Skip to content
Home » ಕನ್ನಡ » ಸುದ್ದಿ-ಸಮಾಚಾರ » ಗೇರುಸೊಪ್ಪೆ ಪಾರ್ಶ್ವನಾಥ ಸ್ವಾಮಿ ಬಸದಿ ಹಾಗೂ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ಪೂಜೆ

ಗೇರುಸೊಪ್ಪೆ ಪಾರ್ಶ್ವನಾಥ ಸ್ವಾಮಿ ಬಸದಿ ಹಾಗೂ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ಪೂಜೆ

  ಗೇರುಸೊಪ್ಪೆ, 9 ಫೆಬ್ರವರಿ 2020: ಸಾಳುವ ಅರಸರ ರಾಜಧಾನಿ ಪುರಾತನ ಜೈನ ಕ್ಷೇತ್ರ ಗೇರುಸೊಪ್ಪೆಯ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಹಾಗೂ ಮಹಾಮಾತೆ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವವು ವೈಭವಯುತವಾಗಿ ನೆರವೇರಿತು. ಮೂಡುಬಿದಿರೆಯ ಭಾರತ ಭೂಷಣ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ನೂರಾ ಎಂಟು ಕಳಶಗಳ ಮಹಾಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ; ಜಗನ್ಮಾತೆ ಜ್ವಾಲಾಮಾಲಿನಿ ಅಮ್ಮನವರಿಗೆ 24 ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಷೋಡಶೋಪಚಾರ ಪೂಜೆ; ಬ್ರಹ್ಮಯಕ್ಷ ದೇವರಿಗೆ 24 ಕಲಶಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಪೂಜೆ; ಜ್ವಾಲಾಮಾಲಿನಿ ಅಮ್ಮನವರ ಪಲ್ಲಕ್ಕಿ ಉತ್ಸವ; ಜ್ವಾಲಾಮಾಲಿನಿ ಅಮ್ಮನವರಿಗೆ ಅಷ್ಟಾವಧಾನ ಪೂಜೆ, ಕ್ಷೇತ್ರದ ಚತುರ್ಮುಖ ಬಸದಿ, ನೇಮಿನಾಥ ಸ್ವಾಮಿ ಬಸದಿ, ವರ್ಧಮಾನ ಸ್ವಾಮಿ ಬಸದಿ ಹಾಗೂ ಪಾರ್ಶ್ವನಾಥ ಸ್ವಾಮಿ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ ಪೂಜೆ ವಿಜೃಂಭಣೆಯಿಂದ ನೆರವೇರಿದವು. ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಶ್ರೀಮತಿ ನಿರ್ಮಲಾ ಬಾಳಾಸಾಹೇಬ್ ಸಾಂಗ್ರೊಳ್ಳಿ ಯವರು ನೀಡಿದ ದಾನದಿಂದ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾದ ಕ್ಷೇತ್ರದ ಮಹಾದ್ವಾರ/ಸ್ವಾಗತ ಕಮಾನಿನ ಉದ್ಘಾಟನೆಯನ್ನು ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ನೆರವೇರಿಸಿದರು. ನಂತರ ಧಾರ್ಮಿಕ ಸಭೆಯು ಜರುಗಿತ್ತು. ಶ್ರ‍ೀ ರ‍ಾಣಿ ಚೆನ್ನಭೈರಾದೇವಿ ದಿಗಂಬರ ಜೈನ ಟಸ್ಟ್ ಕ್ಷೇಮಪುರ (ರಿ)ದ ವತಿಯಿಂದ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಟ್ರ‍ಸ್ಟಿನ ಅಧ್ಯಕ್ಷರಾದ ಎಂ.ಲೋಕರಾಜ್ ಜೈನ್, ಕಾರ್ಯದರ್ಶಿ ಶ್ರ‍ೀ ನಾಗರಾಜ್ ಜೈನ್, ಪದಾಧಿಕಾರಿಗಳಾದ ಮಂಕಿಯ ಶ್ರ‍ೀ ಚಂದ್ರಶೇಖರ್ ರವರು, ಪದಾಧಿಕಾರಿಗಳಾದ ಗೇರುಸೊಪ್ಪೆಯ ಶ್ರ‍ೀಕಾಂತ್, ಹೆಗ್ಗಾರಗದ್ದೆಯ ಮಂಜಯ್ಯ, ಪದ್ಮರಾಜ್ ಹಾಗೂ ಇತರರು ಉಪಸ್ಥಿತರಿದ್ದರು.ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಜನರು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
  – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ, ಚಿತ್ರಗಳು: ನಿತಿನ್ ಹೆಚ್.ಪಿ., ಬೆಂಗಳೂರು (HPN@JHC)

  ಮಾಘಮಂಗಳ ಸ್ನಾನ

  ಪಂಚಾಮೃತ ಅಭಿಷೇಕ

  ಧಾರ್ಮಿಕ ಸಭೆ

  ಪಲ್ಲಕ್ಕಿ ಉತ್ಸವ

  ಅಷ್ಟಾವಧಾನ ಸೇವೆ

  error: Jain Heritage Centres - Celebrating Jain Heritage.....Globally!