Skip to content
Home » ಕನ್ನಡ » ಜೈನ ಹಬ್ಬಗಳು » ದಶಲಕ್ಷಣ ಪರ್ವ » ಉತ್ತಮ ಮಾರ್ದವ ಧರ್ಮ

ಉತ್ತಮ ಮಾರ್ದವ ಧರ್ಮ

    ಉತ್ತಮ ಮಾರ್ದವ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಎರಡನೇ ಧರ್ಮ.

    ಜಾತಿ ಕುಲ ಬಲರೂಪ ವಿಜ್ಞಾನ ಸಂಪತ್ತಿ’ ಪೂಜಾ ತಪಸ್ಸು ಮೊದಲಾದ ವಿಷಯಗಳಲ್ಲಿ ತಾನು ಶ್ರೇಷ್ಠನೆಂದು ತಿಳಿಯುವ ಭಾವಕ್ಕೆ ಅಹಂಕಾರ ಭಾವವೆ೦ದು ಹೆಸರು. ಭಾವದಿಂದ ಮನುಷ್ಯನು, ಬೇರೆಯವರು ಎಷ್ಟು ಶ್ರೇಷ್ಠರಾಗಿದ್ದರೂ, ಅವರನ್ನು ತಿರಸ್ಕಾರ ದೃಷ್ಟಿಯಿಂದ ನೋಡುವನು. ಅಂತಹ ಮನುಷ್ಯನನ್ನು ಜನರೂ ತಿರಸ್ಕಾರ ದೃಷ್ಟಿಯಿಂದಲೇ ನೋಡುವರು. ಆ ಅಹಂಕಾರಿ ಮನುಷ್ಯನಿಂದ ಪ್ರಯೋಜನವನ್ನು ಹೊಂದು ವವರೂ ಅವನಲ್ಲಿ ಬಾಹ್ಯದಲ್ಲಿ ವಿನಯವನ್ನು ತೋರಿಸುವರಲ್ಲದೆ ಅವರಿಗೆ ಆಂತರಂಗಿಕ ಸೌಹಾರ್ದವು ಎಂದೂ ಉಂಟಾಗುವುದಿಲ್ಲ. ಅಹಂಕಾರಿಯು ತನ್ನನ್ನು ತಾನು ಶ್ರೇಷ್ಠನೆಂದೂ ಸುಂದರನೆಂದೂ ಚತುರನೆ೦ದೂ ತಿಳಿದರೂ, ಜನರ ಕಣ್ಣಿಗೆ ಅವನು ನಿಕೃಷ್ಟನೂ ಕುರೂಪಿಯೂ ಮೂರ್ಖನೂ ಆಗಿ ತೋರುವನು. “ಅಹಂಕಾರಕ್ಕೆ ಔದಾಸೀನ್ಯವು ಮದ್ದು” ಎನ್ನುವ ನಾಣ್ಣುಡಿ ಯಂತ ಜನರು ಅಹಂಕಾರಿ ಮನುಷ್ಯನಲ್ಲಿ ಉದಾಸೀನಭಾವದಿಂದಿರುವರು. ಅಹಂಕಾರಿಯು ಲೋಕಕ್ಕೆ ವಿಲಕ್ಷಣವಾಗಿ ತೋರುವನು. ಮೂರ್ಖನಾದ ಅಹಂಕಾರಿ ಮನುಷ್ಯನು ತನ್ನನ್ನು ಲೋಕವು ಪುರಸ್ಕರಿಸುವುದೆಂದು ತಿಳಿಯು ತಾನೆನ್ನುವುದನ್ನು ಅವನಚರ್ಯೆಯಿಂದ ತಿಳಿದರೆ ಲೋಕವು ಅವನನ್ನು ನೀಚ ದೃಷ್ಟಿಯಿಂದ ನೋಡುವುದು. ಜನರು ಅಂತಹ ಮನುಷ್ಯನ ಹತ್ತಿರ ಸೇರಲೊಲ್ಲರು. ಅಹಂಕಾರಿಗೆ ಯಾವ ವಿಧವಾದ ಐಹಿಕ ಸೌಖ್ಯವೂ ಅನು ಕೂಲ್ಯವೂ ಮನ್ನಣೆಯೂ ದೊರೆಯವೆಂಬುದು ಸುಸ್ಪಷ್ಟ.

    ಉತ್ತಮ ಮಾರ್ದವ ಧರ್ಮ
    ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಎರಡನೇ ಧರ್ಮ – ಉತ್ತಮ ಮಾರ್ದವ ಧರ್ಮ

    ಹಿಂದಿನ ಲೇಖದಲ್ಲಿ ವರ್ಣಿಸಲ್ಪಟ್ಟ ನಾಲ್ಕು ಪ್ರಕಾರವಾದ ಕ್ರೋಧದಂತೆ ಈ ಅಹಂಕಾರ ಅಥವಾ ಮಾನವೂ ಅನಂತಾನುಬಂಧಿ ಮಾನ, ಅಪ್ರತ್ಯಾ ಖ್ಯಾನಮಾನ, ಪ್ರತ್ಯಾಖ್ಯಾನಮಾನ, ಸಂಜ್ವಲನಮಾನಗಳೆಂದು ನಾಲ್ಕು ಪ್ರಕಾರ ವಾಗಿರುತ್ತದೆ. ಅನಂತಾನುಬಂಧಿಮಾನವು ಕಲ್ಲಿನಂತೆಯೂ, ಅಪ್ರತ್ಯಾಖ್ಯಾನ ಮಾನವು ಮೂಳೆ-ಎಲುಬಿನಂತೆಯೂ, ಪ್ರತ್ಯಾಖ್ಯಾನಮಾನವು ಮರದಂತೆ ಯೂ, ಸಂಜ್ವಲನಮಾನವು ಬೆತ್ತದಂತೆಯೂ ಇರುತ್ತವೆ. ಮೊದಮೊದಲಿನ ಮಾನ-ಅಹಂಕಾರಭಾವವು ಕಠಿನವೆಂಬುದೂ ಮುಂದುಮುಂದಿನ ಆ ಭಾವವು ಕೋಮಲವೆಂಬುದೂ ಸ್ಪಷ್ಟವಾಗಿದೆ. ಅನಂತಾನುಬಂಧಿಮಾನವು ನರಕಗತಿಗೂ ಅಪ್ರತ್ಯಾಖ್ಯಾನಮಾನವು ತೀರ್ಯಗತಿಗೂ ಪ್ರತ್ಯಾಖ್ಯಾನಮಾನವು ಮನುಷ್ಯಗತಿಗೂ ಸಂಜ್ವಲನಮಾನವು ದೇವಗತಿಗೂ ಕಾರಣಗಳಾಗುವುವು. ಈ ಅಭಿಪ್ರಾಯವು ಗೋಮಟಸಾರದ ಈ ಕೆಳಗಿನ ಗಾಥೆಯಿಂದ ವ್ಯಕ್ತ ವಾಗುವುದು.
    ಸೇಲಟ್ಟಿ ಕಟ್ಟವತ್ತೇ ಇಯಭೇಯೇಣಣುಹರಂತಓ ಮಾ | ಕಾರಯ ತಿರಿಯ ಣರಾಮರಗ ಈಸು ಉಪ್ಪಾಯಓ ಕಮಸೋ ||
    ಮೇಲೆ ಹೇಳಲ್ಪಟ್ಟ ಜಾತಿ ಕುಲ ಬಲ ರೂಪ ಮೊದಲಾದುವುಗಳಿಂದ ತಾನು ಶ್ರೇಷ್ಠನೆಂದು ತಿಳಿದ ಗುರುಗಳು ಗುಣಿಗಳು ಹಿರಿಯರು ಮೊದಲಾದವರನ್ನು ತಿರಸ್ಕರಿಸುವುದು ಅಹಂಕಾರವೆನ್ನಿಸುವುದಲ್ಲದೆ ಆ ಜಾತಿ ಕುಲ ಬಲ ಮೊದಲಾದವುಗಳಲ್ಲಿ ಶ್ರೇಷ್ಠನಾಗಿರುವುದು ಅಹಂಕಾರವೆನ್ನಿಸಿವುದಿಲ್ಲ. ಅಂದರೆ ಹಾಗೆ ಶ್ರೇಷ್ಠನಾಗಿರುವುದು ದೋಷವಲ್ಲ, ಗೋಣಿಚೀಲದಲ್ಲಿ ಧಾನ್ಯವನ್ನು ತುಂಬ ಬಾಯಿ ಕಟ್ಟಿದ್ದರೆ ಆ ಚೀಲವು ಬಿಗುರ್ತು-ಬಿಗಿದಿರುವಂತೆ ಅಹಂ ಕಾರಿಯು ಜಾತಿ, ಕುಲ ಬಲಾದಿಗಳಿಂದ ಹಿಗ್ಗಿ ಬಿಗುರ್ತು-ಬಿಗಿದಿರುವುದು ದೋಷ, ಬಾಯಿ ಬಿಚ್ಚಿದ ಧಾನ್ಯದ ಚೀಲವು ಧಾನ್ಯವನ್ನು ಸುರಿದು ಸಡಿ ಲಾಗುವಂತೆ ನಿರಹಂಕಾರಿಯ ಸರಳ ಭಾವವೂ ಸೌಮ್ಯಭಾವವೂ ಮೃದು ಸ್ವಭಾವವೂ ಸ್ವಾಭಾವಿಕ ಗುಣಗಳಾಗಿರುವುವು.
    ಮೇಲೆ ಹೇಳಿದಂತೆ ಅಹಂಕಾರವು ಇಹದಲ್ಲಿಯೂ ಪರದಲ್ಲಿಯೂ ತನಗೆ ಮಹಾನರ್ಥಕಾರಿಯೆಂದು ಭಾವಿಸಿ ಸರ್ವತ್ರ ಅಹಂಕಾರಭಾವಕ್ಕೆ ಮನಸ್ಸಿನಲ್ಲಿ ಎಡೆಗೊಡದೆ ಮೃದುಸ್ವಭಾವದಿಂದಿರುವುದೇ ಉತ್ತಮಮಾರ್ದವ ಧರ್ಮವಾಗಿರುವುದು. ಈ ಅಭಿಪ್ರಾಯವು ತತ್ವಾರ್ಥ ರಾಜವಾರ್ತಿಕದ ಈ ಕೆಳಗಿನ ವಾರ್ಷಿಕದಿಂದ ವಿಶದವಾಗುವುದು.
    ಜಾತ್ಯಾದಿಮದಾವೇಶಾಭಾವಾದಭಿಮಾನಾಭಾವೋ ಮಾರ್ದವಂ ॥
    – ಉತ್ತಮ ಜಾತಿ ಕುಲ ರೂಪ ವಿಜ್ಞಾನೈಶ್ವರ್ಯ ಶ್ರುತಿಲಾಭವೀರ್ಯ ಸ್ಯಾಪಿ ಸತಸ್ತತಮದಾವೇಶಾಭಾವಾತ್ ಪರಪ್ರಯುಕ್ತಪರಿಭವನಿಮಿತ್ತಾಭಿ ಮಾನಾಭಾವೋ, ಮಾರ್ದವಂ ಮಾನನಿರ್ಹರಣಮನಗಂತವ್ಯಂ.
    ಭಾವಾರ್ಥ- ಉತ್ತಮಜಾತಿ ಕುಲ ರೂಪ ವಿಜ್ಞಾನ ಐಶ್ವರ್ಯ ಶ್ರುತ (ವಿದ್ಯಾ) ಲಾಭ ಶಕ್ತಿಗಳಿದ್ದರೂ ಅವುಗಳ ಸಂಬಂಧದಿಂದ ಆಹಂಕಾರಾವೇಶ ವಿಲ್ಲದಿರುವುದರಿಂದ, ಬೇರೆಯವರು ಮಾಡಿದ ತಿರಸ್ಕಾರನಿಮಿತ್ತವಾದ ಅಹಂ ಕಾರವಿಲ್ಲದಿರುವುದೇ ಮಾರ್ದವವೆಂದೂ ಮಾನಭಂಜನವೆಂದೂ ತಿಳಿಯ ಬೇಕು.
    ಆತ್ಮನ ಸ್ವಾಭಾವಿಕಗುಣವಾದ ಈ ಮಾರ್ದವಧರ್ಮವು ಮುನಿಗಳಿಗೆ ವಿಧಾಯಕವಾಗಿರುವ ಧರ್ಮವಾಗಿರುವುದಾದರೂ ಇದನ್ನು ಗೃಹಸ್ಥರೂಯಥಾಶಕ್ತಿ ಹೊಂದಲು ಪ್ರಯತ್ನಿಸಬೇಕು. ಈ ಗುಣಪ್ರದರ್ಶನವು ಗುಣ ಪರೀಕ್ಷೆಯಲ್ಲಿ ಅಸಮರ್ಥರಾದ ಅಪಾತ್ರರಲ್ಲಿ ನಿಪ್ಪಲವಾಗಿ ತಮ್ಮ ಮೂಲಕ ಧರ್ಮಕ್ಕೆ ವಿಘಾತವುಂಟಾಗುವ ಸಂದರ್ಭವೊದಗಿದಲ್ಲಿ ಧರ್ಮರಕ್ಷಣೆಗಾಗಿ ಪ್ರತಿಕ್ರಿಯೆಯು ಅಂಥವರಿಗೆ ಸ್ವಾಭಿಮಾನಪ್ರದರ್ಶನವೆಂದೂ ಅಭಿಮಾನ ಅಹಂಕಾರವೆಂದೂ ತೋರಿದರೂ, ನಿರಭಿಮಾನದಿಂದ ಮಾಡುವ ಆ ಪ್ರತಿ ಕ್ರಿಯೆಯು ಗೃಹಸ್ಥರಿಗೆ ಭೂಷಣವಲ್ಲದೆ ದೂಷಣವಲ್ಲ.
    ಏವಂಚ ಸರ್ವತ್ರ ಸಮದರ್ಶಿಗಳಾದ ಯತಿಗಳು ಈ “ಉತ್ತಮ ಮಾರ್ದವ ಧರ್ಮ”ವು ಪರಮಪವಿತ್ರವೂ ಇಹಪರಸುಖಹೇತುವೂ ಆತ್ಮೋದ್ಧಾರಕವೂ ಆಗಿರುವುದರಿಂದ, ಸರ್ವಜನಾದರಣೀಯವೂ ಗ್ರಾಹ್ಯವೂ ಆಗಿರುತ್ತದೆ.

    error: Jain Heritage Centres - Celebrating Jain Heritage.....Globally!