Home » ಕನ್ನಡ » ಸುದ್ದಿ-ಸಮಾಚಾರ » ಡಿ.ಎನ್.ಅಕ್ಕಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

ಡಿ.ಎನ್.ಅಕ್ಕಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

ಹೊಂಬುಜ (ಹೊಸನಗರ), ಫೆಬ್ರವರಿ 17, 2017: ಹೊಂಬುಜ ಜೈನ ಮಠದಿಂದ ನೀಡಲಾಗುವ 2017ನೇ ಸಾಲಿನ ಸಿದ್ಧಾಂತ ಕೀರ್ತಿ ಪ್ರಶಸ್ತಿಯನ್ನು ಸಂಶೋಧಕ ಡಿ.ಎನ್.ಅಕ್ಕಿ(ದೇವೇಂದ್ರಪ್ಪ ನಾಭಿರಾಜ) ಅವರಿಗೆ ನೀಡಲಾಗುವುದು ಎಂದು ಮಠದ ಪೀಠಾಧಿಕಾರಿ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಸಂಶೋಧನೆ, ಸಾಹಿತ್ಯ ಕ್ಷೇತ್ರದಲ್ಲಿ ಅಕ್ಕಿ ಕೆಲಸ ಮಾಡಿದ್ದಾರೆ. ಪ್ರಶಸ್ತಿಯು ₹ 35 ಸಾವಿರ ನಗದು ಒಳಗೊಂಡಿದೆ. ಮಾ.19ರಂದು ಪ್ರಶಸ್ತಿ  ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. – ಹೊಂಬುಜ ಜೈನ ಮಠ