Skip to content
Home » ಕನ್ನಡ » ಸುದ್ದಿ-ಸಮಾಚಾರ » ಬೆಣಿವಾಡ ಗ್ರಾಮದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ

ಬೆಣಿವಾಡ ಗ್ರಾಮದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ

    ಹುಕ್ಕೇರಿ ತಾಲ್ಲೂಕಿನ ಬೆಣಿವಾಡ ಗ್ರಾಮದಲ್ಲಿ 9ನೇ ಶತಮಾನದಲ್ಲಿ ನಿರ್ಮಿಸಲಾದ ಸುಂದರವಾದ 1008 ಭಗವಾನ ಪಾರ್ಶ್ವನಾಥ  ಮೂರ್ತಿ ಗ್ರಾಮದಲ್ಲಿ ಒಂದೂ ಜೈನ ಮನೆತನ ಗಳಿಲ್ಲದ್ದರಿಂದ ಕೆಲವು ಅಂಗಾಗಗಳು ನಾಶವಾಗಿದ್ದವು.

    ಹುಕ್ಕೇರಿ, ಜನವರಿ ೩೧, ೨೦೧೬: ಹುಕ್ಕೇರಿ: ತಾಲ್ಲೂಕಿನ ಬೆಣಿವಾಡ ಗ್ರಾಮದಲ್ಲಿ 9ನೇ ಶತಮಾನದಲ್ಲಿ ನಿರ್ಮಿಸಲಾದ ಸುಂದರವಾದ 1008 ಭಗವಾನ ಪಾರ್ಶ್ವನಾಥ  ಮೂರ್ತಿ ಗ್ರಾಮದಲ್ಲಿ ಒಂದೂ ಜೈನ ಮನೆತನ ಗಳಿಲ್ಲದ್ದರಿಂದ ಕೆಲವು ಅಂಗಾಗಗಳು ನಾಶವಾಗಿದ್ದವು. ತಾಲ್ಲೂಕಿನ ಜೈನ ಸಮಾಜದವರು ಒಗ್ಗೂಡಿ ಜೈನ ಬಸದಿಯ ಜೀರ್ಣೋದ್ಧಾರ ಹಾಗೂ ಮೂರ್ತಿಗೆ ವಜ್ರಲೇಪನ ಮಾಡಿ ಫೆ. 3 ರಿಂದ 7ರವರೆಗೆ ನಡೆಯಲಿರುವ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

    ವಜ್ರಲೇಪನ ಮಾಡಿದ  1008 ಭಗವಾನ ಪಾರ್ಶ್ವನಾಥ  ಮೂರ್ತಿಯನ್ನು ತಾಲ್ಲೂಕಿನ ಬಸ್ತವಾಡ ಗ್ರಾಮದ ಜೈನ ಬಸದಿಯಲ್ಲಿ ಇಡಲಾಗಿತ್ತು. ಮೂರ್ತಿ ಯನ್ನು ಸಕಲ ವಾದ್ಯಮೇಳ ಹಾಗೂ ಮಹಿಳೆಯರ ಪೂರ್ಣಕುಂಭದೊದಿಗೆ ಬಸ್ತವಾಡದಿಂದ ಬೆಣಿವಾಡ ಗ್ರಾಮಕ್ಕೆ ಭವ್ಯ ಮೆರವಣಿಗೆಯೊಂದಿಗೆ ಬೆಳ್ಳಿ ರಥ ದಲ್ಲಿ ಪ್ರತಿಷ್ಠಾಪನೆಗಾಗಿ ತರಲಾಯಿತು.

    ಮುನಿ 108 ಕುಲರತ್ನಭೂಷಣ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಯುವ ಧುರೀಣ ಮಹಾವೀರ ನಿಲಜಗಿ ಹಾಗೂ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಸಮಿತಿ ಸದಸ್ಯರ ನೇತೃತ್ವದಲ್ಲಿ ಚಾಲನೆ ಮಾಡಿದ್ದಾರೆ. ಈ ಮೊದಲು 2009ರಲ್ಲಿ ಅವರು ಬೆನಿವಾಡ ಗ್ರಾಮಕ್ಕೆ ಬಂದಾಗ ಮೂರ್ತಿಯನ್ನು ಬೇರೆಡೆ ಸ್ಥಳಾಂತರಿಸಲು ಗ್ರಾಮಸ್ಥರನ್ನು ಕೇಳಿಕೊಂಡಾಗ ಅದಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಲಿಲ್ಲ. ಈಗ ಗ್ರಾಮಸ್ಥರ ಹಾಗೂ ಜೈನ ಬಾಂಧವರ ಸಹಾಯ ಸಹಕಾರದೊಂದಿಗೆ ಫೆಬ್ರುವರಿ 3ರಿಂದ 7 ರ ವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನೆರವೇರಲಿದೆ.

    ಕಾರ್ಯಕ್ರಮದ ನಿಮಿತ್ತ ಆಯೋಜಿಸಲಾದ  ಚಿಕ್ಕ ಮಕ್ಕಳ ಭಾಷಣ, ರೈತ ಗೀತೆಗಳನ್ನು ಕೇಳಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನ ಮಂತ್ರ ಮುಗ್ಧರಾದರು. ಬೆಣಿವಾಡ ಗ್ರಾಮದಲ್ಲಿ ಜೈನ ಕುಟುಂಬಗಳಿಲ್ಲದಿ ದ್ದರೂ ಉಳಿದ ಎಲ್ಲ ಸಮಾಜದವರು ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸಹಕರಿಸುತ್ತಿದ್ದಾರೆ.

    ಎಸ್.ಡಿ.ಎಮ್.ಸಿ ಅಧ್ಯಕ್ಷ ಎಂ.ಎಂ. ಕೊಳವಿಯವರ  ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯ ಹಾಗೂ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯ ಮಹಾಲಿಂಗ ಸನದಿ ಆಗಮಿಸಿದ್ದರು.

    ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಯಜಮಾನರಾದ  ವಿಜಯಮಾಲಾ ಹಾಗೂ ವಸಂತ ನಿಲಜಗಿ, ಐ..ಆರ್. ಪರಮಾಜ, ಎಂ.ಎಸ್.ನಾಯಿಕ, ಗ್ರಾಮ ಪಂಚಾಯ್ತಿ ಅದ್ಯಕ್ಷ  ಎಂ.ಎಸ್.ನಾಯಿಕ ಸೇರಿದಂತೆ ಹೆಬ್ಬಾಳ, ಬಸ್ತವಾಡ, ಎಲಿಮುನ್ನೋಳಿ, ಯರನಾಳ, ಮಸರಗುಪ್ಪಿ, ಹೊಸೂರ,  ಹಾಗೂ ಇನ್ನಿತರ ಗ್ರಾಮಗಳ ನೂರಾರು  ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು. ಪ್ರಧಾನ ಗುರು ಸಿ.ಆರ್.ಬಡಿಗೇರ ಸ್ವಾಗತಿಸಿದರು. ಎಸ್.ಎಸ್ ಚಿಕ್ಕಮಠ ನಿರೂಪಿಸಿದರು. ಎಂ.ಎ.ಬಡಕುಂದ್ರಿ ವಂದಿಸಿದರು.

    – ಕೃಪೆ: ಪ್ರಜಾವಾಣಿ

    error: Jain Heritage Centres - Celebrating Jain Heritage.....Globally!