Skip to content
Home » ಕನ್ನಡ » ಸುದ್ದಿ-ಸಮಾಚಾರ » ಮೂಡುಬಿದರೆ ಜೈನಮಠದಲ್ಲಿ ವಿಶ್ವ ಅಹಿಂಸಾ ದಿನಾಚರಣೆ: ರತ್ನಾಕರ ಕಾವ್ಯ ಶತಕ ವಾಚನ-ಪ್ರವಚನ

ಮೂಡುಬಿದರೆ ಜೈನಮಠದಲ್ಲಿ ವಿಶ್ವ ಅಹಿಂಸಾ ದಿನಾಚರಣೆ: ರತ್ನಾಕರ ಕಾವ್ಯ ಶತಕ ವಾಚನ-ಪ್ರವಚನ

    ಮೂಡುಬಿದರೆ, ಅಕ್ಟೋಬರ್ 2, 2020: ಧವಲತ್ರಯ ಜೈನಕಾಶಿ ಟ್ರಸ್ಟ್ ಹಾಗೂ ಶ್ರೀ ದಿಗoಬರ ಜೈನ ಮಠದ ಜಂಟಿ ಆಶ್ರಯದಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಆಶೀರ್ವಾದಗಳೊಂದಿಗೆ ನೆರವೇರಿತು. ದೀಪ ಬೆಳಗಿಸಿ ಕಾರ್ಯಕ್ರಮ ಶ್ರೀ ಮಠದ ಭಟ್ಟಾರಕ ಭವನದಲ್ಲಿ ಉದ್ಘಾಟಿಸಿದ ಶ್ರ ಗಳವರು, “16ನೇ ಶತಮಾನದ ಶ್ರೇಷ್ಠ ಕವಿ ರತ್ನಾಕರವರ್ಣಿ ಸಾಂಗತ್ಯದ ಮೂಲಕ ಅಹಿಂಸಾ ಧರ್ಮದ ತತ್ತ್ವಗಳನ್ನು ಸರ್ವರಿಗೂ ಅರ್ಥವಾಗುವಂತೆ ಸುಂದರವಾಗಿ ತನ್ನ ಕೃತಿಯಲ್ಲಿ ರಚಿಸಿ ಲೋಕ ವಿಖ್ಯಾತ ನಾಗಿದ್ದಾನೆ. ಕವಿ ಕೃತಿ ಒಂದು ಪ್ರದೇಶ ಸಮುದಾಯ ಕ್ಕೆ ಸೇರಿರದೆ ಇಡೀ ಸಾಹಿತ್ಯ ಜಗತ್ತಿಗೆ ಸೇರಿದವನು. ಕವಿಗಳು ಒಂದು ಸಮುದಾಯದ ಧ್ವನಿ ಯಾಗಿರದೆ ಸರ್ವರಿಗೂ ಸಂಬಂಧ ಪಟ್ಟವರು ಎಂದು ತಿಳಿಸಿ, ರತ್ನಾಕರ ಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮ ಎಲ್ಲೆಡೆ ಜರುಗಲಿ ಎಂದು ಆಶಯ ವ್ಯೆಕ್ತಪಡಿಸಿದರು. ವ ದ್ವಾಂಸ ಮೋಹನ್ ಕುಮಾರ್ ಮಹಾಕವಿ ರತ್ನಾಕರವರ್ಣಿಯ 100ನೇ ರತ್ನಾಕರ ಶತಕ ಕಾವ್ಯ ವಾಚನ ಮತ್ತು ಪ್ರವಚನವನ್ನು ವಿದ್ಯಾವಾಚಸ್ಪತಿ ಡಾ ಎಚ್. ಪಿ ಮೋಹನ್ ಕುಮಾರ್ ಶಾಸ್ತ್ರಿ, ಮಂಡ್ಯ ರತ್ನಾಕರ ಕಾವ್ಯ ವಾಚನ ಪ್ರವಚನ ಮಾಡಿ ಕರ್ನಾಟಕದಲ್ಲಿ ದೇಶ ವಿದೇಶದಲ್ಲಿ ಧರ್ಮ ಜಾಗೃತಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಶ್ರೀಮತಿ ನೀರಿಕ್ಷಾ ಜೈನ್, ಪದ್ಮಪ್ರಿಯ ರತ್ನಾಕರ ಗೀತೆ ಹಾಡಿದರು, ಶ್ವೇತಾ ಜೈನ್ ವಕೀಲರು ಸನ್ಮಾನ ಪತ್ರ ವಾಚಿಸಿದರು.

    ಪ್ರೊ ಅಜಿತ್ ಪ್ರಸಾದ್, ತಮ್ಮ ಪ್ರಧಾನ ಭಾಷಣದಲ್ಲಿ ರತ್ನಾಕರ ಭಕ್ತಿ ಪಂಥದ ಚಳುವಳಿ ಕಾಲದಲ್ಲಿ ಭರತೇಶ ವೈಭವ ಶತಕ ತ್ರಯ, ಕೀರ್ತನಗಳ ಮೂಲಕ ಜೈನಧರ್ಮದ ಸಿದ್ದಾoಥಗಳನ್ನು ಉತ್ತಮವಾಗಿ ರಚಿಸಿ ಪ್ರಚಾರ ಮಾಡಿದ ಮಹಾ ಕವಿ ಎಂದರು. ಡಾ. ಎಸ್. ಪಿ. ವಿದ್ಯಾಕುಮಾರ್ ಪ್ರಸ್ತಾವನೆಯಲ್ಲಿ ರತ್ನಾಕರ ವರ್ಣಿಯ ಹುಟ್ಟು, ಕೃತಿ, ಕರ್ತೃ ಪರಿಚಯ ಮಾಡಿದರು.
    ಶತಕ ಕಾವ್ಯ ವಾಚನ ಪ್ರವಚನ ನೆರವೇರಿಸಿ ಎಚ್ ಪಿ ಮೋಹನ್ ಕುಮಾರ್ ಮಾತನಾಡಿ ರತ್ನಾಕರ ಕಾವ್ಯ ಸುಂದರ ತತ್ತ್ವಾರ್ಥಗಳಿಂದ ಒಳಗೊಂಡಿದೆ ಶಾಂತ ರಸದ ಮೂಲಕ ಮೋಕ್ಷ ಸಾದಿಸುವ ವಿಚಾರ ಮಹಾಕವಿ ತಮ್ಮ ಕೃತಿಯಲ್ಲಿ ಅಳವಡಿಸಿ ಕೊಂಡಿದ್ದಾನೆ ಎಂದರು. ಅವರನ್ನು ಅಂಧ್ರ ಪ್ರದೇಶ ಅಮರಾಪುರದ ಮದನ್ ಪಂಡಿತ್, ನೆಲೆ ನೆಲೆ ಉದಯ ಪಂಡಿತ್, ಹಿರಿಯ ಸಂಘಟಕ ಸಾಹಿತಿ ರವಿರಾಜ್ ಮೂಡುಬಿದಿರೆ, ಡಾಕ್ಟರೇಟ್ ಪಡೆದ ಪ್ರಭಾತ್ ಬಲ್ನಾಡುಪೇಟೆ, ಉಪನ್ಯಾಸಕ ನೇಮಿರಾಜ್ ಇವರಿಗೆ ಸ್ವಾಮೀಜಿ ಗಳವರು ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ), ಶ್ರೀ ಜೈನಮಠದ ವತಿಯಿಂದ ಸನ್ಮಾನ ಮಾಡಿ ಹರಸಿದರು. ಅತಿಥಿಗಳಾಗಿ ಮಾಜಿ ಸಚಿವ ಶ್ರೀ ಕೆ.ಅಭಯಚಂದ್ರ ಜೈನ್, ಬ್ಸದಿ ಮುಕ್ತೇಸರ ಪಟ್ಟಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.
    ನಂತರ ಕುಮಾರಿ ಅನುಷಾ, ಕುಮಾರಿ ಶ್ರವಣ ಇವರ ಭರತನಾಟ್ಯ ಕಾರ್ಯಕ್ರಮ ನೆರವೇರಿತು. ಶ್ರೀ ನೇಮಿರಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕು. ಪ್ರಮೇಯಿ ಕು. ಖ್ಯಾತಿ ಪ್ರಾರ್ಥನೆ ಮಾಡಿದರು. – ಶ್ರೀ ಸಂಜಯಂಥ ಕುಮಾರ್ ಶೆಟ್ಟಿ, ವ್ಯೆವಸ್ಥಾಪಕರು ಧವಲ ತ್ರಯ ಟ್ರಸ್ಟ್ ಹಾಗೂ ಶ್ರೀ ದಿಗಂಬರ ಜೈನಮಠ ಮೂಡುಬಿದಿರೆ

    error: Jain Heritage Centres - Celebrating Jain Heritage.....Globally!