12ನೇ ಶತಮಾನಕ್ಕೆ ಸೇರಿದ ಶಾಸನೋಕ್ತ ಅರ್ಧ ಸಹಸ್ರಕೂಟ ವಿಗ್ರಹ ಬೆಳಗಾವಿಯಲ್ಲಿ ಪತ್ತೆ

ಬೆಳಗಾವಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಡಿಪೋ 2ರ ಕಾಂಪೌಂಡ್ ಗೋಡೆಯ ಪಾಯ ತೆಗೆಯುವ ಸಂದರ್ಭದಲ್ಲಿ 12ನೇ ಶತಮಾನಕ್ಕೆ ಸೇರಿದ ವಿಶಿಷ್ಟವಾದ ಅರ್ಧ ಸಹಸ್ರಕೂಟ ಜೈನ ವಿಗ್ರಹವು 12 ಫೆಬ್ರವರಿ 2020 ರಂದು ಪತ್ತೆಯಾಗಿದೆ. ವಿಗ್ರಹವನ್ನು ಬೆಳಗಾವಿಯ ಕೋಟೆಯೊಳಗಿರುವ ಕಮಲ ಬಸದಿಯ ಆವರಣಕ್ಕೆ ಸಾಗಿಸಲಾಗಿದೆ. ವಿಗ್ರಹದ ಮೇಲೆ ಶಾಸನವೊಂದು ಪತ್ತೆಯಾಗಿದ್ದು ಇದನ್ನು ಬೆಳಗಾವಿಯ ಮಾಹಿತಿ ತಂತ್ರಜ್ಞಾನ ತಜ್ಞ ಹಾಗೂ ಜೈನ ಪುರಾತತ್ತ್ವ ಉತ್ಸಾಹಿ ಬೆಳಗಾವಿಯ ಶ್ರೀ ಬ್ರಹ್ಮಾನಂದ ಶ್ರೀಕಾಂತ್ ಚಿಪ್ರೆ ಅವರು ಸಂಶೋಧಿಸಿ ಪ್ರಕಟಿಸಿದ್ದಾರೆ. ವಿಶಿಷ್ಟ […]

ಗೇರುಸೊಪ್ಪೆ ಪಾರ್ಶ್ವನಾಥ ಸ್ವಾಮಿ ಬಸದಿ ಹಾಗೂ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ಪೂಜೆ

ಗೇರುಸೊಪ್ಪೆ, 9 ಫೆಬ್ರವರಿ 2020: ಸಾಳುವ ಅರಸರ ರಾಜಧಾನಿ ಪುರಾತನ ಜೈನ ಕ್ಷೇತ್ರ ಗೇರುಸೊಪ್ಪೆಯ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಹಾಗೂ ಮಹಾಮಾತೆ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವವು ವೈಭವಯುತವಾಗಿ ನೆರವೇರಿತು. ಮೂಡುಬಿದಿರೆಯ ಭಾರತ ಭೂಷಣ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ನೂರಾ ಎಂಟು ಕಳಶಗಳ ಮಹಾಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ; ಜಗನ್ಮಾತೆ ಜ್ವಾಲಾಮಾಲಿನಿ ಅಮ್ಮನವರಿಗೆ 24 ಕಲಶಾಭಿಷೇಕ, […]

Neminath Tirthankar idol with an inscription on its pedestal.

ಹಾಸನದ ದೊಡ್ಡ ಬಸದಿಯಲ್ಲಿ 12 ರಿಂದ 15ನೇ ಶತಮಾನಕ್ಕೆ ಸೇರಿದ ನಾಲ್ಕು ಜೈನ ಶಾಸನಗಳು ಪತ್ತೆ

ಹಾಸನ, 20 ಜನವರಿ 2020: ಹಾಸನದ ದೊಡ್ಡ ಬಸದಿಯಲ್ಲಿ 12 ರಿಂದ 15ನೇ ಶತಮಾನಕ್ಕೆ ಸೇರಿದ ಅಪರೂಪದ ನಾಲ್ಕು ಜೈನ ಶಿಲಾ ಶಾಸನಗಳು ಪತ್ತೆಯಾಗಿವೆ. ಇವುಗಳನ್ನು ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಚ್ ಪಿ ನಿತಿನ್ ಅವರು ತಮ್ಮ ಕ್ಷೇತ್ರ ಕಾರ್ಯದ ಸಮಯದಲ್ಲಿ ಇತ್ತೀಚೆಗೆ ಪತ್ತೆ ಮಾಡಿದ್ದಾರೆ.ಹಾಸನ ನಗರದ ದೇವಿಗೆರೆ ಸಮೀಪದಲ್ಲೇ ಇರುವ ದೊಡ್ಡ ಬಸದಿಯ ಮೂಲ ಸ್ವಾಮಿಯಾದ ಪಾರ್ಶ್ವನಾಥ ತೀರ್ಥಂಕರರು, ಮೊದಲ ಅಂತಸ್ತಿನಲ್ಲಿದ್ದ ನೇಮಿನಾಥ ತೀರ್ಥಂಕರರು, ಬಸದಿಯ ನವರಂಗದಲ್ಲಿರುವ […]

ಆತ್ಮ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣ ಮಾಡುವುದು ಮಠಾಧೀಶರ ಕರ್ತವ್ಯ – ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳ, 8 ಡಿಸೆಂಬರ್ 2019:  ಆತ್ಮ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣ ಮಾಡುವುದು ಮಠಾಧೀಶರ ಕರ್ತವ್ಯವಾಗಿದ್ದು, ಸರ್ವಧರ್ಮ ಸಮನ್ವಯತೆ ಸಾಧಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೇಳಿದರು.ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮೀಜಿಯವರ 50 ನೇ ವರ್ಷದ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಆಶಿರ್ವಚನ ನೀಡಿ ಮಾತನಾಡಿದ ಅವರು, ರಾಜಕೀಯದಿಂದ ಮಠಾಧಿಪತಿಗಳು ದೂರ ಇರಬೇಕು. ಆಗ ಮಠ-ಮಾನ್ಯಗಳು ಸಮಾಜಮುಖಿಯಾಗಿರುತ್ತವೆ ಎಂದರು.ತುಂಬಾ ಕಷ್ಟದ ಸಂದರ್ಭದಲ್ಲಿ ಈ ಜವಾಬ್ದಾರಿ ವಹಿಸಿಕೊಂಡು ಶ್ರದ್ಧೆ, […]

Front/central portion of the Jain hero stone found at Gerusoppa.

ಗೇರುಸೊಪ್ಪೆಯಲ್ಲಿ 16ನೇ ಶತಮಾನಕ್ಕೆ ಸೇರಿದ ಅಪರೂಪದ ಜೈನ ವೀರಗಲ್ಲು ಪತ್ತೆ

ಗೇರುಸೊಪ್ಪ: ಸಾಳುವ ರಾಜಮನೆತನದ ರಾಜಧಾನಿಯಾಗಿ ಹಲವಾರು ವರ್ಷಗಳ ಕಾಲ ಮೆರೆದ ಗೇರುಸೊಪ್ಪೆ/ಗೇರುಸೊಪ್ಪ (ಹೊನ್ನಾವರ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆ)ದಲ್ಲಿ  16ನೇ ಶತಮಾನಕ್ಕೆ ಸೇರಿದ  ವಿಶಿಷ್ಟವಾದ ಸ್ತಂಭ ರೂಪದ ಜೈನ ವೀರಗಲ್ಲೊಂದು ಪತ್ತೆಯಾಗಿದೆ. ಇದನ್ನು ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್ ಪಿ ನಿತಿನ್ ಅವರು ತಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಇತ್ತೀಚೆಗೆ ಪತ್ತೆ ಮಾಡಿದ್ದಾರೆ.ಕೆಲವು ವರ್ಷಗಳ ಹಿಂದೆ ಗೇರುಸೊಪ್ಪೆ ಅಡವಿಯ ಮಧ್ಯದಲ್ಲಿ ಸಿಕ್ಕ ಈ ವೀರಗಲ್ಲನ್ನು ಬಸದಿಯ ಆವರಣದಲ್ಲಿ ಇತರ ಸಾಮಾನ್ಯ […]

Sallekhana Memorial inscription of 12th century of a Jain woman found at Hombuja/Humcha.

ಹೊಂಬುಜದಲ್ಲಿ ನಿಶಧಿ ಶಾಸನ ಹಾಗೂ ಪಟ್ಟಿಕಾ ಶಾಸನಗಳು ಪತ್ತೆ

+ ಹೊಂಬುಜದ ಕುಮದ್ವತಿ ನದಿ ಉಗಮ ಸ್ಥಾನದಲ್ಲಿ ದೊರೆತದ್ದು+ 12ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ಮಹಿಳೆಯೊಬ್ಬಳಿಗೆ ಸೇರಿದ ನಿಶಧಿ ಸ್ಮಾರಕ+ 17-18ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ನಾಲ್ಕು ಪಟ್ಟಿಕಾ ಶಾಸನಗಳು+ ಶಿವಮೊಗ್ಗದ ಆರ್. ಶೇಜೇಶ್ವರ ರವರಿಂದ ಪತ್ತೆ ಹೊಂಬುಜ, ೩ ನವೆಂಬರ್ ೨೦೧೯: ಹೊಂಬುಜದ ಕುಮದ್ವತಿ ನದಿ ಉಗಮ ಸ್ಥಾನದ ತೀರ್ಥ ಕೋಳದ ಹತ್ತಿರ ಸಾಂತರಸರ ಕಾಲದ ಕ್ರಿ.ಶ. ೧೨ನೇ ಶತಮಾನದ ಮಹಿಳಾ ನಿಷಿಧಿ ಶಾಸನ ಹಾಗೂ ೧೭-೧೮ ನೇ ಶತಮಾನದಲ್ಲಿ ತೀರ್ಥಕೋಳ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ನಾಲ್ಕು […]

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜೈನ ಬಸದಿ ಹಾಗೂ ವಿಗ್ರಹಗಳ ಕುರಿತ ಛಾಯಾಚಿತ್ರ ಪೋಸ್ಟ್‌ಕಾರ್ಡ್‍ಗಳು ಅಂಚೆ ಇಲಾಖೆಯಿಂದ ಬಿಡುಗಡೆ

ಮಂಗಳೂರು, 12 ಅಕ್ಟೋಬರ್ 2019: ಕರ್ನಾಟಕ ಪೋಸ್ಟಲ್ ಸರ್ಕಲ್, ಅಂಚೆ ಇಲಾಖೆ, ಭಾರತ ಸರ್ಕಾರದ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜೈನ ಬಸದಿ ಹಾಗೂ ವಿಗ್ರಹಗಳ ಕುರಿತ ಛಾಯಾಚಿತ್ರ ಪೋಸ್ಟ್‌ಕಾರ್ಡ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಅಂಚೆ ಇಲಾಖೆಯ ವತಿಯಿಂದ ನಡೆಯುತಿರುವ 12ನೇ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನವಾದ KARNAPEX-2019 ಕರ್ನಾಪೆಕ್ಸ್-೨೦೧೯ ನ ಸಮಾರಂಭದಲ್ಲಿ ಜಸ್ಟಿಸ್ ಎನ್.ಸಂತೋಷ್ ಹೆಗ್ಡೆಯವರು ಬಿಡುಗಡೆ ಮಾಡಿದರು. ನೇರಂಕಿ ಪಾರ್ಶ್ವನಾಥ್ ರವರು ಜೈನ ಸಮಾಜದ ಪ್ರತಿನಿಧಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಏಕಕಾಲದಲ್ಲಿ ಹತ್ತು […]

ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ವಾರ್ಷಿಕ ಸಮ್ಮೇಳನ

ಹೊಂಬುಜ, 5 ಅಕ್ಟೋಬರ್ 2019: ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ರಾಜ್ಯ ಸಮ್ಮೇಳನವು ಅಕ್ಟೋಬರ್ 18 ರಿಂದ 20ರ ವರೆಗೆ ನಡೆಯಲಿದೆ. ಹೊಂಬುಜ ಜೈನಮಠದ ಆಶ್ರಯದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತದಿಂದ ಸುಮಾರು 300-350 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ರತಿನಿಧಿಗಳು ಕರ್ನಾಟಕದ ಇತಿಹಾಸ, ಸಂಸ್ಕೃತಿ ಹಾಗೂ ಶಾಸನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಕಳೆದ ರಾಜ್ಯ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನ ”ಇತಿಹಾಸ ದರ್ಶನ” ಸಂಪುಟ 34ರ ಬಿಡುಗಡೆ ಈ ಸಂದರ್ಭದಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ […]

ಸಂಸೆ ಶಾಂತಿನಾಥ ಬಸದಿಯಲ್ಲಿ ಎರಡು ಜೈನ ಶಾಸನಗಳು ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆಯ ಶ್ರೀ ಶಾಂತಿನಾಥ ಬಸದಿಯಲ್ಲಿ ಪತ್ತೆಯಾದ ಶಾಸನಗಳು 15-16 ಹಾಗೂ 19ನೇ ಶತಮಾನಕ್ಕೆ ಸೇರಿದ ಶಾಸನಗಳು ಚವ್ವೀಸ(ಇಪ್ಪತ್ತನಾಲ್ಕು) ತೀರ್ಥಂಕರರ ಪಾದಪೀಠ ಹಾಗೂ ‘ಶ್ರುತ ಸ್ಕಂದ’ದ ಫಲಕದ ಪೀಠದಲ್ಲಿ ಪತ್ತೆಯಾದ ಶಾಸನ ಪಿಹೆಚ್.ಡಿ. ಸಂಶೋಧನಾ ವಿದ್ಯಾರ್ಥಿ ಕಳಸದ ಕು. ಸುಪ್ರೀತ ಕೆ.ಎನ್.ರವರ ಕ್ಷೇತ್ರಕಾರ್ಯದ ಸಮಯದಲ್ಲಿ ದೊರೆತ ಶಾಸನಗಳು ಕಳಸ (ಚಿಕ್ಕಮಗಳೂರು ಜಿಲ್ಲೆ), 18 ಸೆಪ್ಟೆಂಬರ್, 2019: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆಯ ಶ್ರೀ ಶಾಂತಿನಾಥ ಬಸದಿಯಲ್ಲಿ ಎರಡು ಜೈನ ಶಾಸನಗಳು ಪತ್ತೆಯಾಗಿವೆ. […]

ಹಿರೇಹಟ್ಟಿ ಹೊಳಿ ಗ್ರಾಮದಲ್ಲಿ ಪುರಾತನವಾದ ಜೈನ ತೀರ್ಥಂಕರ ವಿಗ್ರಹಗಳು ಪತ್ತೆ

ಹಿರೇಹಟ್ಟಿ ಹೊಳಿ (ಖಾನಾಪುರ ತಾಲೂಕು, ಬೆಳಗಾವಿ ಜಿಲ್ಲೆ, ಕರ್ನಾಟಕ), 11 ಆಗಸ್ಟ್ 2019: ಪುರಾತನವಾದ ಜೈನ ತೀರ್ಥಂಕರ ವಿಗ್ರಹಗಳು ಬೆಳಗಾವಿ ಜಿಲ್ಲೆಯ, ಖಾನಾಪುರ ತಾಲೂಕಿನ, ಹಿರೇಹಟ್ಟಿ ಹೊಳಿ ಗ್ರಾಮದಲ್ಲಿ ಪತ್ತೆಯಾಗಿದೆ. ದಿನಾಂಕ 11 ಆಗಸ್ಟ್ 2019ರಂದು ನೆಲ ಅಗೆಯುವ ಸಮಯದಲ್ಲಿ ಈ ವಿಗ್ರಹಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದು ಚತುರ್ಮುಖ ವಿಗ್ರಹ ಹಾಗೂ 5 ತೀರ್ಥಂಕರ ವಿಗ್ರಹ (1 ಕಾಯೋತ್ಸರ್ಗ ಭಂಗಿಯಲ್ಲಿನ ಕಲ್ಲಿನ ವಿಗ್ರಹ, 2 ಪದ್ಮಾಸನ ಭಂಗಿಯಲ್ಲಿರುವ ಮಾರ್ಬಲ್ ವಿಗ್ರಹಗಳು, 1 ಪದ್ಮಾಸನ ಭಂಗಿಯಲ್ಲಿರುವ ಲೋಹದ ವಿಗ್ರಹ, […]

ಉತ್ತರ ಕರ್ನಾಟಕದ ಪ್ರವಾಹ – ಶ್ರವಣಬೆಳಗೊಳ ಜೈನ ಮಠದ ವತಿಯಿಂದ ರೂ 35 ಲಕ್ಷಗಳ ನೆರವು

ಶ್ರವಣಬೆಳಗೊಳ, 11 ಆಗಸ್ಟ್ 2019:         ಉತ್ತರ ಕರ್ನಾಟಕ ಭಾಗದ ನೆರೆ ಪೀಡಿತ ಸಂತ್ರಸ್ತರಿಗೆ ನೆರವಾಗಲು ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠವು ಆಹಾರ ಸಾಮಗ್ರಿ, ಔಷದಿಯನ್ನು ಸರಬರಾಜು ಮಾಡಲು ರೂ. 25 ಲಕ್ಷ ಹಾಗೂ ಮುಖ್ಯ ಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ರೂ. 10 ಲಕ್ಷ ಸೇರಿ ಒಟ್ಟು ರೂ. 35 ಲಕ್ಷಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ತಿಳಿಸಿದೆ. ರಾಜ್ಯದಲ್ಲಿ ಈ ಹಿಂದೆಯೂ ಮಳೆಯಿಂದ ಅಪಾತ ಪ್ರಮಾಣದಲ್ಲಿ ಹಾನಿಯಾದ ಸಂದರ್ಭದಲ್ಲಿಯೂ ಶ್ರೀಕ್ಷೇತ್ರ ಶ್ರವಣಬೆಳಗೊಳ […]

ಕರ್ನಾಟಕದ ಪ್ರವಾಹ – ನೆರವಿನ ಸಹಾಯ ಹಸ್ತ ಚಾಚಿದ ಹೊಂಬುಜ ಜೈನ ಮಠ

ಹೋಂಬುಜ, 11 ಆಗಸ್ಟ್ 2019: ದಕ್ಷಿಣ ಭಾರತದಲ್ಲಿ ಶತಮಾನ ಕಂಡರಿಯದ ರೀತಿಯಲ್ಲಿ ಮಳೆಯಿಂದ ನದಿಗಳು ತುಂಬಿ ಹರಿದು ಪ್ರವಾಹದಿಂದ ಜನ ತತ್ತರಿಸಿ ತಮ್ಮ ಆಸ್ತಿ ಪಾಸ್ತಿ ಕಳೆದು ಕೊಂಡು ದುಃಖದಲ್ಲಿ ಮುಳುಗಿದ್ದಾರೆ. ಪ್ರವಾಹದಿಂದಾಗಿ ಕೃಷ್ಣ ನದಿ ತೀರದ ಜನರ ಸ್ಥಿತಿ ಶೋಚನೀಯವಾಗಿದೆ. ಈಗಾಗಲೆ ಸರ್ಕಾರ, ಸಂಘ-ಸಂಸ್ಥೆಗಳು, ನಾಗರೀಕರು ಮುಕ್ತ ಹಸ್ತದಿಂದ ಸಹಕಾರ ನೀಡುತ್ತಾ ಅವರ ಕಣ್ಣೀರಿನ ಕ್ಷಣದಲ್ಲಿ ಧೈರ್ಯ ತುಂಬಿಸುವ ಕಾರ್ಯ ನಡೆದಿದೆ. ಈ ಕ್ಷಣದಲ್ಲಿ ಎಲ್ಲ ಮಠ ಮಾನ್ಯದಿಂದಲೂ ಹೆಚ್ಚಿನ ಸಹಯೋಗ ನಡೆದಿದೆ. ಅಂತೆಯೇ ಹೊಂಬುಜ […]

ಪುರಾತತ್ತ್ವ ಇಲಾಖೆಯ ಅವಜ್ಞೆಗೊಳಗಾಗಿರುವ ಹೊಂಬುಜದ ಪಂಚಕೂಟ ಬಸದಿ

ಹೊಂಬುಜ (ಶಿವಮೊಗ್ಗ ಜಿಲ್ಲೆ), ೭ ಜುಲೈ ೨೦೧೯: ಜೈನಧರ್ಮದ ನೆಲೆವೀಡು, ಸಾಂತರರ ನಾಡು, ಮಹಾಮಾತೆ ಪದ್ಮಾವತಿ ದೇವಿಯು ನೆಲೆಸಿರುವ ತಾಣ ಜೈನರು, ವಿದ್ವಾಂಸರು ಹಾಗೂ ಇತಿಹಾಸ ತಜ್ಞರಿಂದ ವಿಶ್ವದಾದ್ಯಂತ ತನ್ನದೇ ಆದ ವಿಶಷ್ಟ ಸ್ಥಾನವನ್ನು ಹೊಂದಿರುವ ವಿಶಿಷ್ಟ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರ ಹೊಂಬುಜ/ಹುಂಚ. ಕೇಂದ್ರ ಸರ್ಕಾರದ ಪುರಾತತ್ತ್ವ ಇಲಾಖೆಯ ಆಡಳಿತಕ್ಕೊಳ ಪಟ್ಟಿರುವ ಇಲ್ಲಿನ ಪುರಾತನವಾದ ಪಂಚಕೂಟ ಬಸದಿ/ ಪಂಚ ಬಸದಿಯ ದುಸ್ಥಿಯನ್ನು ಕಂಡು ಕ್ಷೇತ್ರವನ್ನು ಆಗಾಗ್ಗೆ ಸಂದರ್ಶಿಸುವ ಹಲವಾರು ಸಂಶೋಧಕರು/ ಸಂದರ್ಶಕರು/ ಭಕ್ತರು ಇಲಾಖೆಯವರು ಈ […]

ಇಥಿಯೋಪಿಯಾದಲ್ಲಿ ಜೈನಧರ್ಮದ ಕುರುಹುಗಳು ಪತ್ತೆ

ಬೆಂಗಳೂರು, 28 ಜೂನ್ 2019: ಅನಾದಿಕಾಲದಿಂದಲೂ ಜೈನರು ಮೂಲತಃ ವ್ಯಾಪಾರ ಉದ್ದಿಮೆಯನ್ನು ಅವಲಂಭಿಸಿದವರು. ಅವರ ವ್ಯಾಪಾರ ವಹಿವಾಟುಗಳು ವಿದೇಶಗಳಲ್ಲಿಯೂ ವ್ಯಾಪಿಸಿತ್ತು. ಅಲ್ಲಲ್ಲಿ ನೆಲೆ ಕಂಡುಕೊಂಡ ಈ ವ್ಯಾಪಾರೀ ವರ್ಗ ತಾವು ನೆಲಸಿದ ಕಡೆಗಳಲ್ಲಿ ನಿತ್ಯಪೂಜೆಗಾಗಿ ಬಸದಿಗಳನ್ನೂ ನಿರ್ಮಿಸಿಕೊಂಡಿದ್ದರು. ಕೀನ್ಯಾದ ಕಿಸ್ಮೋ ಸಮೀಪದ ಗುಹೆಗಳಲ್ಲಿ ಹಾಗೂ ಕಾಂಬೋಡಿಯಾದಲ್ಲಿ ಕಂಡುಬರುವ ಜೈನ ಸಂಸ್ಕೃತಿಯ ಕುರುಹುಗಳು ಇದಕ್ಕೆ ಅತ್ತ್ಯುತ್ತಮ ಉದಾಹರಣೆ. ಮೂಡುಬಿದರೆಯ ಕನ್ನಡ ಪ್ರಾಧ್ಯಾಪಕರು ಹಾಗೂ ಜೈನ ವಿದ್ವಾಂಸರಾದ ಪ್ರೊ. ಎಸ್.ಪಿ. ಅಜಿತ್ ಪ್ರಸಾದ್ ರವರು ಇತ್ತೀಚೆಗೆ ಸುಮಾರು ಒಂದು ತಿಂಗಳಕಾಲ […]

ಲಾತೂರ್ ಜಿಲ್ಲೆಯಲ್ಲಿ 11ನೇ ಶತಮಾನದ ಜೈನ ಕನ್ನಡ ಶಾಸನ ಪತ್ತೆ

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಅಸುಆ ತಾಲೂಕಿನ ಕಿಲಾರಿ ಸಮೀಪದ ಕಾರ್ಲಾಗ್ರಾಮದಲ್ಲಿ ಪತ್ತೆ ಗರ್ಭಗುಡಿಯಲ್ಲಿ ಮೂರು ತೀರ್ಥ್ಂಕರರ ವಿಗ್ರಹಗಳು ಒಂದೇ ಪಾದಪೀಠದಲ್ಲಿರುವ ವಿಶಿಷ್ಟವಾದ ಬಸದಿ ತೀರ್ಥ್ಂಕರರ ವಿಗ್ರಹಗಳು ಸ್ಥಾಪಿತವಾಗಿರುವ ಪಾದಪೀಠದಲ್ಲಿನ ಶಾಸನ ದಿಗಂಬರ ಜೈನ ಮುನಿ ಪಾರ್ಶ್ವಣೇಂದು ಹಾಗೂ ಆವರ ಗುಣದ ವಿವರವಿರುವ ಶಾಸನ ಮುನಿಗಳ ಗುರು ಪರಂಪರೆ ಹಾಗೂ “ಯಾಪನೀಯ ಸಂಘ”ದ ವಿವರ ನೀಡುತ್ತದೆ ಬಸದಿಯನ್ನು “ರತ್ನತ್ರಯ ಜಿನಾಲಯ”ವೆನ್ನುತ್ತಿದ್ದರು ಎಂದು ತಿಳಿಸುತ್ತದೆ. ಸೋಲಾಪುರದ ಸುಜಾತಾ ಸುಭಾಷ್ ಶಾಸ್ತ್ರಿಯವರಿಂದ ಸಂಶೋಧಿಸಲಾದ ಶಾಸನ ಲಾತೂರ‍್ (ಮಹಾರಾಷ್ಟ್ರ), 18 ಜೂನ್ 2019: […]

ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ, ವಿಶೇಷ ಕಾರ್ಯಕ್ರಮಗಳ ಗೊಂಚಲು

ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ವಿರಾಜಮಾನನಾಗಿರುವ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಗೆ ಹನ್ನೆರಡು ವರ್ಷಗಳ ಬಳಿಕ ನಡೆಯಲಿರುವ ಮಹಾಮಜ್ಜನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮಹಾಮಜ್ಜನದ ಹಿನ್ನೆಲೆಯಲ್ಲಿ ಫೆ.9ರಿಂದ 18ರ ವರೆಗೆ ಸಂತ ಸಮ್ಮೇಳನ ಸೇರಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ 108 ವರ್ಧಮಾನ ಸಾಗರಜೀ ಮುನಿಮಹಾರಾಜರ ಸಾನ್ನಿಧ್ಯ ಮತ್ತು ನೇತೃತ್ವದಲ್ಲಿ ಆಚಾರ್ಯ ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿಮಹಾರಾಜರು, ಮುನಿಗಳು, ಆರ್ಯಿಕಾ ಮಾತಾಜಿಯವರ ಉಪಸ್ಥಿತಿಯಲ್ಲಿ ಶ್ರವಣಬೆಳಗೊಳ ಜೈನ ಮಠದ […]

Sarvadharma Sammelana Dharmasthala Bahubali Mahamasthakabhisheka-2019

ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ: ಸಂತರ ಸಮ್ಮೇಳನ ಮೂಲಕ ಚಾಲನೆ

ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಧರ್ಮಸ್ಥಳ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ಸಿಕ್ಕಿದೆ. ಧರ್ಮಸ್ಥಳದಲ್ಲಿ ಸಂತರ ಸಮ್ಮೇಳನ ಪ್ರಾರಂಭವಾಗಿದೆ. ಈ ಮೂಲಕ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ಸಿಕ್ಕಿದೆ.ಇಂದಿನ ಸಮಾವೇಶದಲ್ಲಿ ನಾಡಿನ ಶ್ರೇಷ್ಠ ಸಾಧು ಸಂತರು, ಜೈನ ಮುನಿಗಳು ನಾಡಿಗೆ ಧರ್ಮ ಸಂದೇಶ ನೀಡಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಕಾರ್ಕಳದ ದಾನಶಾಲರ ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಹುಂಬುಂಜದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ,ಒಡಿಯೂರು ಮಹಾಸಂಸ್ಥಾನದಗಲ ಗುರುದೇವಾನಂದ ಸ್ವಾಮೀಜಿ, ಶ್ರೀ 108 […]

ಧರ್ಮಸ್ಥಳ ಬಾಹುಬಲಿ ಸ್ವಾಮಿ

ಧರ್ಮಸ್ಥಳಕ್ಕೆ ಬಾಹುಬಲಿ ಬಂದಿದ್ದು ಹೇಗೆ ಗೊತ್ತಾ?

ಸರ್ವ ಧರ್ಮಗಳ ಜನರನ್ನು ಏಕ ರೀತಿಯಲ್ಲಿ ಕಾಣುವ ಶಾಂತಿಧಾಮ ಕರುನಾಡಿನ ಧರ್ಮಸ್ಥಳ ಕ್ಷೇತ್ರ. ಅಲ್ಲಿನ ಮಂಜುನಾಥ ಸ್ವಾಮಿ ಸತ್ಯ, ನ್ಯಾಯಕ್ಕೆ ಹೆಸರಾಗಿದ್ದಾನೆ. ಇದೇರೀತಿ ಅಲ್ಲಿನ ಹೆಗ್ಗಡೆ ಕುಟುಂಬ ಸಹ “ಮಾತು ಬಿಡ ಮಂಜುನಾಥ” ಎಂದೇ ಖ್ಯಾತಿ ಗಳಿಸಿದ ವೀರೇಂದ್ರ ಹೆಗ್ಗಡೆ ಹಾಗೂ ಅವರ ಹಿಂದಿನ ತಲೆಮಾರು ಹಲವು ಶತಮಾನಗಳಿಂದ ಧರ್ಮ ಪರಿಪಾಲನೆ ಕಾರ್ಯ ಮಾಡುತ್ತಾ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಇದೀಗ ಇಂದಿನಿಂದ ಧರ್ಮಸ್ಥಳದಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದ್ದು ಇದರ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಬಾಹುಬಲಿ ಆಗಮನ ಹೇಗಾಯಿತೆಂಬ ವಿಚಾರವನ್ನು […]

ಇಂದು ಸಂತ ಸಮ್ಮೇಳನ; ಸಿಂಗಾರಗೊಂಡಿದೆ ಶ್ರೀ ಕ್ಷೇತ್ರ ಧರ್ಮಸ್ಥಳ

ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಧರ್ಮ ಸಮನ್ವಯದ ಪುಣ್ಯದ ಬೀಡು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತ್ಯಾಗಮೂರ್ತಿ ಬಾಹುಬಲಿ ಸ್ವಾಮಿಗೆ ಈಗ ಚತುರ್ಥ ಮಹಾಮಸ್ತಕಾಭಿಷೇಕದ ಸಡಗರ. ಫೆ.9ರಿಂದ 18ರ ವರೆಗೆ ನಡೆಯುವ ಮಹಾಮಜ್ಜನಕ್ಕಾಗಿ ಶ್ರೀ ಕ್ಷೇತ್ರ ಸರ್ವವಿಧವಾಗಿ ಸಜ್ಜುಗೊಂಡಿದೆ. ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾಗಿ ರುವ ಗೊಮ್ಮಟ ಮೂರ್ತಿಯ ಮಸ್ತಕಾ ಭಿಷೇಕ ತಯಾರಿಗೆ ಅಂತಿಮ ಸ್ಪರ್ಶ ನಡೆ ಯುತ್ತಿದೆ. ಅಭಿಷೇಕ ನಡೆಸುವ ಅಟ್ಟಳಿಗೆ ನಿರ್ಮಾಣ ಅಂತಿಮ ಹಂತದಲ್ಲಿದೆ. ಭಕ್ತರು ಮಜ್ಜನವನ್ನು ಕಣ್ತುಂಬಿಕೊಳ್ಳಲು ಇರುವ ಗ್ಯಾಲರಿ ನಿರ್ಮಾಣವೂ ಕೊನೆಯ ಹಂತದಲ್ಲಿದ್ದು, ನೂರಕ್ಕೂ ಅಧಿ ಕ […]

Two Ancient Jain Inscriptions of 12th-13th Century Found at Makodu Village, Mysuru District

ಮೈಸೂರು ಜಿಲ್ಲೆ ಮಾಕೋಡು ಗ್ರಾಮದಲ್ಲಿ 12-13ನೇ ಶತಮಾನದ 2 ಜೈನ ಶಾಸನಗಳು ಪತ್ತೆ

ಮೈಸೂರು, 6 ಅಕ್ಟೋಬರ್ 2018: ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿರುವ ಮಾಕೋಡು ಗ್ರಾಮದಲ್ಲಿನ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಪುರಾತನವಾದ ಎರಡು ಜೈನ ಶಾಸನಗಳು ಪತ್ತೆಯಾಗಿವೆ. ”ಬಸದಿಯ ಜೀರ್ಣೋದ್ಧಾರ ಕಾರ್ಯದ  ಸಮಯದಲ್ಲಿ ಈ ಶಾಸನಗಳು ಪತ್ತೆಯಾಗಿದ್ದು, ಒಂದು ಶಾಸನವು ಬಸದಿಯ ಮೂಲನಾಯಕನಾದ ಪಾರ್ಶ್ವನಾಥ ತೀರ್ಥಂಕರ ವಿಗ್ರಹದ ಪಾದಪೀಠದಲ್ಲಿ ಪತ್ತೆಯಾಗಿದ್ದರೆ ಇನ್ನೊಂದು ಶಾಸನವು ಈ ಬಸದಿಯ ಸುಖನಾಸಿಯಿಂದ ಗರ್ಭಗುಡಿಗೆ ತೆರಳುವ ಬಾಗಿಲಿನ ಲಲಾಟದ ಮೇಲ್ಭಾದಲ್ಲಿದೆ” ಎಂದು www.jainheritagecentres.com  ಅಂತರ್ಜಾಲ ತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಹೆಚ್.ಪಿ. ನಿತಿನ್ […]

error: Jain Heritage Centres - Celebrating Jain Heritage.....Globally!