Skip to content
Home » ಕನ್ನಡ » ಸುದ್ದಿ-ಸಮಾಚಾರ » ಕೊಡಗು ಜಿಲ್ಲೆಯ ದೊಡ್ಡಕಣಗಾಲಿನಲ್ಲಿ 11ನೇ ಶತಮಾನಕ್ಕೆ ಸೇರಿದ ಜೈನ ಶಾಸನಗಳು ಪತ್ತೆ

ಕೊಡಗು ಜಿಲ್ಲೆಯ ದೊಡ್ಡಕಣಗಾಲಿನಲ್ಲಿ 11ನೇ ಶತಮಾನಕ್ಕೆ ಸೇರಿದ ಜೈನ ಶಾಸನಗಳು ಪತ್ತೆ

    • ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದೊಡ್ಡಕಣಗಾಲು ಗ್ರಾಮದಲಿ ಪತ್ತೆ
    • ದೊಡ್ಡಕಣಗಾಲು ಗ್ರಾಮವು ಸೋಮವಾರಪೇಟೆಯಿಂದ ೧೬ ಕಿ.ಮೀ., ಜಿಲ್ಲಾ ಕೇಂದ್ರ
      ಮಡಿಕೇರಿಯಿಂದ ೬೨ ಕಿ.ಮಿ.ದೂರದಲ್ಲಿದೆ.
    • ತೋಟದ ಮಧ್ಯದಲ್ಲಿ ಪಾಳುಬಿದ್ದಿರುವ ಬಸದಿ ಹಾಗೂ ಅದರ ಪರಿಸರದಲ್ಲಿ
      ಪತ್ತೆಯಾದ ಶಾಸನಗಳು
    • ೧೧ ನೇ ಶತಮಾನಕ್ಕೆ ಸೇರಿದ ಮೂರು ಜೈನ ಶಾಸನಗಳು
    • ಜೈನ ತೀರ್ಥಂಕರರ ಪಾದಪೀಠದಲ್ಲಿ, ಜೀರ್ಣವಾದ ವಿಗ್ರಹದ ಯಕ್ಷಿಯ
      ಪಾದಪೀಠದಲ್ಲಿ ಹಾಗೂ ಕಲ್ಲಿನ ಮೇಲಿರುವ ಶಾಸನ.
    • ಶಾಸನ ತಿಳಿಸುವ ವಿವರ:
      ಶ್ರೀ ತ್ರಿಭುವನಮಲ್ಲ ಕೊಂಗಾಳ್ವದೇವರು ಪರೋಕ್ಷವಿನಯ ಹಾಗೂ ಲೋಕ
      ಕಲ್ಯಾಣಾರ್ಥವಾಗಿ ಈ ವಿಗ್ರಹವನ್ನು ಮಾಡಿಸಿದ ಎಂದು ತಿಳಿಸುತ್ತದೆ
    • ಕ್ಷೇತ್ರಕಾರ್ಯದ ಸಮಯದಲ್ಲಿ ಜೈನ್ ಹೆರಿಟೇಜ್ ಸೆಂಟರ್ಸ್.ಕಾಂನ
      ಸಂಸ್ಥಾಪಕರಾದ ಸಂಶೋಧಕ ಬೆಂಗಳೂರಿನ ನಿತಿನ್ ಹೆಚ್.ಪಿ. ರವರಿಂದ ಪತ್ತೆ
    ಕೊಡಗು ಜಿಲ್ಲೆಯ ದೊಡ್ಡಕಣಗಾಲಿನಲ್ಲಿ 11ನೇ ಶತಮಾನಕ್ಕೆ ಸೇರಿದ ಜೈನಶಾಸನಗಳು ಪತ್ತೆ
    ಕೊಡಗು ಜಿಲ್ಲೆಯ ದೊಡ್ಡಕಣಗಾಲಿನಲ್ಲಿ 11ನೇ ಶತಮಾನಕ್ಕೆ ಸೇರಿದ ಜೈನಶಾಸನಗಳು ಪತ್ತೆ

    ಮಡಿಕೇರಿ, 24  ನವೆಂಬರ್ 2002: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದೊಡ್ಡಕಣಗಾಲು ಗ್ರಾಮದಲ್ಲಿ 11ನೇ ಶತಮಾನಕ್ಕೆ ಸೇರಿದ ಮೂರು ಜೈನಶಾಸನಗಳು ಪತ್ತೆಯಾಗಿವೆ. ಜೈನ್ ಹೆರಿಟೇಜ್ ಸೆಂಟರ್ಸ್.ಕಾಮ್ – www.jainheritagecentres.com  ಅಂತರ್ಜಾಲತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ವಿಪ್ರೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಸಂಶೋಧಕ ಶ್ರೀ ಹೆಚ್.ಪಿ. ನಿತಿನ್‌ರವರು ತಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಶಾಸನಗಳನ್ನು ಪತ್ತೆಮಾಡಿದ್ದಾರೆ.
    ಈ ಶಾಸನಗಳು ದೊಡ್ಡಕಣಗಾಲಿನ ಬಿ.ಇ.ಸಂದೇಶ್ ರವರ ತೋಟದ ಮಧ್ಯದಲ್ಲಿ ಪಾಳುಬಿದ್ದಿರುವ ಬಸದಿ ಹಾಗೂ ಅದರ ಪರಿಸರದಲ್ಲಿ ಪತ್ತೆಯಾಗಿವೆ. ನಿತಿನ್ ರವರು ಕ್ಷೇತ್ರಕಾರ್ಯ ನಿಮಿತ್ತ ಇದೇ ಗ್ರಾಮದಲ್ಲಿ ದಾಖಲಾಗಿದ್ದ ಮತ್ತೊಂದು ದಾಖಲಿತ ಜೈನಶಾಸನವನ್ನು ಹುಡುಕುತ್ತಾ ಸಾಗಿದಾಗ ಪತ್ತೆಯಾಗಿವೆ.

    ಪಾದಪೀಠ ಶಾಸನವಿರುವ ತೀರ್ಥಂಕರರ ವಿಗ್ರಹದೊಂದಿಗೆ ಸಂಶೋಧಕ ನಿತಿನ್ ಹೆಚ್.ಪಿ.
    ಪಾದಪೀಠ ಶಾಸನವಿರುವ ತೀರ್ಥಂಕರರ ವಿಗ್ರಹದೊಂದಿಗೆ ಸಂಶೋಧಕ ನಿತಿನ್ ಹೆಚ್.ಪಿ.

    ಪತ್ತೆಯಾದ ಮೂರು ಶಾಸನಗಳ ವಿವರ

    • ಜೈನ ತೀರ್ಥಂಕರರ ಪಾದಪೀಠದಲ್ಲಿನ ಶಾಸನ.
    • ಜೀರ್ಣವಾದ ವಿಗ್ರಹದ ಯಕ್ಷಿಯ ಪಾದಪೀಠದಲ್ಲಿ ಪತ್ತೆಯಾದ ಶಾಸನ.
    • ಕಲ್ಲಿನ ಮೇಲಿರುವ ಶಾಸನ.
    ಪಾದಪೀಠ ಶಾಸನಯುಕ್ತ ಜೈನ ತೀರ್ಥಂಕರರ ವಿಗ್ರಹ.
    ಪಾದಪೀಠ ಶಾಸನಯುಕ್ತ ಜೈನ ತೀರ್ಥಂಕರರ ವಿಗ್ರಹ.

    ಜೈನ ತೀರ್ಥಂಕರರ ಪಾದಪೀಠದಲ್ಲಿನ ಶಾಸನ – 3’3” ಉದ್ದವಿರುವ ಕಾಯೋತ್ಸರ್ಗ ಭಂಗಿಯಲ್ಲಿರುವ ತೀರ್ಥಂಕರರ ವಿಗ್ರಹದ ಪಾದಪೀಠದಲ್ಲಿ ಪತ್ತೆಯಾದ ಶಾಸನ.

    ಶಾಸನದ ಸಾರಾಂಶ – ”ಮೂಲಸಂಘ ಕುಂದಕೊAಡಾನ್ವಯ ಪೊಸ್ತಕಗಚ್ಛದ ಶ್ರೀ ಮೇಘಚಂದ್ರ ತ್ರೆöÊವಿದ್ಯಾದೇವರ ಶಿಷ್ಯರಾದ ಶ್ರೀ ಪ್ರಭಾಚಂದ್ರ ಸಿದ್ಧಾಂತ ದೇವರ ಶಿಷ್ಯ ಶ್ರೀ ತ್ರಿಭುವನಮಲ್ಲ ಕೊಂಗಾಳ್ವದೇವರು ಪರೋಕ್ಷವಿನಯ ಹಾಗೂ ಲೋಕ ಕಲ್ಯಾಣಾರ್ಥವಾಗಿ ಈ ವಿಗ್ರಹವನ್ನು ಮಾಡಿಸಿದ ಎಂದು ಶಾಸನವು ತಿಳಿಸುತ್ತದೆ”.

    ಕಾಲ – ”ಶ್ರೀ ತ್ರಿಭುವನಮಲ್ಲ ಕೊಂಗಾಳ್ವದೇವರ ಹೆಸರು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇತರ ಶಾಸನೋಕ್ತ ಆಧಾರಗಳ ಮೂಲಕ ತ್ರಿಭುವನಮಲ್ಲ ಕೊಂಗಾಳ್ವದೇವರ ಕಾಲವು ಕ್ರಿ.ಶ. 1066 ರಿಂದ 1100 ಎಂದು ತಿಳಿದು ಬರುತ್ತದೆ. ಈ ಹಿನ್ನೆಲೆಯಲ್ಲಿ ಈ ಶಾಸನವು 11ನೇ ಶತಮಾನಕ್ಕೆ ಸೇರಿದ್ದೆಂದು ನಿರ್ಧರಿಸಬಹುದೆಂದು” ನಿತಿನ್ ರವರು ತಿಳಿಸಿದ್ದಾರೆ.

    ಜೀರ್ಣವಾದ ವಿಗ್ರಹದ ಯಕ್ಷಿಯ ಪಾದಪೀಠದಲ್ಲಿ ಪತ್ತೆಯಾದ ಶಾಸನ

    • ಯಕ್ಷಿ ವಿಗ್ರಹದ ಪಾದಪೀಠದಲ್ಲಿ ನಾಲ್ಕು ಸಾಲುಗಳಿರುವ ಶಾಸನ.
    • ಶಾಸನದ ಸಾರಾಂಶ – ಶಾಸನದ ಅಕ್ಷರಗಳು ಅಲ್ಲಲ್ಲಿ ತೃಟಿತವಾಗಿದ್ದು ನಾಲ್ಕು ಸಾಲುಗಳಿರುವ ಶಾಸನವು ಮುರಿದುಹೋದ ಶಾಸನದ ಭಾಗವಾದ್ದರಿಂದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಆದರೆ ಶಾಸನದಲ್ಲಿ ”ಮೂಲಸಂಘ” ಹಾಗೂ ”ಪುಣ್ಯಾರ್ತ” ಎಂಬ ಪದಗಳನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಈ ಶಾಸನವನ್ನು ಕೆತ್ತಿಸಿರುವ ವ್ಯಕ್ತಿಯು ಮೂಲಸಂಘಕ್ಕೆ ಸೇರಿರಬೇಕು ಅಥವಾ ಮೂಲಸಂಘಕ್ಕೆ ಸೇರಿದ ಗುರುಗಳ ಶಿಷ್ಯರಾಗಿದ್ದು ಸರ್ವಜನರ ಒಳಿತಿಗಾಗಿ ಈ ವಿಗ್ರಹವನ್ನು ಮಾಡಿಸಿ ಶಾಸನವನ್ನು ಕೆತ್ತಿಸಿರಬೇಕು, ಈ ಶಾಸನದಲ್ಲಿ ”ಮೂಲಸಂಘ” ಎಂಬ ಪದವಿದ್ದು ಇದು ಜೈನ ಶಾಸನವೆಂದು ನಿಶ್ಚಯಿಸಬಹುದು.
    • ಶಾಸನದ ಕಾಲ – ಶಾಸನದ ಲಿಪಿಯ ಆಧಾರದ ಮೇಲೆ ಶಾಸನವು 11ನೇ ಶತಮಾನಕ್ಕೆ ಸೇರಿದ್ದೆಂದು ನಿರ್ಧರಿಸಬಹುದು.
    • ಕಲ್ಲಿನ ಮೇಲಿರುವ ಶಾಸನ – ಶಾಸನದ ಮೇಲ್ಭಾಗಲ್ಲಿ ಸೂರ್ಯ ಚಂದ್ರರ ಕೆತ್ತನೆಯನ್ನು ಕಾಣಬಹುದಾದ ಈ ಶಾಸನದಲ್ಲಿ ಅಲ್ಲಲ್ಲಿ ಕೆಲವು ಅಕ್ಷರಗಳನ್ನು ಕಾಣಬಹುದು.  ೧೪ ಸಾಲುಗಳಿರುವ ಈ ಶಾಸನವು ಸಾಕಷ್ಟು ತೃಟಿತವಾಗಿರುವುದರಿಂದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
    ಪಾದಪೀಠದಲ್ಲಿ ನಾಲ್ಕು ಸಾಲುಗಳ ಶಾಸನವಿರುವ ಯಕ್ಷಿ ವಿಗ್ರಹ.
    ಪಾದಪೀಠದಲ್ಲಿ ನಾಲ್ಕು ಸಾಲುಗಳ ಶಾಸನವಿರುವ ಯಕ್ಷಿ ವಿಗ್ರಹ.

    ”ಈ ಬಸದಿ, ವಿಗ್ರಹ ಹಾಗೂ ಶಾಸನಗಳು ಲಭ್ಯವಾಗಿರುವ ಈ ಜಾಗವು ಕೊಡವರಿಗೆ ಸೇರಿದ್ದು ಪ್ರತಿ ವರ್ಷ ಏಪ್ರಿಲ್ ತಿಂಗಳಿನ ಮೊದಲ ಮಳೆಯ ನಂತರ ವಿಶೇಷ ಪೂಜೆಯನ್ನು ನೆರವೇರಿಸುತ್ತಾರೆ. ಈ ಪ್ರದೇಶದಲ್ಲಿ ಜೈನ ಸಮಾಜದ ಯಾವುದೇ ಮನೆಗಳಿಲ್ಲ. ಜೀರ್ಣಾವಸ್ಥೆಯಲ್ಲಿರುವ ಈ ಬಸದಿಯ ಜೀರ್ಣೋದ್ಧಾರ ಕೈಗೊಂಡು ತೀರ್ಥಂಕರರ ವಿಗ್ರಹದ ನಿತ್ಯ ಪೂಜೆಗೆ ವ್ಯವಸ್ಥೆ ಕಲ್ಪಿಸಿ, ಕಳೆದ ಕೆಲವು ಶತಮಾನಗಳಿಂದ ಈ ಜಿಲ್ಲೆಯಲ್ಲಿ ನಶಿಸಿ ಹೋಗಿರುವ ಜೈನಧರ್ಮದ ಪ್ರಾಚೀನತೆಯನ್ನು ಕಾಪಾಡಲು ಜೈನ ಸಮಾಜದವರು ಕೈ ಜೋಡಿಸಬೇಕೆಂದು”, ಎಂದು ಕಳೆದ ಎರಡು ದಶಕಗಳಿಂದ ಜೈನ ಪರಂಪರೆ ಮತ್ತು ಪುರಾತತ್ತ್ವದ ಕುರಿತು ಸಂಶೋಧನಾ ನಿರತರಾದ ನಿತಿನ್ ರವರು ತಿಳಿಸಿದ್ದಾರೆ.

    ದೊಡ್ಡಕಣಗಾಲ್ ಶನಿವಾರಸಂತೆಯಿAದ 12 ಕಿ.ಮಿ., ತಾಲೂಕು ಕೇಂದ್ರ ಸೋಮವಾರಪೇಟೆಯಿಂದ 16 ಕಿ.ಮಿ., ಜಿಲ್ಲಾ ಕೇಂದ್ರ ಮಡಿಕೇರಿಯಿಂದ 62 ಕಿ.ಮಿ. ಹಾಗೂ ಹಾಸನದಿಂದ 62 ಕಿ.ಮಿ. ದೂರದಲ್ಲಿದೆ.

    ಈ ಶಾಸನವನ್ನು ಓದಲು ಸಹಾಯಮಾಡಿ ಅದಕ್ಕೆ ಸಂಬAಧಿಸಿದ ಸಂಶೋಧನೆಗೆ ಮಾರ್ಗದರ್ಶನ ನೀಡಿದ ಹರಿಹರದ ಡಾ. ರವಿಕುಮಾರ್ ಕೆ. ನವಲಗುಂದ, ಸಂಶೋಧನೆಗೆ ಸಹಕರಿಸಿದ ತಮ್ಮ ತಂದೆಯವರಾದ ಡಾ.ಹೆಚ್.ಎ.ಪಾರ್ಶ್ವನಾಥ್, ತಾಯಿಯವರಾದ ಶ್ರೀಮತಿ ಹೆಚ್.ಎ.ಜಯಂತಿ,  ಸ್ಥಳೀಯರಾದ ದೊಡ್ಡಕಣಗಾಲಿನ ಬಿ.ಇ. ಸಂದೇಶ್ ರವರಿಗೆ ನಿತಿನ್‌ರವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    error: Jain Heritage Centres - Celebrating Jain Heritage.....Globally!