Home » Haveri

Haveri

ಹಾವೇರಿ : ಜೈನ ಸಮಾವೇಶದಲ್ಲಿ ಪೆಂಡಲ್ ಕುಸಿದು 12 ಮಂದಿಗೆ ಗಾಯ

ಹಾವೇರಿ, ಏಪ್ರಿಲ್ 5, 2017: ಜೈನ ಸಮಾವೇಶದ ಪಂಚಕಲ್ಯಾಣ ಪ್ರತಿಷ್ಠಾನ ಮಹಾಮಹೋತ್ಸವ ನಡೆಯುತ್ತಿರುವಾಗ ಬಿರುಗಾಳಿ ದುರಂತ ಸಂಭವಿಸಿ 12 ಜನರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅರಟಳಾ ಗ್ರಾಮದಲ್ಲಿ ನಡೆದಿದೆ.

ಇಂದು ಜೈನ ಸಮಾವೇಶಕ್ಕೆ ಜಿಲ್ಲೆಯಿಂದ ನೂರಾರು ಜನರು ಆಗಮಿಸಿದ್ದರು. ಸಮಾವೇಶ ಪ್ರಾರಂಭವಾಗಿ ಒಂದು ತಾಸು ಕಳೆಯುವದರೊಳಗೆ ಬಿರುಗಾಳಿ ಬೀಸಿ ಬಿರುಗಾಳಿಯಿಂದಾಗಿ ಹಾಕಲಾಗಿದ್ದ ಪೆಂಡಾಲ್ ಮುಗುಚಿ ಬಿದ್ದಿದೆ. ಸಮಾವೇಶಕ್ಕೆ ಬಂದಿದ್ದ ಜನರು ಪೆಂಡಲ್ ಒಳಗಡೆಯೇ ಸಿಲುಕಿದ್ದಾರೆ.

ಉಮೇಶ ಪದ್ಮಪ್ಪ ತವಪ್ಪನವರ್, ಪ್ರಕಾಶ ಬೀಡಿ, ನೇಮಚಂದ್ರ ದೇವೆಂದ್ರಪ್ಪ ಸೇರಿದಂತೆ 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರಿ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. – Courtesy: dailyhunt.in

Read More »ಹಾವೇರಿ : ಜೈನ ಸಮಾವೇಶದಲ್ಲಿ ಪೆಂಡಲ್ ಕುಸಿದು 12 ಮಂದಿಗೆ ಗಾಯ