Home » Uncategorized » ಜೈನ ಸಮಾಜಕ್ಕೆ ದೊಡ್ಡ ಆಘಾತ – ದಿಗಂಬರ ಜೈನ ಮಹಾಸಭಾದ ರಾಷ್ಟ್ರ‍ೀಯ ಅಧ್ಯಕ್ಷರಾದ ಶ್ರೀ ನಿರ್ಮಲ್ ಕುಮಾರ್ ಸೇಠಿಜಿ ಇನ್ನಿಲ್ಲ

ಜೈನ ಸಮಾಜಕ್ಕೆ ದೊಡ್ಡ ಆಘಾತ – ದಿಗಂಬರ ಜೈನ ಮಹಾಸಭಾದ ರಾಷ್ಟ್ರ‍ೀಯ ಅಧ್ಯಕ್ಷರಾದ ಶ್ರೀ ನಿರ್ಮಲ್ ಕುಮಾರ್ ಸೇಠಿಜಿ ಇನ್ನಿಲ್ಲ

ಜನನ: ೧ ಮಾರ್ಚ್ ೧೯೪೧
ಹುಟ್ಟಿದ ಸ್ಥಳ: ತಿನ್ಸುಕಿಯಾ. ಅಸ್ಸಾಂ
ತಂದೆ – ಶ್ರೀ ಹರಕ್ ಚಂದಜಿ ಸೇಠಿಜಿ
ತಾಯಿ – ಶ್ರೀಮತಿ ಸೋಹಿನಿ ದೇವಿಜಿ
ಮರಣ – ೨೭ ಏಪ್ರಿಲ್ ೨೦೨೧, ಮೊರಾದಾಬಾದ್, ಉತ್ತರ ಪ್ರದೇಶ.

  • ದಿಗಂಬರ ಜೈನ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅತಿ ದೀರ್ಘಕಾಲ (೧೯೪೧-೨೦೨೧) ಸೇವೆಸಲ್ಲಿಸಿದ ಮಹನೀಯರು.
  • ಜೈನ ಪರಂಪರೆ ಹಾಗೂ ಪುರಾತತ್ವದ ಸಂರಕ್ಷಣೆ, ಪ್ರಚಾರ, ಪ್ರಸಾರಕ್ಕೆ ಸಂಬಂಧಿಸಿದಂತೆ ಆವಿರತ ಸೇವೆ ಸಲ್ಲಿಸಿದ್ದಾರೆ. ಸುಮಾರು ಐದು ದಶಕಕ್ಕೂ ಹೆಚ್ಚುಕಾಲ ಜೈನಧರ್ಮದ ಸೇವೆಗಾಗಿ ತಮ್ಮ ಜೀವನವನ್ನು
    ಮುಡುಪಾಗಿಟ್ಟಿದ್ದರು.
  • ಅವರು ವಿದೇಶಗಳಲ್ಲಿ ಜೈನಧರ್ಮಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಲ್ಲದೆ ತಾವೂ ಕೂಡ ಹಲವಾರು ಯೋಜನೆಗಳನ್ನು ನೇರವಾಗಿ ಮುನ್ನಡೆಸಿದ್ದರು. ಶ್ರ‍ೀಲಂಕಾ, ಇಥಿಯೋಪಿಯಾ, ಆಫ್ರ‍ಿಕಾ, ಗ್ರೀಸ್, ಜರ್ಮನಿ, ನೇಪಾಳ, ಪೆರು (ದಕ್ಷಿಣ ಅಮೆರಿಕಾ), ಗ್ವಾಟೆಮಾಲಾ ಹಾಗೂ ಇತರ ದೇಶಗಳಲ್ಲಿ ಜೈನಧರ್ಮದ ಸಂಶೋಧನೆಯನ್ನು ಬೆಂಬಲಿಸಿದ್ದಾರೆ.
  • ಅವರ ನಿಧನಕ್ಕೆ ಹಲವಾರು ಜೈನ ಮುನಿಗಳು, ಮಾತಾಜಿಯರು, ಭಟ್ಟಾರಕರು, ವಿದ್ವಾಂಸರು, ಸಂಶೋಧಕರು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಿದ್ದಾರೆ.
  • ದೇವರು ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲೆಂದು ಹಾಗೂ ಆತ್ಮಕ್ಕೆ ಸದ್ಗತಿ ದೊರೆಯಲೆಂದು www.jainheritagecentres.com ತಂಡ ಪ್ರಾರ್ಥಿಸುತ್ತದೆ. 

ವಿಶ್ವದಾದ್ಯಂತ ದಿಂದ ಹಲವಾರು ಜನ ಕಂಬನಿಮಿಡಿದು ತಮ್ಮ ಸಂದೇಶವನ್ನು ಕಳುಹಿಸಿದ್ದಾರೆ. ನಮ್ಮ ವೆಬ್ಸೈಟ್ www.jainheritagecentres.comನಲ್ಲಿ ನಿರಂತರವಾಗಿ ಸೇರಿಸುತ್ತಿರುತ್ತೇವೆ. ತಮ್ಮ ಸಂದೇಶಗಳನ್ನು info@jainheritagecentres.com ಗೆ ಕಳುಹಿಸಬಹುದು.
ಅವರ ಕುರಿತ ವಿವರವಾದ ಬರಹ ಹಾಗೂ ಸಂತಾಪ ಸಂದೇಶಗಳನ್ನು ಓದಲು ಈ ಲಿಂಕ್ ಸಂದರ್ಶಿಸಿ – https://bit.ly/2PwYWYk