ಮೇ ೨೬, ೨೦೨೫ – ಜೈನ್ ಹೆರಿಟೇಜ್ ಸೆಂಟರ್ಸ್ ಗೆ ೨೩ ವರ್ಷಗಳ ಸಂಭ್ರಮ
ಜೈನ್ ಹೆರಿಟೇಜ್ ಸೆಂಟರ್ಸ್ – ಕಳೆದ ಸಾಲಿನ ಚಟುವಟಿಕೆಗಳು

ಸಂಶೋಧನೆ, ಅನ್ವೇಷಣೆ ಮತ್ತು ಕ್ಷೇತ್ರಕಾರ್ಯಗಳಿಂದ ಕೂಡಿದ ವರ್ಷ – ಕಳೆದ ವರ್ಷವು ಸಕ್ರಿಯ ಸಂಶೋಧನೆ ಮತ್ತು ದಾಖಲೀಕರಣದಿಂದ ಕೂಡಿದ್ದು, ಇದು ನಮ್ಮ ಅಧ್ಯಯನವನ್ನು ತಾತ್ವಿಕ ದೃಷ್ಟಿಕೋನದೊಂದಿಗೆ ಶ್ರೀಮಂತಗೊಳಿಸಿತು ಮತ್ತು ಭವಿಷ್ಯದ ಪ್ರಕಟಣೆಗಳು, ಶೈಕ್ಷಣಿಕ ಅಧ್ಯಯನಗಳು ಮತ್ತು ಪ್ರಭಾವಕ್ಕೆ ವೇದಿಕೆಯನ್ನು ಸಿದ್ಧಪಡಿಸಿತು.
ಜೈನ ಕಲೆ ಮತ್ತು ವಾಸ್ತುಶಿಲ್ಪದ ಕುರಿತು ಅಧ್ಯಯನ – ಜೈನಧರ್ಮದ ವಿವಿಧ ಪಂಥಗಳು ಮತ್ತು ಪ್ರದೇಶಗಳಲ್ಲಿನ ದೇವಾಲಯ ವಾಸ್ತುಶಿಲ್ಪ, ಪ್ರತಿಮಾ ವಿಜ್ಞಾನ, ಶಾಸನಗಳು, ಜೈನ ಗುಹಾಲಯಗಳು, ತಾಣಗಳು, ವರ್ಣಚಿತ್ರಗಳು ಮತ್ತು ರಾಜ್ಯವಾರು ಪರಂಪರೆ ಕೇಂದ್ರಗಳನ್ನು ಒಳಗೊಂಡAತೆ ಜೈನ ಕಲೆ ಮತ್ತು ವಾಸ್ತುಶಿಲ್ಪದ ಆಳವಾದ ಅಧ್ಯಯನವನ್ನು ಕೈಗೊಳ್ಳಲಾಗಿದೆ. ಸಂಶೋಧನೆಯು ಭಾರತ ಮತ್ತು ಪ್ರಪಂಚದಾದ್ಯAತದ ವಸ್ತುಸಂಗ್ರಹಾಲಯಗಳಲ್ಲಿ ಇರಿಸಲಾಗಿರುವ ಜೈನ ಕಲಾಕೃತಿಗಳನ್ನು ಸಹ ಒಳಗೊಂಡಿದೆ.
ಗಂಗರ ಕಾಲದ ಬಸದಿಗಳ ಅಧ್ಯಯನ – ಕರ್ನಾಟಕ, ತಮಿಳುನಾಡು, ಒಡಿಶಾ ಮತ್ತು ಆಂಧ್ರಪ್ರದೇಶದಾದ್ಯAತ ೪೯ ದೇವಾಲಯಗಳು, ೫ ಗುಹಾಲಯಗಳು ಮತ್ತು ೮ ಸ್ಮಾರಕಗಳು ಸೇರಿದಂತೆ ೫೮ ಸ್ಥಳಗಳನ್ನು ದಾಖಲಿಸುವ ದೀರ್ಘವಾದ ಸಂಶೋಧನೆ. ಇದು ಪಶ್ಚಿಮ ಮತ್ತು ಪೂರ್ವ ಗಂಗರುಗಳನ್ನೊಳಗೊAಡAತಹ ಜೈನಧರ್ಮಕ್ಕೆ ಸಂಬAಧಿಸಿದ ಮೊಟ್ಟ ಮೊದಲ ಅಧ್ಯಯನ.
ಹೊಂಬುಜ ಜೈನ ಮಠದ ಕುರಿತು ವಿವರವಾದ ಅಧ್ಯಯನ – ಮಠದ ಇತಿಹಾಸ, ದೇವಾಲಯಗಳು, ಶಾಸನಗಳು, ಕಾರ್ಯ ಚಟುವಟಿಕೆಗಳನ್ನು ದಾಖಲಿಸುವ ಸಮಗ್ರ ವರದಿಯನ್ನು ಪ್ರಕಟಿಸಲಾಗಿದೆ.
ಕ್ಷೇತ್ರ ಕಾರ್ಯ: ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ಜೈನ ಪರಂಪರೆ ಕೇಂದ್ರಗಳ ಪ್ರವಾಸ
೮ ದಿನಗಳು | ೨,೨೦೦ ಕಿ.ಮಿ. | ೩೨ ಜಿನಾಲಯಗಳು | ೯ ಗುಹಾಲಯಗಳು | ೨೮ ಜೈನ ಕೇಂದ್ರಗಳು
ಮದ್ರಾಸ್ ವಿಶ್ವವಿದ್ಯಾಲಯದ ಜೈನಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಸಾಕ್ಷ್ಯಚಿತ್ರಗಳ ನಿರ್ಮಾಣ
ಮುಂದಿನ ದಾರಿ…
- ಜೈನ ಧರ್ಮಕ್ಕೆ ಸಂಬAಧಿಸಿದ ಹೊಸ ಸಂಶೋಧನೆಗಳ ಪ್ರಕಟಣೆಗಳು
- ಇನ್ನೂ ಅನೇಕ ಜೈನ ಪರಂಪರೆ ಕೇಂದ್ರಗಳ ಕ್ಷೇತ್ರ ಕಾರ್ಯ
- ಜೈನ ಪರಂಪರೆಯ ಸಂರಕ್ಷಣೆಯನ್ನು ಬೆಂಬಲಿಸುವುದು
- ಹೆಚ್ಚಿನ ಸಾಕ್ಷ್ಯಚಿತ್ರಗಳು ಮತ್ತು ಶೈಕ್ಷಣಿಕ ವೀಡಿಯೊಗಳ ನಿರ್ಮಾಣ
- ನಮ್ಮ ಅಂತರ್ಜಾಲತಾಣದಲ್ಲಿ ಜೈನ ಪರಂಪರೆ ಕೇಂದ್ರಗಳ ಕುರಿತ ಮಾಹಿತಿಯ ಸತತ ನವೀಕರಣ.
ನಮ್ಮ ವಿಶೇಷ ಧನ್ಯವಾದಗಳು – ಡಾ. ಪ್ರಿಯದರ್ಶನಾ ಜೈನ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಜೈನಶಾಸ್ತ್ರ ವಿಭಾಗ, ಮದ್ರಾಸ್ ವಿಶ್ವವಿದ್ಯಾಲಯ.
ಎಲ್ಲಾ ವಿದ್ವಾಂಸರು, ಮಾರ್ಗದರ್ಶಕರು, ಸ್ನೇಹಿತರು ಮತ್ತು ಕಾರ್ಯಕರ್ತರ ಬೆಂಬಲ ಹಾಗೂ ಸಹಕಾರಕ್ಕೆ ನಮ್ಮ ಧನ್ಯವಾದಗಳು!
ನಮ್ಮ ಸಂಪರ್ಕ ಸೂತ್ರ: +೯೧ ೯೮೮೦೮೧೮೮೬೯ | info@jainheritagecentres.com