Home » ಕನ್ನಡ » ವಿಚಾರ » ಸಲ್ಲೇಖನ ಮರಣವು ಅಮಾನವೀಯ ಆಚರಣೆಯೇ?

ಸಲ್ಲೇಖನ ಮರಣವು ಅಮಾನವೀಯ ಆಚರಣೆಯೇ?

ಆಧುನಿಕ ಸಂವಿಧಾನದೊಡನೆ ಅನಾದಿ ಧಾರ್ಮಿಕ ಸಂಪ್ರದಾಯದ ಘರ್ಷಣೆ – ಜೈನ ಸಮುದಾಯದ ‘ಸಲ್ಲೇಖನ ವ್ರತ’ದ ಆಚರಣೆಯನ್ನು ರಾಜಸ್ತಾನ ಹೈಕೋರ್ಟ್‌ ನಿಷೇಧಿಸಿದೆ. ಸಲ್ಲೇಖನ ವ್ರತ ಕಾನೂನುಬಾಹಿರ, ಇದು ಶಿಕ್ಷಾರ್ಹ ಅಪರಾಧ ಎನ್ನುವುದು ಕೋರ್ಟ್‌ ಅಭಿಪ್ರಾಯ. ಆದರೆ, ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ‘ಸಲ್ಲೇಖನ’ ವ್ರತದ ಆಚರಣೆಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ರಾಜ್ಯಾಂಗಗಳು ಗೌರವದಿಂದ ಕಂಡಿವೆ.