Skip to content
Home » ಕನ್ನಡ » ಸುದ್ದಿ-ಸಮಾಚಾರ » ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨ರ ಉದ್ಘಾಟನೆ ೨೬ ಮೇ ೨೦೨೨ ರಂದು

ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨ರ ಉದ್ಘಾಟನೆ ೨೬ ಮೇ ೨೦೨೨ ರಂದು

  ಬೆಂಗಳೂರು (ಕರ್ನಾಟಕ), ೨೨ ಮೇ ೨೦೨೨: ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ (www.jainheritagecentres.com) ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨ರ ಉದ್ಘಾಟನೆಯು ೨೬ ಮೇ ೨೦೨೨ ರಂದು ಸಂಜೆ ೭ ಘಂಟೆಗೆ ನಡೆಯಲಿರುವ ಆನ್ಲೆöÊನ್ (ಔಟಿಟiಟಿe) ಕಾರ್ಯಕ್ರಮದ ಮೂಲಕ ಉದ್ಘಾಟನೆಯಾಗಲಿದೆ. ನಾಡಿನ ಹೆಸರಾಂತ ವಿದ್ವಾಂಸರಾದ ಡಾ. ಹಂಪ ನಾಗರಾಜಯ್ಯ (ಹಂಪನಾ) ನವರು ”ಕುರಿಕ್ಯಾಲದ ಜಿನವಲ್ಲಭನ ಶಾಸನ” ವಿಷಯದ ಕುರಿತ ಉಪನ್ಯಾಸದ ಮೂಲಕ ಉದ್ಘಾಟಿಸಲಿದ್ದಾರೆ.

  ಭಾರತೀಯ ಪುರಾತತ್ತ್ವ ಸರ್ವೇಕ್ಷಣಾಲಯ, ನವದೆಹಲಿಯ ಅಪರ ಮಹಾನಿರ್ದೇಶಕರಾದ ಡಾ.ಅಲೋಕ್ ತ್ರಿಪಾಠಿ ಯವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

  ಜೈನ ಕಾರ್ಯಕರ್ತ ನವದೆಹಲಿಯ ಶ್ರೀ ಸಾಹೂ ಆರ್.ಪಿ.ಜೈನ್ ರವರು ಸ್ವಾಗತ ನುಡಿಗಳನ್ನಾಡಲಿದ್ದಾರೆ. ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ನ ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ನಿತಿನ್ ಹೆಚ್.ಪಿ.ರವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

  ನವದೆಹಲಿಯ ಶ್ರೀ ಗೌರವ್ ಜೈನ್‌ರವರು ಕಾರ್ಯಕ್ರಮ ನಿರೂಪಿಸಲಿದ್ದಾರೆ. ಬೆಂಗಳೂರಿನ ಶ್ರೀಮತಿ ಕೆ.ಪಿ.ಸುಧಾದೇವಿಯವರು ಮಂಗಳಾಚರಣೆ ಹಾಗೂ ಶಾಂತಿಮಂತ್ರ ಪಠಣ ಮಾಡಲಿದ್ದಾರೆ.

  ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨ರ ಉದ್ಘಾಟನೆ ೨೬ ಮೇ ೨೦೨೨ ರಂದು
  ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨ರ ಉದ್ಘಾಟನೆ ೨೬ ಮೇ ೨೦೨೨ ರಂದು

  ಜೈನ್ ಹೆರಿಟೇಜ್ ಫೆಸ್ಟಿವಲ್‌ನ ಬಗ್ಗೆ – ಜೈನ್ ಹೆರಿಟೇಜ್ ಫೆಸ್ಟಿವಲ್ ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ ಅಂತರ್ಜಾಲ ತಾಣದ ವಾರ್ಷಿಕ ಕಾರ್ಯಕ್ರಮ. ಈ ಕಾರ್ಯಕ್ರಮವು ಜೈನಧರ್ಮಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಸಂಶೋಧಕರು, ಲೇಖಕರು, ಚಿಂತಕರು, ಹಾಗೂ ಕಾರ್ಯಕರ್ತರನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶವನ್ನು ಹೊಂದಿದೆ. ಈ ವೇದಿಕೆಯು ಜೈನಧರ್ಮ, ಅದರ ಇತಿಹಾಸ, ಪರಂಪರೆ, ತತ್ತ್ವ – ಸಿದ್ಧಾಂತ ಹಾಗೂ ಪ್ರಸ್ತುತ ಸಮಸ್ಯೆಗಳ ಬಗ್ಗೆ ವಿದ್ವಾಂಸರು ಹಾಗೂ ಜನ ಸಾಮಾನ್ಯರ ನಡುವೆ ವಿಚಾರ ವಿನಿಮಯವನ್ನು ಅನುವು ಮಾಡಿ ಕೊಡುತ್ತದೆ.

  ಈ ವರ್ಷದ ಕಾರ್ಯಕ್ರಮವು ಜೈನ್ ಹೆರಿಟೇಜ್ ಫೆಸ್ಟಿವಲ್‌ನ ಮೊದಲ ಆವೃತ್ತಿಯಾಗಿದೆ. ೨೬ ಮೇ ರಿಂದ ೩೧ ಜುಲೈ ೨೦೨೨ ರವರೆಗೆ ೧೦ ವಾರಗಳ ಕಾಲ ನqಯುವೆ ಕಾರ್ಯಕ್ರಮದಲ್ಲಿ ಜೈನಧರ್ಮಕ್ಕೆ ಸಂಬಂಧಿಸಿದ ೯ ಪ್ರಧಾನ ವಿಷಯಗಳ ೨೦ಕ್ಕೂ ಹೆಚ್ಚು ಸಭೆಗಳಲ್ಲಿ ದೇಶ ವಿದೇಶಗಳ ೩೫ಕ್ಕೂ ಹೆಚ್ಚು ವಿದ್ವಾಂಸರು ಜೈನ ಧರ್ಮಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸವನ್ನು ನೀಡಲಿದ್ದಾರೆ.

  ಈ ಆವೃತ್ತಿಯ ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ, ವಿದೇಶಗಳಲ್ಲಿ ಜೈನಧರ್ಮ, ಕರ್ನಾಟಕದ ಜೈನ ಶಾಸನಗಳು, ಜೈನ ಆಚರಣೆಗಳು, ಜೈನ ಜನಪದ, ಜೈನ ಪರಂಪರೆ ಸಂರಕ್ಷಣೆ, ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ, ಜೈನಧರ್ಮ ಮತ್ತು ಪ್ರಾಕೃತ, ಇಂದಿನ ಜೈನ ಸಮಾಜ.

  ಉದ್ಘಾಟನಾ ಕಾರ್ಯಕ್ರಮ ಹಾಗೂ ಇನ್ನಿತರ ಎಲ್ಲಾ ಉಪನ್ಯಾಸಗಳನ್ನು ಜೈನ್ ಹೆರಿಟೇಜ್ ಸೆಂಟರ್ಸ್ನ ಯೂಟ್ಯೂಬ್ ಚಾನೆಲ್‌ನಲ್ಲಿ – www.youtube.com/c/jainheritagecentres ನೇರಪ್ರಸಾರ ಮಾಡಲಾಗುವುದು. ಹೆಚ್ಚಿನ ವಿವರಗಳಿಗೆ – +೯೧ ೯೮೮೦೮೧೮೮೬೯. – ಜೈನ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ

  error: Jain Heritage Centres - Celebrating Jain Heritage.....Globally!