Home » ಕನ್ನಡ » ಸುದ್ದಿ-ಸಮಾಚಾರ » ಮಹಾಮಸ್ತಕಾಭಿಷೇಕಕ್ಕೆ 500 ಕೋಟಿ: ಕೇಂದ್ರಕ್ಕೆ ಸಿಎಂ ಪತ್ರ

ಮಹಾಮಸ್ತಕಾಭಿಷೇಕಕ್ಕೆ 500 ಕೋಟಿ: ಕೇಂದ್ರಕ್ಕೆ ಸಿಎಂ ಪತ್ರ

ಬೆಂಗಳೂರು, ಜನವರಿ ೨೦, ೨೦೧೭ : ಜೈನರ ಶ್ರದ್ಧಾಕೇಂದ್ರವಾದ ಶ್ರವಣಬೆಳಗೊಳದಲ್ಲಿ 2018 ರ ಫೆಬ್ರವರಿಯಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವವಕ್ಕೆ 500 ಕೋಟಿ ರೂ. ಅನುದಾನ ನೀಡುವಂತೆ ಕೋರಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಪ್ರತಿ ಬಾರಿಯೂ ಕೇಂದ್ರ ಸರಕಾರ ನೆರವು ನೀಡುತ್ತದೆ. ಕಳೆದ ಬಾರಿ ಕೇಂದ್ರ ಯೋಜನಾ ಆಯೋಗದ ಮೂಲಕ 90 ಕೋಟಿ ರೂ. ಕೊಡಲಾಗಿತ್ತು. ಈ ಸಮಾರಂಭದ ನಿಮಿತ್ತ ಶ್ರವಣಬೆಳಗೊಳ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯನ್ನೂ ಕೈಗೊಳ್ಳಲಾಗುತ್ತದೆ. ಜೈನರು ಮತ್ತು ಜೈನೇತರರು ಸೇರಿ ಅಪಾರ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು, ಪ್ರವಾಸಿಗಳು ಆಗಮಿಸುತ್ತಾರೆ. ಹಾಗಾಗಿ ಇಂತಹ ಐತಿಹಾಸಿಕ ಮಹೋತ್ಸವವನ್ನು ಯಶಸ್ವಿಗೊಳಿಸಲು ಕೇಂದ್ರ ಸರಕಾರವು ಹೆಚ್ಚಿನ ನೆರವು ನೀಡಿ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಕುಟುಂಬ ಸಮೇತರಾಗಿ ತಾವು ಆಗಮಿಸಬೇಕು ಎಂದು ಕೇಂದ್ರ ವಿತ್ತ ಸಚಿವರಿಗೆ ಇದೇ ಪತ್ರದ ಮೂಲಕ ಆಹ್ವಾನವನ್ನೂ ನೀಡಿರುವ ಸಿಎಂ ಅವರು, ಶ್ರವಣಬೆಳಗೊಳದ ಚಾರಿತ್ರಿಕ ಮಹತ್ವದ ಬಗ್ಗೆಯೂ ಉಲ್ಲೇಖಿಸಿದ್ದಾರೆ. -ಕೃಪೆ: ವಿಜಯಕರ್ನಾಟಕ