ಸಲ್ಲೇಖನ : ಶ್ರವಣಬೆಳಗೊಳದಲ್ಲಿ ಜೈನ ಸ್ವಾಮಿಗಳ ಸಮಾವೇಶ

ಶ್ರವಣಬೆಳಗೊಳ, ಸೆಪ್ಟೆಂಬರ್ 02, 2015: ಸಲ್ಲೇಖನಾ ವ್ರತ ಆತ್ಮಹತ್ಯೆಗೆ ಸಮಾನವಾದ ಶಿಕ್ಷಾರ್ಹ ಅಪರಾಧವೆಂದು ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಇನ್ನು ಮುಂದೆ ಜೈನ ಸಮಾಜ ಪ್ರತಿಭಟನೆ ಅಥವಾ ಮೌನ ಮೆರವಣಿಗೆ ನಡೆಸಬಾರದೆಂದು ಸಮಸ್ತ ಜೈನ ಮಠಗಳ ಪಟ್ಟಾಚಾರ್ಯ ಸ್ವಾಮೀಜಿಗಳ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಮಾವೇಶದ ನಂತರ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಕಾಲಕ್ಕೆ ತಕ್ಕ ಹಾಗೆ ಧರ್ಮದ ಬದಲಾವಣೆ […]

ಸಲ್ಲೇಖನ ವ್ರತವನ್ನಾಚರಿಸುತ್ತಿರುವ ಜೈನ ಮುನಿ ಯೊಬ್ಬರ ಚಿತ್ರ.

ಸಲ್ಲೇಖನ ಮರಣವು ಅಮಾನವೀಯ ಆಚರಣೆಯೇ?

– ಲೇಖಕರು: ಷ. ಶೆಟ್ಟರ್ (ಕೃಪೆ: ಪ್ರಜಾವಾಣಿ) ಆಧುನಿಕ ಸಂವಿಧಾನದೊಡನೆ ಅನಾದಿ ಧಾರ್ಮಿಕ ಸಂಪ್ರದಾಯದ ಘರ್ಷಣೆ – ಜೈನ ಸಮುದಾಯದ ‘ಸಲ್ಲೇಖನ ವ್ರತ’ದ ಆಚರಣೆಯನ್ನು ರಾಜಸ್ತಾನ ಹೈಕೋರ್ಟ್‌ ನಿಷೇಧಿಸಿದೆ. ಸಲ್ಲೇಖನ ವ್ರತ ಕಾನೂನುಬಾಹಿರ, ಇದು ಶಿಕ್ಷಾರ್ಹ ಅಪರಾಧ ಎನ್ನುವುದು ಕೋರ್ಟ್‌ ಅಭಿಪ್ರಾಯ. ಆದರೆ, ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ‘ಸಲ್ಲೇಖನ’ ವ್ರತದ ಆಚರಣೆಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ರಾಜ್ಯಾಂಗಗಳು ಗೌರವದಿಂದ ಕಂಡಿವೆ. ಮರಣ ಸಂಹಿತೆ ಜೈನಸಿದ್ಧಾಂತದಲ್ಲಿ ‘ಆತ್ಮಹತ್ಯೆ’ಯನ್ನು ಸಂಕೇತಿಸುವ ಪದವಿಲ್ಲ, ಆದರೆ ದೇಹತ್ಯಾಗವನ್ನು ಗುರುತಿಸುವ […]

error: Jain Heritage Centres - Celebrating Jain Heritage.....Globally!