಂಪರೆ ಪಯಣದ ಭಾಗವಾಗಲು ಬಯಸುವಿರಾ? ಹಾಗಿದ್ದಲ್ಲಿ info@jainheritagecentres.com ಗೆ ಮಿಂಚಂಚೆಯ ಮೂಲಕ ಸಂಪರ್ಕಿಸಿ ಅಥವಾ +೯೧ ೯೮೮೦೮೧೮೮೬೯ ಗೆ ಕರೆ ಮಾಡಿ

  www.facebook.com/jainheritagecentres | www.twitter.com/jainheritage | www.youtube.com/c/jainheritagecentres | www.instagram.com/jainheritagecentres

  error: Jain Heritage Centres - Celebrating Jain Heritage.....Globally!