Skip to content
Home » ಕನ್ನಡ » ಸುದ್ದಿ-ಸಮಾಚಾರ » ಪ್ರೊ. ಹಂಪನಾರಿಗೆ ಅಂತಾರಾಷ್ಟ್ರೀಯ ಕಮ್ಮಟಕ್ಕೆ ಕರೆ

ಪ್ರೊ. ಹಂಪನಾರಿಗೆ ಅಂತಾರಾಷ್ಟ್ರೀಯ ಕಮ್ಮಟಕ್ಕೆ ಕರೆ

    ಬೆಂಗಳೂರು, ಫೆಬ್ರವರಿ ೨೨, ೨೦೧೭: ಗ್ರೇಟ್ ಬ್ರಿಟನ್ನಿನ ಲಂಡನ್ ವಿಶ್ವವಿದ್ಯಾಲಯದ ಭಾಗವಾದ ಪ್ರಾಚ್ಯ ಮತ್ತು ಆಫ್ರಿಕ ಅಧ್ಯಯನ ವಿಭಾಗವು – ಬೌದ್ಧ ಧರ್ಮ ಮತ್ತು ಜೈನ ಧರ್ಮಗಳ ಅಂತರ್ಸಂಬಂಧ –  ಕುರಿತು ಅಂತರರಾಷ್ಟ್ರೀಯ ಕಮ್ಮಟ ಏರ್ಪಡಿಸಿದೆ,ಇದು ಹತ್ತೊಂಬತ್ತನೆಯ ವಾರ್ಷಿಕ ಕಾರ್ಯಕ್ರಮವಾಗಿದ್ದು  ಮುಂದಿನತಿಂಗಳು, ಮಾರ್ಚಿ 17 ಮತ್ತು 18 ರಂದು ಭವ್ಯ ಬ್ರೂನೈ ಭವನದಲ್ಲಿ ನಡೆಯುತ್ತದೆ. ಈ ಕಮ್ಮಟದಲ್ಲಿ ಜಪಾನಿನ ಮಿಯಜಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಷಿನ್ ಫೂಜಿನಾಗ ಶಿಖರೋಪನ್ಯಾಸ ನೀಡುವರು. ಜರ್ಮನಿಯ ಬಾನ್ ವಿಶ್ವವಿದ್ಯಾಲಯದ ಪ್ರೊ.ಜೂಲಿಯ ಹೆಗೆವಾಲ್ಡರು- ಜಿನಪಾದ ಮತ್ತು ಬುದ್ಧಪಾದ – ಕುರಿತು ವಿಶೇಷ ತೌಲನಿಕ ಉಪನ್ಯಾಸ ಮಾಡುವರು.ಇವರಲ್ಲದೆ ಈ ಎರಡು ದಿನಗಳ ಕಮ್ಮಟದಲ್ಲಿ ಅಮೆರಿಕ, ಜಪಾನ್, ಜರ್ಮನಿ, ಫ್ರಾನ್ಸ, ಬೆಲ್ಜಿಯಮ್ ದೇಶಗಳಿಂದ ಆಹ್ವಾನಿತ ವಿದ್ವಾಂಸರು ಸಂಶೋಧನ ಪ್ರಬಂಧಗಳನ್ನು ಮಂಡಿಸುವರು. ಭಾರತದಿಂದ ಕರ್ನಾಟಕದ ಹಿರಿಯ ಸಾಹಿತಿ ನಾಡೋಜ ಪ್ರೊ.ಹಂಪನಾ ಆಹ್ವಾನಿತರಾಗಿದ್ದಾರೆ. – ಜೈನ್ ಹೆರಿಟೇಜ್ ಸೆಂಟರ್ಸ್ ನ್ಯೂಸ್ ಸರ್ವೀಸ್

    error: Jain Heritage Centres - Celebrating Jain Heritage.....Globally!