Skip to content
Home » ಕನ್ನಡ » ಜೈನ ಹಬ್ಬಗಳು » ದಶಲಕ್ಷಣ ಪರ್ವ » ಉತ್ತಮ ತಪೋ ಧರ್ಮ

ಉತ್ತಮ ತಪೋ ಧರ್ಮ

  ಉತ್ತಮ ತಪೋ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಏಳನೇ ಧರ್ಮ.

  “ತಪ’ವೆಂಬ ಶಬ್ದಕ್ಕೆ ತಪ ಸಂತಾಪ” ಎಂದು ಹೇಳಿರುವಂತೆ ಚೆನ್ನಾಗಿ ತಾಪಗೊಳಿಸುವುದೆಂದರ್ಥ. ಅಂದರೆ ಕರ್ಮಕ್ಷಯನಿಮಿತ್ತವಾಗಿ ವ್ರತನಿಯಮಾದಿಗಳ ಅನುಷ್ಠಾನದಿಂದ ಶರೀರಕೇಶವನ್ನನುಭವಿಸುವುದೆಂದ ರ್ಥವು, ರೋಗಾದಿಗಳು ಪ್ರಾಪ್ತವಾದಾಗಂತು ಶರೀರದ್ದೇಶವನ್ನು ಯತ್ನವಿಲ್ಲದೆ ಅನುಭವಿಸಬೇಕಾಗುವುದುಂಟು. ಆದರೆ ಉದ್ದೇಶಪೂರ್ವಕವಾಗಿ ಬೇಕೆಂದು ಶರೀರಕ್ಷೇಶವನ್ನೇಕೆ ಅನುಭವಿಸಬೇಕು? ಎಂದು ಕೆಲವರು ಹೇಳಬಹುದು. ತಪಸ್ಸಿನ ಮುಖ್ಯ ಧೈಯವು ಜ್ಞಾನ ಧ್ಯಾನಗಳಲ್ಲಿ ಚಿತ್ತಸ್ಟ್ರ್ಯವನ್ನು ಸಂಪಾದಿಸುವುದಾಗಿರುವುದು, ಜ್ಞಾನ ಧ್ಯಾನಗಳು ಸಂಚಿತಕರ್ಮವಿನಾಶಕ್ಕೆ ಸಾಧನಗಳಿಂದೂ ರ ಕರ್ಮನಾಶದಿಂದ ಜೀವಾತ್ಮನು ಕ್ರಮದಿಂದ ನಿತ್ಯಸುಖಭಾಗಿಯಾಗುವನೆಂದೂ ಆಸ್ತಿಕರ ನಂಬಿಕೆ. ಹೇಗಿದ್ದರೂ ಜೀವಾತ್ಮನು ಸಂಚಿತಕರ್ಮದ ಫಲವನ್ನು ಅನುಭವಿಸಿಯೇ ತೀರಬೇಕೆಂದ ಮೇಲೆ ಅದನ್ನುಶೀಘ್ರವಾಗಿ ಅನುಭವಿಸಿ, ಕರ್ಮವಿಮುಕ್ತನಾಗಿ ನಿತ್ಯಸುಖಭಾಗಿಯಾಗುವ ಪ್ರಯತ್ನವು ಒಳ್ಳೆಯದಲ್ಲವೇ? ಈ ವಿಧದಿಂದ ಕರ್ಮವು ನಾಶವಾದರೆ ಅದಕ್ಕೆ ಸಕಾಮನಿರ್ಜರೆಯೆಂದು ಹೆಸರು.

  ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಏಳನೇ ಧರ್ಮ - ಉತ್ತಮ ತಪೋ ಧರ್ಮ
  ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಏಳನೇ ಧರ್ಮ – ಉತ್ತಮ ತಪೋ ಧರ್ಮ

  ತಪಸ್ಸು ಆರೋಗ್ಯದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿರುವುದು. ದೇಹದಲ್ಲಿ ಆಗಾಗ್ಗೆ ಉಂಟಾಗುವ ರೋಗದ ಅಣುಗಳು ತಪಸ್ಸಿನಿಂದ ತಪ್ಪ ಗಳಾಗಿ ಹೋಗುವುವು. ಅದರಿಂದ ದೇಹದಲ್ಲಿ ಉತ್ಸಾಹವುಂಟಾಗುವುದು, ಜೀರ್ಣಕೋಶವು ಉದ್ದೀಪಿತವಾಗುವುದು; ಇಂದ್ರಿಯಗಳು ವಶದಲ್ಲಿ ನಿಲ್ಲು ವುವು. ಇವೆಲ್ಲ ಜ್ಞಾನ ಧ್ಯಾನಗಳಿಗೆ ಬಹಳವಾಗಿ ಸಹಕಾರಿಗಳಾಗುತ್ತವೆ. ಹೀಗೆ ತಪಸ್ಸು ವ್ಯವಹಾರ (ಆರೋಗ್ಯ) ನಿಶ್ಚಯ ಅಥವಾ ಲೌಕಿಕ ಪಾರಲೌಕಿಕದೃಷ್ಟಿ ಗಳಿಂದಲೂ ಪ್ರಯೋಜನಕಾರಿಯಾಗಿದೆ.
  ಜೈನಸಿದ್ಧಾಂತದಲ್ಲಿ ಬಾಹ್ಯತಪಸ್ಸೆಂದೂ ಅಭ್ಯಂತರತಪಸ್ಸೆಂದೂ ಎರಡು ಪ್ರಕಾರವಾಗಿ ತಪಸ್ಸು ವರ್ಣಿತವಾಗಿದೆ. ಬಾಹ್ಯತಪಸ್ಸೆಂದರೆ ಹೊರಗಿನ ತಪಸ್ಸೆಂದೂ ಅಭ್ಯಂತರತಪಸ್ಸೆಂದರೆ ಒಳಗಿನ ತಪಸ್ಸೆಂದೂ ಸಾಮಾನ್ಯವಾಗಿ ಅರ್ಥವಾಗುವುದಾದರೂ, ಅವುಗಳ ಯಥಾರ್ಥವಾದ ಅರ್ಥವ್ರ ಮೊದಲ ನೆಯ ತಪಸ್ಸು ಇತರರಿಗೂ ಗೋಚರವಾಗತಕ್ಕುದೆಂದೂ ಎರಡನೆಯ ತಪಸ್ಸು ತನಗೆ ಮಾತ್ರ ಗೋಚರವಾಗತಕ್ಕುದೆಂದೂ ಆಗಿರುವುದು. ಅಂದರೆ ಬಾಹ್ಯತಪಸ್ಸು ತನಗೂ ಇತರರಿಗೂ ಗೋಚರವಾಗತಕ್ಕುದು; ಅಭ್ಯಂತರ ತಪಸ್ಸು ತನಗೆ ಮಾತ್ರ ಗೋಚರವಾಗತಕ್ಕುದು. ಈ ವಿಷಯವು ಆಯಾ ಸಂದರ್ಭದಲ್ಲಿ ಸ್ಪಷ್ಟವಾಗುವುದು.
  ಮೊದಲನೆಯ ಬಾಹ್ಯತಪಸ್ಸು, ಅನಶನ, ಅವಮೌದರ್ಯ, ವೃತ್ತಿ ಪರಿಸಂಖ್ಯಾನ, ರಸಪರಿತ್ಯಾಗ, ವಿವಿಕ್ತಶಯ್ಯಾಸನ, ಕಾಯಕ್ಷೇಶಗಳೆಂದು ಆರು ಪ್ರಕಾರವಾಗಿದೆ. ಅನಶನವೆಂದರೆ ಭೋಜನವೆಂದೂ ಅದನ್ನು ಬಿಡುವುದೇ ಅನಶನವೆಂದೂ ಅರ್ಥ ಅನಶನ ಶಬ್ದಕ್ಕೆ ಪ್ರತಿಶಬ್ದವು ಉಪವಾಸವೆಂದು ಹೇಳಬಹುದು. ಆದರೆ ಸೂಕ್ಷ್ಮ ವಾಗಿ ವಿಚಾರ ಮಾಡಿದರೆ ಅವುಗಳಲ್ಲಿ ಸ್ವಲ್ಪ ಭೇದವು ತೋರುವುದು. ಅನಶನ ಶಬ್ದಕ್ಕೆ ಮೇಲೆ ಹೇಳಿದಂತೆ ಭೋಜನ- ನಿವೃತ್ತಿಯೆಂದೇ ಅರ್ಥ, ಉಪವಾಸ ಶಬ್ದಕ್ಕೆ ರೂಢಿಯಲ್ಲಿ ಭೋಜನ ವೃತ್ತಿ ಯೆಂದು ಅರ್ಥವಾದರೂ ಆ ಶಬ್ದದ ಅವಯವಾರ್ಥವನ್ನು ವಿಚಾರ ಮಾಡಿದರೆ (ಉಪ + ಸಮೀಪವಾಸಃ = ಉಪವಾಸಃ) ಆತ್ಮ ಸಮೀಪದಲ್ಲಿ ವಾಸಮಾಡುವುದು ಅಂದರೆ, ಮನಸ್ಸನ್ನು ಆತ್ಮಸ್ವರೂಪದಲ್ಲಿ ಲೀನಗೊಳಿಸ ವುದೆಂದರ್ಥವಾಗುವುದು. ಹೀಗೆ ಆತ್ಮಸ್ವರೂಪದಲ್ಲಿ ಮನಸ್ಸನ್ನು ಲೀನ ಗೊಳಿಸುವುದಕ್ಕೆ ಭೋಜನಕ್ರಿಯೆಯು ಪ್ರತಿಬಂಧಕವಾಗಿರುವುದರಿಂದಲೂ ಅದರ ತ್ಯಾಗವು ಆತ್ಮಸ್ವರೂಪಲೀನತೆಗೆ ಸಹಕಾರಿಕಾರಣವಾಗುವುದರಿಂದಲೂ “ಅನ್ನವೇ ಪ್ರಾಣ” ಎಂದು ಹೇಳುವಂತೆ ಭೋಜನನಿವೃತ್ತಿರೂಪವಾದ ಕಾರಣ ದಲ್ಲಿ ಆತ್ಮಸ್ವರೂಪಲೀನತಾರೂಪವಾದ ಕಾರ್ಯವನ್ನು ಉಪಚರಿಸಿ ಭೋಜನ ನಿವೃತ್ತಿಯನ್ನು ಉಪವಾಸವೆಂದು ಕರೆದುದಾಗಿದೆ. ಏವಂಚ ಕಾಲನಿಯಮ ದಿಂದ ಚತುರ್ವಿಧಾಹಾರನಿವೃತ್ತಿಯು ಅನಶನವೆಂಬ ಮೊದಲನೆಯ ತಪಸ್ಸಾಗುವುದು.
  ಈ ಅನಶನ ತಪಸ್ಸಿನ ಉದ್ದೇಶವು “ದೃಷ್ಟಫಲಾನಪೇಕ್ಷಂ ಸಂಯಮ ಪ್ರಸಿದ್ಧಿ. ರಾಗೋಚ್ಛೇದ ಕರ್ಮವಿನಾಶ ಧ್ಯಾನಾಗಮಾವಾರ್ಥಮನನ ವಚನಂ” ಎಂದು ರಾಜವಾರ್ತಿಕದಲ್ಲಿ ಹೇಳಿರುವಂತೆ ಮಂತ್ರಸಿದ್ಧಿ ಮೊದ ಲಾದ ದೃಷ್ಟಫಲವನ್ನಪೇಕ್ಷಿಸದೆ ಹಿಂದೆ ಹೇಳಲ್ಪಟ್ಟ ಸಂಯಮದ ಸಿದ್ಧಿಗೋ ಸ್ಕರವೂ, ವಿಷಯಾನುರಾಗದ ವಿನಾಶಕ್ಕೋಸ್ಕರವೂ, ಕರ್ಮವಿನಾಶಕ್ಕೋ ಸ್ಕರವೂ ಧ್ಯಾನದ ಮತ್ತು ಆಗಮಜ್ಞಾನದ ಪ್ರಾಪ್ತಿಗೋಸ್ಕರವೂ ಉಪವಾಸ ವನ್ನು ಮಾಡುವುದಾಗಿದೆ.
  ತನ್ನ ಉದರಪೂರ್ತಿಯಾಗಿ ಭುಂಜಿಸದೆ ಆಹಾರದ ನಾಲ್ಕನೆಯ ಒಂದು ಭಾಗದಿಂದಾಗಲಿ ಅರ್ಧಭಾಗದಿಂದಾಗಲಿ ಕಡಮೆಯಾದ ಆಹಾರವನ್ನು ಭುಂಜಿಸುವ ಕ್ರಿಯೆಗೆ ಆವಮೌದರ್ಯವೆಂದು ಹೆಸರು. ಇದು ಎರಡನೆಯ ಬಾಹ್ಯತಪಸ್ಸು, ಇದರ ಉದ್ದೇಶವು “ಸಂಯಮ ಪ್ರಜಾಗರ ದೋಷಪ್ರಶಮ ಸಂತೋಷ’ ಸ್ವಾಧ್ಯಾಯ ಸುಖಸಿದ್ದಾದ್ಯರ್ಥಮಾವಮೌದರ್ಯಂ” ಎಂದು ರಾಜವಾರ್ತಿಕದಲ್ಲಿ ಹೇಳಿರುವಂತೆ ಸಂಯಮದ ಸಿದ್ಧಿಗೋಸ್ಕರವೂ ಆಲಸ್ಯವುಂಟಾಗದ-ಎಚ್ಚರಿಕೆಯಿಂದಿರುವುದಕ್ಕೋಸ್ಕರವೂ ದೋಷಶಾಂತಿಗೋಸ್ಕರ ವೂ ಸಂತೋಷಪ್ರಾಪ್ತಿಗೋಸ್ಕರವೂ ಶಾಸ್ತ್ರಾಧ್ಯಯನವು ಸುಖವಾಗಿ ಸಿದ್ಧಿಸು ವುದಕ್ಕೋಸ್ಕರವೂ ಇದನ್ನು ಆಚರಿಸುವುದಾಗಿದೆ.
  ಆಹಾರ-ಭಿಕ್ಷಾನಿಮಿತ್ತವಾಗಿ ಇಷ್ಟು ಮನೆಗಳವರೆಗೆ, ಬೀದಿಯವರೆಗೆ ಅಥವಾ ಅರ್ಥಗ್ರಾಮದವರೆಗೆ ಎಂದು ಸಂಕಲ್ಪವನ್ನು ಮಾಡಿಕೊಂಡು ಹೋಗಿ ಅವಕ್ಕನುಸಾರವಾಗಿ ಆಹಾರವು ದೊರೆತರೆ ಭುಂಜಿಸುವುದು, ದೊರೆ ಯದಿದ್ದರೆ ಮನೋವಿಕಾರವನ್ನು ಹೊಂದಿದೆ ಹಿಂದಿರುಗಿ ತಪೋವನಕ್ಕೆ ಹೋಗಿ ಸಂತೋಷದಿಂದಿರುವುದು ಎಂಬ ಸಂಕಲ್ಪಕ್ಕೆ ಮತ್ತು ಆಚರಣೆಗೆ ವೃತ್ತಿಪರಿಸಂಖ್ಯಾನವೆಂದು ಹೆಸರು. ಇದು ಮೂರನೆಯ ಬಾಹ್ಯತಪಸ್ಸು, ಉತ್ತರೋತ್ತರ ಆಶಾನಿವೃತ್ತಿಗಾಗಿಯೂ ಈ ತಪಸ್ಸು.
  ಇಂದ್ರಿಯಗಳ ದಮನಕ್ಕೋಸ್ಕರವೂ ವ್ಯಾಮೋಹಕವಾದ ಶರೀರ ತೇಜಸ್ಸನ್ನು ಕಡಿಮೆಮಾಡಿಕೊಳ್ಳುವುದಕ್ಕೋಸ್ಕರವೂ ಹಾಲು ತುಪ್ಪ ಬೆಲ್ಲ ಎಣ್ಣೆ ಮೊದಲಾದ ರಸಪದಾರ್ಥಗಳನ್ನು ತ್ಯಜಿಸುವುದಕ್ಕೆ ರಸಪರಿತ್ಯಾಗವೆಂದು ಹೆಸರು. ಇದು ನಾಲ್ಕನೆಯ ಬಾಹ್ಯತಪಸ್ಸು.
  ಇತರರ ಬಾಧಾನಿವೃತ್ತಿಗೋಸ್ಕರವೂ ಬ್ರಹ್ಮಚರ್ಯಸಿದ್ಧಿಗೋಸ್ಕರವೂ ಶಾಸ್ತ್ರಾಧ್ಯಯನದ ಮತ್ತು ಧ್ಯಾನದ ಸಿದ್ಧಿಗೋಸ್ಕರವೂ ಜನರಹಿತವಾದ ಪ್ರದೇಶದಲ್ಲಿ ಒಬ್ಬನೇ ಮಲಗುವ ಮತ್ತು ಕುಳಿತುಕೊಳ್ಳುವ ನಿಯಮಕ್ಕೆ ವಿವಿಕ್ತರಯ್ಯಾಸನ ತಪಸ್ಸೆಂದು ಹೆಸರು. ಇದು ಐದನೆಯ ಬಾಹ್ಯತವನ್ನು.
  ಶಾರೀರಿಕ ದುಃಖವನ್ನು ಸಹಿಸಿಕೊಳ್ಳುವುದಕ್ಕೋಸ್ಕರವೂ ಸುಖದಲ್ಲಿ
  ಆಸಕ್ತಿಯಿಲ್ಲದಿರುವುದಕ್ಕೋಸ್ಕರವೂ ಶಾಸ್ತ್ರ ಪ್ರಭಾವನೆಗೋಸ್ಕರವೂ, ಶರೀರ ಕೇಶವನ್ನನುಭವಿಸುವುದಕ್ಕೆ ಕಾಯಕ್ಷೇಶತಪಸ್ಸೆಂದು ಹೆಸರು. ವರ್ಷಾಕಾಲದಲ್ಲಿ ವೃಕ್ಷಮೂಲದಲ್ಲಿ ತಪಸ್ಸು ಮಾಡುವುದಕ್ಕೆ ವರ್ಷಾಯೋಗವೆಂದೂ, ಬೇಸಿಗೆ ಯಲ್ಲಿ ಗಿರಿಶಿಖರದಲ್ಲಿ ತಪಸ್ಸು ಮಾಡುವುದಕ್ಕೆ ಗ್ರೀಷ್ಮಯೊಗ ಅಥವಾ ಆತಾಪನಯೋಗವೆಂದೂ, ಚಳಿಗಾಲದಲ್ಲಿ ನದಿ ಸರೋವರತೀರದಲ್ಲಿ ತಪಸ್ಸು ಮಾಡುವುದಕ್ಕೆ ಶಿಶಿರಯೋಗವೆಂದೂ ನಿಂತು ತಪಸ್ಸು ಮಾಡುವುದಕ್ಕೆಪ್ರತಿಮಾಸ್ಥಾನವೆಂದೂ ಹೆಸರು. ಈ ಭೇದಗಳೆಲ್ಲ ಕಾಯ ಕೇಶತಪಸ್ಸಿನಲ್ಲಿ ಅಂತರ್ಭೂತವಾಗಿದೆ. ಇದು ಆರನೆಯ ಬಾಹ್ಯತಪಸ್ಸು.
  ಬಾಹ್ಯತಪಸ್ಸಿನಂತೆ ಅಭ್ಯಂತರತಪಸ್ಫೂ ಪ್ರಾಯಶ್ಚಿತ್ತ, ವಿನಯ, ವೈಯಾ
  ವೃತ್ತ, ಸ್ವಾಧ್ಯಾಯ, ವ್ಯುತ್ಸರ್ಗ, ಧ್ಯಾನಗಳೆಂದು ಆರು ಪ್ರಕಾರವಾಗಿರುತ್ತದೆ. ಇದು ಅಂತಃಕರಣವ್ಯಾಪಾರಶ್ರಿತವಾಗಿರುವುದರಿಂದಲೂ ಬಾಹ್ಯಪದಾರ್ಥಾ ಪೇಕ್ಷೆಯಿಲ್ಲದೆ ಉಂಟಾಗುವುದರಿಂದಲೂ ಅಭ್ಯಂತರ ತಪಸ್ಸೆಂದು ಹೇಳಲ್ಪಡು ವುದು. ಈ ಪ್ರಾಯಶ್ಚಿತ್ತಾದಿಗಳೂ ಪ್ರಭೇದಗಳನ್ನೊಳಗೊಂಡಿವೆ. ಅವುಗಳನ್ನೆಲ್ಲ ವಿವರಿಸುತ್ತ ಹೋದರೆ ಲೇಖವಿಸ್ತಾರವಾಗುವುದೆಂದು ಬಗೆದು ಮೂಲಭೇದ ಗಳನ್ನು ಮಾತ್ರ ವಿವರಿಸುವವು.
  ಪ್ರಾಯಶ್ಚಿತ್ತವನ್ನುವಲ್ಲಿ ಪ್ರಾಯ ಶಬ್ದಕ್ಕೆ ಅಪರಾಧವೆಂದೂ ಚಿತ್ತ ಶಬ್ದಕ್ಕೆ ಶುದ್ಧಿಯೆಂದೂ ಅರ್ಥ, “ಪ್ರಾಯಚ್ಚಿತಿಚಿತ್ತಯೋಃ ಸುಟ್” ಎಂಬ ಸೂತ್ರ ದಿಂದ ಪ್ರಾಯಶಬ್ದದ ಮುಂದೆ ಸಕಾರವು ಒಂದು ಪ್ರಾಯಶ್ಚಿತ್ತವೆಂದಾಗಿದೆ. ಮಾಡಿದ ತಪ್ಪನ್ನು ಶುದ್ಧಿಮಾಡಿಕೊಳ್ಳುವ ಮನೋವ್ಯಾಪರಕ್ಕೆ ಪ್ರಾಯಶ್ಚಿತ್ತ ಎಂದು ಹೆಸರು. ಪ್ರಮಾದದೋಷನಿವಾರಣ, ಮನಃ ಪ್ರಸನ್ನತೆ, ಸಂಯಮದಲ್ಲಿ ದಾರ್ಥ್ಯ ಮೊದಲಾದುವುಗಳ ಸಿದ್ದಿಗೋಸ್ಕರ ಪ್ರಾಯಶ್ಚಿತ್ತತಪಸ್ಸನ್ನು ಮಾಡು ವುದಾಗಿದೆ. ಇದು ಮೊದಲನೆಯ ಅಭ್ಯಂತರತಪಸ್ಸು.
  ಆಲಸ್ಕವಿಲ್ಲದೆ ಶುದ್ಧಮನಸ್ಸಿನಿಂದ ಜ್ಞಾನ ದರ್ಶನ ಚಾರಿತ್ರಗಳಲ್ಲಿ ಗೌರವ ಬುದ್ಧಿಯನ್ನಿಟ್ಟು ಅವುಗಳನ್ನು ಅನುಷ್ಠಿಸುವುದಕ್ಕೂ ಪೂಜ್ಯರಾದ ಆಚಾರ್ಯರು ಮೊದಲಾದವರು ಬಂದಾಗ, ಎದ್ದು ನಿಲ್ಲುವುದು ಕೈಮುಗಿಯು ವುದು ಮೊದಲಾದ ಉಪಚಾರಕ್ರಿಯೆಗೂ ವಿನಯತಪಸ್ಸೆಂದು ಹೆಸರು.
  ಮನಸ್ಸಿನಲ್ಲಿ ಜುಗುಪ್ಪೆಯು೦ಟಾಗದಿರುವುದಕ್ಕೋಸ್ಕರವೂ ಸಿದ್ಧಾಂತದಲ್ಲಿ ಆಸಕ್ತಿಯುಂಟಾಗುವುದಕ್ಕೋಸ್ಕರವೂ ಧ್ಯಾನದಲ್ಲಿ ಏಕಾಗ್ರತೆಯುಂಟಾಗುವು ದಕ್ಕೋಸ್ಕರವೂ ಆಚಾರ್ಯರು ತಪಸ್ವಿಗಳು ಮೊದಲಾದವರ ಸೇವಾ ಶುಕ್ರೂಷೆಯನ್ನು ಯಥೋಚಿತವಾಗಿ ಮಾಡುವುದಕ್ಕೆ ವೈಯಾವೃತ್ತ ತಪಸ್ಸೆಂದು ಹೆಸರು. ಕಾಮಚೇಷ್ಟೆಯಿಂದ ಅಥವಾ ಇತರ ಪದಾರ್ಥದಿಂದ ವಿಮುಖವಾದ ಭಾವಕ್ಕೆ ಅಥವಾ ಕ್ರಿಯೆಗೆ ವೈಯಾವೃತ್ತವೆಂದು ಹೆಸರು.
  ವಿಶೇಷವಾದ ಜ್ಞಾನಾರ್ಜನೆಗೋಸ್ಕರವೂ ತತ್ವನಿಶ್ಚಯಕ್ಕೋಸ್ಕರವೂ ಸಂಶಯ ನಿವಾರಣೆಗೋಸ್ಕರವೂ ಪರವಾದಿಗಳ ಪಂದೇಹ ನಿವಾರಣ ಮಾಡುವುದಕ್ಕೋಸ್ಕರವೂ, ಧರ್ಮದಲ್ಲಿಯೂ ಧರ್ಮದ ಫಲದಲ್ಲಿಯೂ ಪ್ರೀತಿಯುಂಟಾಗುವುದಕ್ಕೋಸ್ಕರವೂ ತಪೋವೃದ್ಧಿಗೋಸ್ಕರವೂ ಅತಿಚಾರ ವಿಶುದ್ಧಿಗೋಸ್ಕರವೂ ವಿಕಾರಭಾವಗಳ ಶಾಂತಿಗೋಸ್ಕರವೂ ಮನಃಪ್ರಸನ್ನತೆ ಗೋಸ್ಕರವೂ ನಿರ್ದುಷ್ಟವಾದ ಗ್ರಂಥಗಳ ಅಧ್ಯಯನವನ್ನು ಮಾಡುವುದು ಯೋಗ್ಯ ಪಾತ್ರದಲ್ಲಿ ಶಾಸ್ತ್ರದಾನ ಮಾಡುವುದು, ಸಂಶಯನಿವೃತ್ತಿಗೋಸ್ಕರ ಪ್ರಶ್ನೆ ಮಾಡುವುದು, ಮನನವನ್ನೂ ಶುದ್ಧೋಚ್ಚಾರವನ್ನೂ ಮಾಡುವುದು, ಧರ್ಮ ಪದೇಶವನ್ನು ಮಾಡುವುದು ಇವುಗಳಿಗೆ ಸ್ವಾಧ್ಯಾಯತಪಸ್ಸೆಂದು ಹೆಸರು.
  ಪರಿಗ್ರಹರಾಹಿತ್ಯಕ್ಕೋಸ್ಕರವೂ ನಿರ್ಭಯತ್ವಕ್ಕೋಸ್ಕರವ ಜೀವಿತಾಶಾ ನಿವೃತ್ತಿಗೋಸ್ಕರವೂ ದೋಷನಿವೃತ್ತಿಗೋಸ್ಕರವೂ ಮೋಕ್ಷಮಾರ್ಗಭಾವನೆಯಲ್ಲಿ ತತ್ಪರತೆಯುಂಟಾಗುವುದಕ್ಕೋಸ್ಕರವೂ, ಶರೀರಾದಿಬಾಹ್ಯಪರಿಗ್ರಹಗಳ ಮಮ್ ಕಾರತ್ಯಾಗವನ್ನೂ ಕ್ರೋಧ ಮಾನ ಮಾಯಾ ಲೋಭ ಮಿಥ್ಯಾತ್ವ ಹಾಸ್ಯಾದಿ ಅಭ್ಯಂತರಪರಿಗ್ರಹಗಳ ತ್ಯಾಗವನ್ನೂ ಮಾಡುವುದಕ್ಕೆ ವ್ಯತೃರ್ಗತಪಸ್ಸೆಂದು ಹೆಸರು.
  ಆರನೆಯ ಅಭ್ಯಂತರ ತಪಸ್ಸು ಧ್ಯಾನ. ಒಂದು ವಸ್ತುವಿನಲ್ಲಿ ಮನೋ ವ್ಯಾಪಾರವನ್ನು ತಡೆದಿರಿಸುವುದಕ್ಕೆ ಧ್ಯಾನವೆಂದು ಹೆಸರು. ಧ್ಯಾನವು ಆರ್ತ ರೌದ್ರ ಧರ್ಮ್ಯ ಶುಕ್ಲಗಳೆಂದು ನಾಲ್ಕು ಪ್ರಕಾರವಾಗಿರುತ್ತದೆ. ಮೊದಲನೆಯ ಆರ್ತ ರೌದ್ರ ಧ್ಯಾನಗಳು ಸಂಸಾರದುಃಖಕ್ಕೆ ಕಾರಣಗಳಾಗಿರುವುದರಿಂದ ಅವು ಅಪ್ರಶಸ್ತಗಳು.
  ಆರ್ತವೆಂದರೆ ದುಃಖವೆಂದೂ ರೌದ್ರವೆಂದರೆ ಕ್ರೌರ್ಯವೆಂದೂ ಅರ್ಥ, ಅನಿಷ್ಟ ವಸ್ತುವಿನ ಸಂಯೋಗವಾದರೆ ಅದರ ವಿಯೋಗವು ಹೇಗಾ ಗುವುದೆಂದು ಚಿಂತಿಸುವುದು, ಇಷ್ಟ ವಸ್ತುವಿನ ವಿಯೋಗವಾದರೆ, ಅದರಸಂಯೋಗವು ಹೇಗಾಗುವುದೆಂದು ಚಿಂತಿಸುವುದು ಅಥವಾ ವಿಯೋಗದುಃಖ ವನ್ನನುಭವಿಸುವುದು, ವೇದನೆಯ ದುಃಖವನ್ನು ಚಿಂತಿಸುವುದು, ಉತ್ತರ ಭವ ದಲ್ಲಿ ಸುಖವುಂಟಾಗಬೇಕೆಂದು ಚಿಂತಿಸುವುದು ಇವು ನಾಲ್ಕು ಆರ್ತಧ್ಯಾನದ ಪ್ರಭೇದಗಳಾಗಿರುತ್ತವೆ.
  ಹಿಂಸಾ ವಿಷಯವನ್ನು ಚಿಂತಿಸುವುದು, ಅಸತ್ಯ ವಿಷಯವನ್ನು ಚಿಂತಿಸುವುದು, ಚೌರ್ಯ ವಿಷಯವನ್ನು ಚಿಂತಿಸುವುದು, ಭೋಗೋಪ ಭೋಗ ವಿಷಯಗಳನ್ನು ಸಂರಕ್ಷಿಸಬೇಕೆಂದು ಚಿಂತಿಸುವುದು ಇವು ನಾಲ್ಕು ರೌದ್ರಧ್ಯಾನದ ಪ್ರಭೇದಗಳಾಗಿರುತ್ತವೆ.
  ಧರ್ಮ ಶುಕ್ಲಧ್ಯಾನಗಳು ಮೋಕ್ಷಕ್ಕೆ ಕಾರಣಗಳಾಗಿರುತ್ತವೆ. ಧರ್ಮ ಧ್ಯಾನವು ಆಜ್ಞಾವಿಚಯ ಅಪಾಯವಿಚಯ ವಿಪಾಕವಿಚಯ ಸಂಸ್ಥಾನ ವಿಚಯ ಗಳೆಂದು ನಾಲ್ಕು ಪ್ರಭೇದಗಳುಳ್ಳುದಾಗಿದೆ. ವಿಚಯ ಶಬ್ದಕ್ಕೆ ವಿಚಾರವೆಂದ ರ್ಥವು, ಆಜ್ಞಾವಿಚಯವೆಂದರೆ “ನಾನ್ಯಥಾವಾದಿನೋಜಿನಾ” ಎಂಬ ನಂಬಿಕೆಯನ್ನಿಟ್ಟು ಆಗಮಪ್ರಾಮಾಣ್ಯದಿಂದ ಪದಾರ್ಥನಿರ್ಣಯವನ್ನು ಮಾಡು ವುದೆ೦ದೂ, ಅಪಾಯವಿಚಯವೆಂದರೆ ಪ್ರಾಣಗಳು ಪಾಪಮಾರ್ಗದಿಂದ ಹೇಗೆ ನಿವೃತ್ತಿಯನ್ನು ಹೊಂದುವುದೆಂದು ಚಿಂತಿಸುವುದೆಂದೂ, ವಿಪಾಕವಿಚಯ ವೆಂದರೆ ಜ್ಞಾನಾವರಣಾದಿ ಕರ್ಮಗಳ ಉದಯ ಫಲಾನುಭವವನ್ನು ಚಿಂತಿಸು ವುದೆಂದೂ, ಸಂಸ್ಥಾನ ವಿಚಯವೆಂದರೆ ಸ್ವರ್ಗ ನರಕ ಮೊದಲಾದ ಲೋಕಾ ಕೃತಿಯನ್ನು ಚಿಂತಿಸುವುದೆಂದೂ ಅರ್ಥ. ಈ ಧ್ಯಾನವು ನಾಲ್ಕನೆಯ ಗುಣ ಸ್ಥಾನದಿಂದ ಏಳನೆಯ ಗುಣಸ್ಥಾನದವರೆಗೆ ನಾಲ್ಕು ಗುಣಸ್ಥಾನಗಳಲ್ಲಿ ಉಂಟಾ ಗುವುದು. ಈ ಧರ್ಮಧ್ಯಾನವು ಸದಸ್ಯ ಪಿಂಡಸ್ಥ ರೂಪಸ್ಥ ರೂಪಾತೀತ ವೆಂದೂ ನಾಲ್ಕು ಪ್ರಕಾರವಾಗಿರುತ್ತದೆ.
  ಶುಕ್ಲಧ್ಯಾನವು ಪೃಥಕವಿತರ್ಕವೀಚಾರ ಏಕತ್ವವಿತರ್ಕ, ಸೂಕ್ಷ ಕ್ರಿಯಾಪ್ರತಿಪಾತಿ, ವ್ಯಪರತಕ್ರಿಯಾನಿವರ್ತಿಯೆಂದು ನಾಲ್ಕು ಪ್ರಕಾರವಾಗಿದೆ. ಶುಕ್ಲ ಧ್ಯಾನವೆಂದರೆ ಶುಭ್ರ-ನಿರ್ಮಲಧ್ಯಾನವೆಂದರ್ಥವು, ಪೃಥಕ್ಷವೆಂದರೆ ಬೇರೆಬೇರೆಯಾಗಿಯೆಂದೂ, ವಿತರ್ಕವೆಂದರೆ ಶ್ರುತಜ್ಞಾನವೆಂದೂ, ವೀಚಾರವೆಂದರೆ ದ್ರವ್ಯ ಪರ್ಯಾಯ ಶ್ರುತವಚನ ಮನೋವಾಕ್ಯಾಯಯೋಗ ಇವುಗಳು ಬದಲಾಯಿಸುವುದೆಂದೂ ಅರ್ಥ. ಅಂದರೆ ಶ್ರುತಜ್ಞಾನದ ಮೂಲಕ ದ್ರವ್ಯವಿಷಯವನ್ನು ಬಿಟ್ಟು, ಅದರ ಪರ್ಯಾಯವನ್ನೂ ಒಂದು ಶ್ರುತವಚನ ವನ್ನು ಬಿಟ್ಟು ಮತ್ತೊಂದು ಶ್ರುತವಚನವನ್ನೂ ಮನೋವಾಕ್ಕಾಯ ಯೋಗ ಗಳಲ್ಲಿ ಒಂದನ್ನು ಬಿಟ್ಟು ಮತ್ತೊಂದು ಯೋಗವನ್ನೂ ಅವಲಂಬಿಸಿ ಧ್ಯಾನಿಸುವು ದೆಂದು ಭಾವವು, ಇದು ಪೃಥಕ್ವವಿತರ್ಕ ವೀಚಾರವೆಂಬ ಮೊದಲನೆಯ ಶುಕ್ಲಧ್ಯಾನದ ಸ್ವರೂಪ, ಈ ಧ್ಯಾನದಿಂದ ಮೋಹನೀಯಕರ್ಮಪ್ರಕೃತಿಗಳು ಉಪಶಮವನ್ನೋ ಕ್ಷಯವನ್ನೂ ಹೊಂದುವುವು, ಬಳಿಕ ಅನಂತ ಗುಣ ವಿಶುದ್ಧವಾದ ಯೋಗವಿಶೇಷವನ್ನು ಹೊಂದಿ ಜ್ಞಾನಾವರಣಾದಿ ಕರ್ಮಗಳ ಬಂಧವನ್ನು ತಡೆದು ಆ ಸಂಚಿತ ಕರ್ಮಗಳ ಸ್ಥಿತಿಯನ್ನು ಕಡಿಮೆ ಮಾಡುತ್ತ ಮತ್ತು ನಾಶಮಾಡುತ್ತ ಶ್ರುತಜ್ಞಾನದ ಉಪಯೋಗದಿಂದ ನಿಶ್ಚಲವಾದ ಮನಸ್ಸುಳ್ಳವನಾಗಿ ವೈಡೂರ್ಯಮಣಿಯಂತೆ ಕರ್ಮಲೇಪರಹಿತನಾಗಿ ಕ್ಷೀಣ ಕಷಾಯವಾಗಿ, ಮೇಲೆ ಹೇಳಿದಂತೆ ದ್ರವ್ಯಪರ್ಯಾಯ ಶ್ರುತವಚನ ಮನೋ ವಾಕ್ಯಾಯಯೋಗಗಳಲ್ಲಿ ಬದಲಾವಣೆಯನ್ನು ಹೊಂದದೆ, ಒಂದೇ ಬದ್ಧವಸ್ತು ವನ್ನು ಧ್ಯಾನಿಸುವುದಕ್ಕೆ ಏಕತ್ವವಿತರ್ಕಶುಕ್ಲಧ್ಯಾನವೆಂದು ಹೆಸರು. ಈ ಧ್ಯಾನ ದಿಂದ ಅಶೇಷ ಘಾತಿಕರ್ಮಪ್ರಕೃತಿಗಳು ನಾಶವಾಗುವುವು. ಈ ಧ್ಯಾನ ಗಳೆರಡೂ ಶ್ರುತಕೇವಲಿಗಳಿಗೆ ಉಂಟಾಗುವುದಲ್ಲದೆ ಇತರರಿಗೆ ಉಂಟಾಗಲಾರವು.
  ಏಕತ್ವವಿತರ್ಕಶುಕ್ಲಧ್ಯಾನವೆಂಬ ಬೆಂಕಿಯಿಂದ ಘಾತಿಕರ್ಮವೆಂಬ ಕಟ್ಟಿಗೆ ಯನ್ನು ಸುಟ್ಟು ಕೇವಲಜ್ಞಾನವೆಂಬ ಕಿರಣವುಳ್ಳವನೂ, ಮೇಘಪಂಜರದಿಂದ ಬಿಡಲ್ಪಟ್ಟ ಸೂರ್ಯನಂತೆ ಭಾಭಾಸ್ಯಮಾನನೂ ಆದ ಆ ತೀರ್ಥ೦ಕರ ಕೇವಲಿ ಯು ಅಥವಾ ಇತರ ಕೇವಲಿಯು ಮುಕ್ತನಾಗುವುದಕ್ಕೆ, ಅಂದರೆ ಆಯುಷ್ಯ ವೇದನಿಯ ನಾಮಗೋತ್ರಗಳೆಂಬ ಅಘಾತಿಕರ್ಮಗಳಿಂದ ಬಿಡುಗಡೆಯನ್ನು ಹೊಂದುವುದಕ್ಕೆ, ಅಂತರ್ಮುಹೂರ್ತಕಾಲವುಳಿಯುವಾಗ ಸಂಪೂರ್ಣ ವಾಗ್ಯೋಗವನ್ನು ಮನೋಯೋಗವನ್ನೂ ಸ್ಕೂಲಕಾಯಯೋಗವನ್ನೂ ಪರಿ ಹರಿಸಿ-ಬಿಟ್ಟು ಸೂಕ್ಷ್ಮಕ ಕಾಯಯೋಗವನ್ನವಲಂಬಿಸಿ ಸೂಕ್ಷ್ಮ ಕ್ರಿಯಾಪ್ರತಿಪಾತಿಶುಕ್ಲಾನವನ್ನು ಮಾಡುವನು. ಈ ಧ್ಯಾನವು ಹದಿಮೂರನೆಯ ಗುಣಸ್ಥಾನ ವರ್ತಿಯಾದ ಸಯೋಗಿಕೇವಲಿಗೇ ಸಾಧ್ಯವು.
  ಸಮಸ್ತ ಕಾಯವಾಬ್ಯಾನಸವ್ಯಾಪಾರವನ್ನೂ ಆತ್ಮಪ್ರದೇಶ ಪರಿಸ್ಪಂದ ರೂಪವಾದ ವ್ಯಾಪರವನ್ನೂ ಶ್ವಾಸೋಚ್ಛಾಸಕ್ರಿಯೆಯನ್ನೂ ದೂರಮಾಡಿ ಕಪರವಾಗಿ ಉಂಟಾಗುವ ಧ್ಯಾನಕ್ಕೆ ವ್ಯಪರತಿಕ್ರಿಯಾನಿವರ್ತಿ ನಿಜಶುದ್ಧಾತ್ಮ ಅಥವಾ ಸಮುಚ್ಛಿನ್ನಕ್ರಿಯಾನಿವರ್ತಿ ಶುಕ್ಲಧ್ಯಾನವೆಂದು ಹೆಸರು. ಇದು ಅಶೇಷ ಘಾತಿಕರ್ಮವನ್ನು ನಾಶಮಾಡಲು ಸಮರ್ಥವಾದುದು. ಈ ಧ್ಯಾನವು ಹದಿನಾಲ್ಕನೆಯ ಗುಣಸ್ಥಾನವರ್ತಿಯಾದ ಅಯೋಗಿಕೇವಲಿಗೇ ಸಾಧ್ಯವು
  ಹಿಂದೆ ಹೇಳಿಕೊಂಡು ಬಂದಂತೆ ಈ ಉತ್ತಮತಪೋಧರ್ಮವೂ ಮುನಿ ಗಳಿಗೆ ವಿಧಾಯಕವಾಗಿರುವುದಾದರೂ ಇದರ ಸ್ವರೂಪವನ್ನು ಚೆನ್ನಾಗಿ ಲಕ್ಷ ವಿಟ್ಟು ಪರಿಶೀಲಿಸಿ ತಿಳಿದು, ಇದರಲ್ಲಿ ಪೂಜ್ಯಬುದ್ಧಿಯನ್ನಿಟ್ಟು ಪೂಜಿಸುವುದೂ ಯಥಾಶಕ್ತಿ ಅನುಷ್ಠಿಸುವುದೂ ಗೃಹಸ್ಥರ ಪವಿತ್ರ ಕರ್ತವ್ಯವಾಗಿರುವುದು. ಈ ಸಂಸ್ಕಾರವು ಕಾಲಾಂತರದಲ್ಲಿ ಅಂತಹ ಆತ್ಮಶಕ್ತಿಯನ್ನುಂಟುಮಾಡಬಲ್ಲುದು.

  error: Jain Heritage Centres - Celebrating Jain Heritage.....Globally!