ಕನಕಗಿರಿ ಬಾಹುಬಲಿಗೆ ಮಹಾಮಜ್ಜನ

ನೂರಾರು ಭಕ್ತರು ಜಲಕುಂಭ ಹಿಡಿದು ಬಾಹುಬಲಿ ಮೂರ್ತಿಯ ಮಸ್ತಕದ ಮೇಲಿಂದ ಸುರಿಯುತ್ತಿದ್ದ ವಿವಿಧ ದ್ರವ್ಯಗಳು ಒಂದೊಂದಾಗಿ ಬಾಹುಬಲಿಯ ಪಾದಸ್ಪರ್ಶಿಸುವ ದೃಶ್ಯ ನೋಡಿ ಜನರು ಪುಳಕಿತರಾದರು… ಚಾಮರಾಜನಗರ: ತಾಲ್ಲೂಕಿನ ಶ್ರೀಕ್ಷೇತ್ರ ಕನಕಗಿರಿಯ ಒಡಲು ಗುರುವಾರ ಮುಂಜಾನೆಯಿಂದಲೇ ಜಿನಭಕ್ತರಿಂದ ತುಂಬಿ ತುಳುಕುತ್ತಿತ್ತು. ಎಲ್ಲರ ಮನದಲ್ಲಿ ಭಕ್ತಿಯ ರಸ ಸಿಂಚನಗೊಂಡಿತ್ತು. ಎಲ್ಲರೂ ಭಗವಾನ್‌ ಬಾಹುಬಲಿ ಸ್ವಾಮಿಯ ಜಪದಲ್ಲಿ ತಲ್ಲೀನರಾಗಿದ್ದರು. ಸೂರ್ಯ ನೆತ್ತಿ ಸುಡುತ್ತಿದ್ದ. ದೇಶದ ವಿವಿಧ ರಾಜ್ಯಗಳು ಸೇರಿದಂತೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ವರ್ಣವೈಭವದಿಂದ ಕಂಗೊಳಿಸುವ ಗೊಮ್ಮಟನ ವೀಕ್ಷಣೆಗೆ ಸಜ್ಜಾಗಿದ್ದರು. […]

error: Jain Heritage Centres - Celebrating Jain Heritage.....Globally!